ಖೇಡಾ(ಗುಜರಾತ)ದಲ್ಲಿ ಮುಸಲ್ಮಾನರ ಲ್ಯಾಂಡ್ ಜಿಹಾದ !
ಖೇಡಾ (ಗುಜರಾತ) – ಖೇಡಾ ಜಿಲ್ಲೆಯ ನಡಿಯಾದನಲ್ಲಿ ಲ್ಯಾಂಡ್ ಜಿಹಾದ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿಯ ಮತಾರ ತಾಲೂಕಿನಲ್ಲಿ ಮುಸಲ್ಮಾನ ಸಮಾಜದ ಜನರು ನಕಲಿ ದಾಖಲೆಪತ್ರಗಳ ಮೂಲಕ ೪೦೦ ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಖರೀದಿಸಿರುವುದು ಬಹಿರಂಗವಾಗಿದೆ. ೨೦೧೨ ರಿಂದ ೨೦೧೨ ವರೆಗೆ ಭೂಮಿಯ ಖರೀದಿ – ಮಾರಾಟದಡಿ ೬೨೮ ಸಂದೇಹಾಸ್ಪದ ಪ್ರಕರಣಗಳು ಬೆಳಕಿಗೆ ಬಂದಿವೆ. ಸರಕಾರವು ೫೦೦ ಕ್ಕಿಂತಲೂ ಹೆಚ್ಚು ಜನರಿಗೆ ನೊಟೀಸ್ ಕಳುಹಿಸಿ ಈ ಸಂದರ್ಭದಲ್ಲಿ ಸಾಕ್ಷಿಗಳನ್ನು ನೀಡುವಂತೆ ಆದೇಶ ನೀಡಿದೆ. ಜೊತೆಗೆ ಸರಕಾರವು ೨೫೦ ಪ್ರಕರಣದಲ್ಲಿ ಕಾನೂನಿನ ಆಧಾರದೊಂದಿಗೆ ಭೂಮಿಯನ್ನು ಜಪ್ತಿಪಡಿಸಿಕೊಂಡಿದೆ.
एक ही समुदाय ने हथिया ली ₹400 करोड़ की 2000 बीघा जमीन, मंदिर का बदल दिया नाम: गुजरात के खेड़ा में ‘लैंड जिहाद’ पर सरकार सख्त#Gujarat #LandJihadhttps://t.co/xq3mbDWgIr
— ऑपइंडिया (@OpIndia_in) August 8, 2022
ಸಂಪೂರ್ಣ ಪ್ರಕರಣ ‘ಲ್ಯಾಂಡ್ ಜಿಹಾದ’ ! – ಗುಜರಾತ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ
ಈ ಪ್ರಕರಣದಲ್ಲಿ ರಾಜ್ಯದ ಕಂದಾಯ ಸಚಿವ ರಾಜೇಂದ್ರ ತ್ರಿವೇದಿಯವರು ಸ್ವತಃ ಮತಾರ ತಾಲೂಕಿನ ಕಾರ್ಯಾಲಯಕ್ಕೆ ಹೋಗಿ ೧ ಸಾವಿರ ೯೩೦ ಪ್ರಕರಣಗಳ ವಿಚಾರಣೆ ನಡೆಸುವಂತೆ ಆದೇಶಿಸಿದರು. ಹಾಗೆಯೇ ‘ಈ ಪ್ರಕರಣದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು’, ಎಂದು ಹೇಳಿದರು. ‘ಒಂದೆ ಧರ್ಮದ ಜನರು ಸಾಮೂಹಿಕವಾಗಿ ಭೂಮಿಯನ್ನು ಹೇಗೆ ಖರೀದಿಸುತ್ತಿದ್ದಾರೆ.?’, ಎನ್ನುವ ಪ್ರಶ್ನೆಯೂ ಅವರು ಎತ್ತಿದರು. ‘ಇದರ ವಿಚಾರಣೆಯನ್ನು ನಡೆಸಿ ‘ಅವರ ಉದ್ದೇಶ ಏನು ಇತ್ತು?’, ಎಂದು ಪರಿಶೀಲಿಸಲಾಗುವುದು. ‘ಅದಕ್ಕಾಗಿ ಅವರಿಗೆ ಹಣ ಎಲ್ಲಿಂದ ಬಂದಿತು ?, ಯಾರು ನೀಡಿದರು ?’ ಈ ಬಗ್ಗೆಯೂ ವಿಚಾರಣೆಯನ್ನೂ ಮಾಡಲಾಗುವುದು. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದಲೂ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಈ ಸಂಪೂರ್ಣ ಪ್ರಕರಣ ‘ಲ್ಯಾಂಡ್ ಜಿಹಾದ’ ಆಗಿದೆ ಎನ್ನುವುದು ಗಮನಕ್ಕೆ ಬರುತ್ತದೆ. ‘ಇಲ್ಲಿಯ ಪ್ರಾಣನಾಥ ಮಹಾದೇವ ದೇವಸ್ಥಾನದ ಭೂಮಿ ಅಭಿವೃದ್ಧಿಗಾಗಿ ದೇವಸ್ಥಾನದ ಹೆಸರನ್ನೇ ಬದಲಾಯಿಸಲಾಗಿದೆ’, ಎಂದೂ ಸಹ ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಷ್ಟುದೊಡ್ಡ ಪ್ರಮಾಣದಲ್ಲಿ ಹಗರಣವಾಗುವವರೆಗೆ ಸರಕಾರಿ ಅಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೊಲೀಸರು ಮಲಗಿದ್ದರೇ ? |