ನವ ದೆಹಲಿ – ದೆಹಲಿಯ ‘ಮಜನು ಕಾ ಟಿಲಾ’ ಈ ಪ್ರದೇಶದಲ್ಲಿ ಪಾಕಿಸ್ತಾನದಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಹಿಂದೂಗಳ ವಸತಿ ಇದೆ. ೨೦೧೧ ರಲ್ಲಿ ಈ ಹಿಂದೂಗಳು ಭಾರತಕ್ಕೆ ಬಂದಿದ್ದರು. ಅಂದಿನಿಂದ ಅವರನ್ನು ಅನೇಕ ನಾಯಕರು ಬಂದು ವಿವಿಧ ಆಶ್ವಾಸನೆ ನೀಡಿದ್ದಾರೆ; ಆದರೆ ಅದರಲ್ಲಿನ ಯಾವುದೇ ಆಶ್ವಾಸನೆ ಪೂರ್ಣವಾಗಿಲ್ಲ, ಎಂದು ಈ ಹಿಂದೂಗಳು ಹೇಳಿದ್ದಾರೆ. ‘ಒಂದು ಕಡೆ ರೋಹಿಂಗ್ಯ ಮುಸಲ್ಮಾನ ನುಸುಳುಕೋರರಿಗೆ ಎಲ್ಲಾ ಸೌಲಭ್ಯ ಇರುವ ಮನೆಗಳು ನೀಡುವ ಚರ್ಚೆ ನಡೆಯುತ್ತಿರುವಾಗ ನಮಗೆ ಮಾತ್ರ ಏನು ನೀಡಿಲ್ಲ’, ಎಂದು ಅವರು ಖೇದ ವ್ಯಕ್ತಪಡಿಸಿದರು. ಈ ಸ್ಥಳದಲ್ಲಿ ೧೪೫ ಹಿಂದೂ ಕುಟುಂಬಗಳು ವಾಸಿಸುತ್ತಿದ್ದಾರೆ.
೧. ಸಿಂಧ ಪ್ರಾಂತದಲ್ಲಿ ಜಮೀನಿನ ಒಡೆಯನಾಗಿದ್ದರೂ ಹಿಂದೂಗಳು ಭಾರತದಲ್ಲಿ ಈಗ ಸಂಚಾರವಾಣಿಯ ಕವರ್ ಮಾರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಅವರ ಪ್ರಕಾರ, ಕಳೆದ ೧೦ ವರ್ಷಗಳಲ್ಲಿ ಸರಕಾರ ನಮಗೆ ಯಾವುದೇ ಸಹಾಯ ಮಾಡಿಲ್ಲ. ನೀರು, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳು ಸಹ ಪೂರೈಸಿಲ್ಲ. ನ್ಯಾಯಾಲಯದ ಆದೇಶದ ನಂತರ ೩ ತಿಂಗಳ ಹಿಂದೆ ವಿದ್ಯುತ್ ಹಾಗೂ ಕಳೆದ ವರ್ಷದಿಂದ ನೀರು ದೊರೆಯುತ್ತದೆ. ೧-೨ ಹಿಂದೂ ಸಂಘಟನೆಗಳು ಸಹಾಯ ಮಾಡಿದ್ದಾರೆಂದು ಅವರು ಹೇಳಿದರು.
೨. ‘ಪಾಕಿಸ್ತಾನದಿಂದ ವೀಸಾ ಸಿಕ್ಕಿದ್ದರಿಂದ ನಾವು ಭಾರತಕ್ಕೆ ಬರಲು ಸಾಧ್ಯವಾಯಿತು. ಅನೇಕರಿಗೆ ವೀಸಾ ಸಿಗದೇ ಇದ್ದರಿಂದ ಅವರು ಪಾಕಿಸ್ತಾನದಲ್ಲಿ ದೌರ್ಜನ್ಯ ಸಹಿಸುತ್ತಿದ್ದಾರೆ’, ಎಂದು ಕೆಲವರು ಹೇಳಿದರು.
೩. ಅವರಿಗೆ, ಅವರ ಛಾಯಾಚಿತ್ರ ಪತ್ರಿಕೆಯಲ್ಲಿ ಪ್ರಸಿದ್ಧವಾದರೆ ಪಾಕಿಸ್ತಾನವು ಅವರನ್ನು ಗುರುತಿಸಿ ಪಾಕಿಸ್ತಾನದಲ್ಲಿರುವ ಅವರ ಸಂಬಂಧಿಕರಿಗೆ ತೊಂದರೆ ಸಹಿಸಕೊಳ್ಳಬೇಕಾಗುತ್ತದೆ. ಈ ಭಯದಿಂದ ಇಲ್ಲಿಯ ಮಹಿಳೆಯರು ಪರ್ತಕರ್ತರಿಗೆ ತಮ್ಮ ಛಾಯಾ ಚಿತ್ರಗಳನ್ನು ತೆಗೆಯಲು ನಿರಾಕರಿಸಿದ್ದಾರೆ.
ಸಂಪಾದಕೀಯ ನಿಲುವುಭಾರತದಲ್ಲಿನ ಹಿಂದೂಗಳಿಗೆ ಸಹಾಯ ಮಾಡದಿರುವ ಸರಕಾರಿ ವ್ಯವಸ್ಥೆ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ಎಂದಾದರು ಸಹಾಯ ಮಾಡುವರೇ ? |