ದೇಶದಲ್ಲಿ ಕ್ರೈಸ್ತರ ಮೇಲೆ ತಥಾ ಕಥಿತ ದಾಳಿ ತಡೆಯುವುದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ

ದೇಶದಲ್ಲಿ ಕ್ರೈಸ್ತರ ಮೇಲೆ ದಾಳಿಗಳು ನಡೆಯುತ್ತಿವೆ, ಇದೇ ಸುಳ್ಳು ಮಾಹಿತಿ ! – ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರತಿಪಾದನೆ

ನವ ದೆಹಲಿ – ದೇಶದಲ್ಲಿ ಕ್ರೈಸ್ತರ ಮೇಲೆ ದಾಳಿಗಳಾಗುತ್ತಿವೆ. ಅದನ್ನು ತಡೆಯಲು ಕೇಂದ್ರ ಸರಕಾರಕ್ಕೆ ಆದೇಶ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಇದರ ಬಗ್ಗೆ ಕೇಂದ್ರ ಸರಕಾರ ಅದರ ಅಭಿಪ್ರಾಯ ಮಂಡಿಸುತ್ತಾ, ‘ಈ ಸಂದರ್ಭದಲ್ಲಿ ನೀಡಲಾಗಿರುವ ಮಾಹಿತಿ ಸುಳ್ಳಾಗಿದ್ದು ಮತ್ತು ಯಾವುದೋ ದುರುದ್ದೇಶದಿಂದ ದಾಖಲಿಸಲಾಗಿದೆ. ಇದರಲ್ಲಿ ಕೇವಲ ಅನುಮಾನ ವ್ಯಕ್ತಪಡಿಸಲಾಗಿದೆ.’ ‘ನ್ಯಾಷನಲ್ ಸಾಲಿದೇರಿಟ್ ಫೋರಂ’, ‘ದಿ ಈವೆಜಿಲಿಕಲ್ ಫೆಲೋಶಿಪ್ ಆಫ್ ಇಂಡಿಯಾ’ ಮತ್ತು ಬೆಂಗಳೂರಿನ ಆರ್ಚ್ ಬಿಷಪ್ (ಮೇಲ್ದರ್ಜೆಯ ಕಾರ್ಯನಿರತ ಪಾದ್ರಿಗಳು) ಡಾ. ಪೀಟರ್ ಮಚಾಡೋ ಇವರು ಈ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗಿದ್ದು ಈ ಬಗ್ಗೆ ಆಗಸ್ಟ್ ೨೫ ರಂದು ವಿಚಾರಣೆ ನಡೆಯಲಿದೆ ಎಂದು ಹೇಳಿದೆ.

ಸರಕಾರವು, ಅರ್ಜಿದಾರರು ವಿವಿಧ ದೈನಿಕ ವಾರ್ತೆ, ಆನ್ಲೈನ್ ಮಾಹಿತಿ ಮತ್ತು ಖಾಸಗಿ ಸಂಸ್ಥೆ ಇವುಗಳಿಂದ ಪಡೆದಿರುವ ಮಾಹಿತಿಯ ಆಧಾರದ ಮೇಲೆ ಕ್ರೈಸ್ತರ ಮೇಲೆ ದಾಳಿ ನಡೆಯುವುದರ ಬಗ್ಗೆ ದಾವೆ ಮಾಡಿದ್ದಾರೆ. ವಿಚಾರಣೆಯಲ್ಲಿ, ಕ್ರೈಸ್ತರ ಮೇಲೆ ‘ಅವರು ಕ್ರೈಸ್ತರಾಗಿದ್ದಾರೆ’, ಆದ್ದರಿಂದ ದಾಳಿ ನಡೆದಿಲ್ಲ. ಹಾಗೂ ಉಲ್ಲೇಖಿಸಲಾಗಿರುವ ಘಟನೆಗಳು ಸುಳ್ಳಾಗಿವೆ. ವೈಯಕ್ತಿಕ ಸ್ತರದಲ್ಲಿ ನಡೆದಿರುವ ಘಟನೆಗೆ ಧಾರ್ಮಿಕ ಬಣ್ಣ ನೀಡಲಾಗಿದೆ ಎಂದು ತಿಳಿದು ಬಂದಿದೆ.