ಪಂಜಾಬ್‌ನಲ್ಲಿ ೫ ತಿಂಗಳಲ್ಲಿ ೧೩೫ ಭ್ರಷ್ಟ ಅಧಿಕಾರಿಗಳ ಬಂಧನ

ಚಂಡೀಗಡ – ಪಂಜಾಬ್‌ನಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಳೆದ ೫ ತಿಂಗಳಲ್ಲಿ ೧೩೫ ಸರಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು ೨೦೦ ಜನರನ್ನು ಬಂಧಿಸಲಾಗಿದೆ. ರಾಜ್ಯದ ಕಾವಲು ಪಡೆಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಲಂಚ ಪಡೆದ ಪ್ರಕರಣದಲ್ಲಿ ಬಂಧಿತರಾಗಿರುವ ೧೩೫ ಅಧಿಕಾರಿಗಳ ಪೈಕಿ ೨೫ ಮಂದಿ ಗೆಜೆಟೆಡ್ (ಕ್ಲಾಸ್ ಒನ್) ಅಧಿಕಾರಿಗಳಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಭಾರತೀಯ ಆಡಳಿತ ಸೇವೆ (ಐ.ಎ.ಎಸ್. ಹುದ್ದೆಯ) ಒಬ್ಬ ಅಧಿಕಾರಿ ಮತ್ತು ೩೦ ಪೊಲೀಸ್ ಅಧಿಕಾರಿಗಳು ಸಹಭಾಗಿಯಾಗಿದ್ದಾರೆ. ಪಂಜಾಬ್‌ನಲ್ಲಿ ಆಪ್ ಸರಕಾರ ಅಧಿಕಾರಕ್ಕೆ ಬಂದ ನಂತರ, ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಕೈಗೊಂಡಿತ್ತು. ಈ ಅಭಿಯಾನದ ಭಾಗವಾಗಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಾಲಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿ ಬಂಧಿಸಲಾಗಿತ್ತು ಮತ್ತು ಆಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ಸಾಧುಸಿಂಹ ಧರ್ಮಸೋತ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಸಂಪಾದಕೀಯ ನಿಲುವು

ಬಂಧಿತ ಭ್ರಷ್ಟ ಅಧಿಕಾರಿಗಳ ಸಂಖ್ಯೆ ಇಷ್ಟಿದ್ದರೆ, ಬಂಧನ ಆಗದಿರುವವರ ಸಂಖ್ಯೆ ಎಷ್ಟಿರಬಹುದು, ಯೋಚಿಸದಿರುವುದೇ ಉತ್ತಮ ! ಆಡಳಿತ ವ್ಯವಸ್ಥೆಯು ಭ್ರಷ್ಟಮಯವಾಗಿ ಮಾರ್ಪಟ್ಟಿರುವುದರ ಸೂಚನೆಯಾಗಿದೆ !