ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ ಇವರ ಅಮೃತವಚನಗಳು

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಆಜ್ಞಾಧಾರಕ ಶಿಷ್ಯ : ‘ಉನ್ನತರು ಒಂದೇ ಪ್ರಶ್ನೆಯನ್ನು ಅನೇಕ ಬಾರಿ ಕೇಳಿದರೂ ಶಿಷ್ಯನು ಪ್ರತಿಯೊಂದು ಸಮಯದಲ್ಲಿ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಆಜ್ಞಾಪಾಲನೆ ಎಂದು ನಮ್ರತೆಯಿಂದ ಉತ್ತರ ಕೊಟ್ಟರೆ ಮಾತ್ರ ಅವನು ಉತ್ತಮ ಶಿಷ್ಯನು. ಇದರಿಂದ ಶಿಷ್ಯನ ಮನೋಲಯವಾಗಲು ಸಹಾಯವಾಗುತ್ತದೆ.

೨. ಸಂತರ ಸಗುಣದಲ್ಲಿನ ಮತ್ತು ನಿರ್ಗುಣದಲ್ಲಿನ ಕಾರ್ಯ : ಸಂತರ ಕಾರ್ಯವು ದೇಹವಿರುವಾಗ ದೇವರ ಆಶೀರ್ವಾದದಿಂದ ಸಗುಣದಲ್ಲಿ ನಡೆಯುತ್ತದೆ, ಆದರೆ ದೇಹವಿಲ್ಲದಿರುವಾಗ ದೇವರ ಕೃಪೆಯಿಂದ ನಿರ್ಗುಣದಿಂದ ನಡೆಯುತ್ತದೆ.

೩. ವರ್ತಮಾನಕಾಲದಲ್ಲಿರುವ ಮಹತ್ವ : ಭೂತಕಾಲವನ್ನು ಮರೆಯಬೇಕು ಮತ್ತು ವರ್ತಮಾನಕಾಲವು ಗಮನದಲ್ಲಿಡಬೇಕು. ವರ್ತಮಾನಕಾಲದ ಕರ್ಮದ ಗತಿಯ ಮೇಲೆಯೇ ನಮ್ಮ ಭವಿಷ್ಯತ್ಕಾಲದ ಗೋಡೆಯು ಎದ್ದು ನಿಲ್ಲುತ್ತದೆ.’

– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ