ಪಾಕಿಸ್ತಾನದಲ್ಲಿ ಸಿಖ್ ಯುವತಿಯ ಅಪಹರಣ, ಮತಾಂತರ ಮತ್ತು ಮುಸಲ್ಮಾನನೊಂದಿಗೆ ವಿವಾಹ ಮಾಡಿಸಿದ ಘಟನೆ !

  • ಸಿಖ್ಖರಿಂದ ‘ರಸ್ತೆ ಬಂದ’ ಪ್ರತಿಭಟನೆ

  • ಅಪಹರಣದ ಹಿಂದೆ ಸರಕಾರದ ಕೈವಾಡ

ಬುನೇರ (ಪಾಕಿಸ್ತಾನ) – ಪಾಕಿಸ್ತಾನದಲ್ಲಿರುವ ಖೈಬರ ಪಖ್ತೂನ ಪ್ರಾಂತ್ಯದ ಬುನೇರ ಜಿಲ್ಲೆಯಲ್ಲಿ ೨೦ ಅಗಸ್ಟ ರಂದು ಗುರುಚರಣ ಸಿಂಹ ಈ ಸಿಖ್ ವ್ಯಕ್ತಿಯ ಪುತ್ರಿ ಟೀನಾ ಕೌರ ಇವಳನ್ನು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು ತೋರಿಸಿ ಅಪಹರಣ ಮಾಡಲಾಯಿತು. ತದನಂತರ ಅವಳನ್ನು ಬಲವಂತವಾಗಿ ಮತಾಂತರಗೊಳಿಸಿ ಅಪಹರಿಸಿದ ಮುಸಲ್ಮಾನ ಯುವಕನೊಂದಿಗೆ ವಿವಾಹ ಮಾಡಲಾಯಿತು. ಈ ಘಟನೆಯಿಂದ ಸಿಖ್ ನಾಗರೀಕರು ಇಲ್ಲಿ ‘ರಸ್ತೆ ಬಂದ್’ ಪ್ರತಿಭಟನೆ ಮಾಡಿದರು. ಯುವತಿ ಮರಳಿ ಸಿಗುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ಸಿಖ್ಖರು ಆರೋಪ ಮಾಡುತ್ತಾ, ನಾವು ಪಾಕಿಸ್ತಾನಿ ಮತ್ತು ವಿದೇಶಿ ನಾಗರಿಕರಿಗೆ ಹೇಳುವುದೇನೆಂದರೆ, ಇಲ್ಲಿ ನಮ್ಮ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಮ್ಮ ಮೇಲೆ ಆಕ್ರಮಣಗಳಾಗುತ್ತಿವೆ. ಪುತ್ರಿಯ ಅಪಹರಣದಲ್ಲಿ ಸರಕಾರದ ಕೈವಾಡವೂ ಇದೆ. ದಿನವಿಡೀ ನಮ್ಮ ದಿಕ್ಕು ತಪ್ಪಿಸಲಾಗುತ್ತಿತ್ತು. ಮತ್ತು ಇನ್ನೊಂದೆಡೆ ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿತ್ತು. ಪೊಲೀಸರು ಇದರ ದೂರನ್ನು ಸಹ ದಾಖಲಿಸಿಕೊಂಡಿಲ್ಲ. ಸರಕಾರದ ಸಹಾಯದಿಂದ ಯುವತಿಯಿಂದ ಕೆಲವು ಕಾಗದ ಪತ್ರಗಳ ಮೇಲೆ ಬಲವಂತವಾಗಿ ಸಹಿ ಮಾಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಪಂಜಾಬ ಮತ್ತು ಕೆನಡಾದ ಖಲಿಸ್ತಾನವಾದಿಗಳು ಈ ವಿಷಯದಲ್ಲಿ ಏಕೆ ಸುಮ್ಮನಿದ್ದಾರೆ? ಅಥವಾ ಅವರಿಗೆ ಅದು ಒಪ್ಪಿಗೆ ಇದೆಯೋ?