ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು !

  • ಅಮೇರಿಕಾದ ಸಂರಕ್ಷಣಾ ವಿಭಾಗದ ವರದಿಯಿಂದ ದೊರೆತ ಮಾಹಿತಿ

  • ಜಗತ್ತಿನಲ್ಲಿ ಅತ್ಯಾಧುನಿಕ ಕ್ಷಿಪಣಿಗಳ ಸಂಚಾಲನೆಯ ವ್ಯವಸ್ಥೆಯು ಕೇವಲ ಚೀನಾದ ಬಳಿ ಇದೆ !

ಬೀಜಿಂಗ (ಚೀನಾ) – ಚೀನಾವು ಕಾಣಿಸದೇ ದೂರದ ವರೆಗೆ ಹೋಗುವ, ಹಾಗೆಯೇ ಕಡಿಮೆ ಅಂತರದಲ್ಲಿ ಉಪಯೋಗಿಸಬಹುದಾದ ಪಾರಂಪರಿಕ ಕ್ಷಿಪಣಿಗಳನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡುತ್ತಿದೆ. ಅಮೇರಿಕಾದ ಸಂರಕ್ಷಣಾ ವಿಭಾಗವು ಪ್ರಸಾರ ಮಾಡಿರುವ ಒಂದು ವರದಿಯಿಂದ ಈ ಮಾಹಿತಿಯು ಬಹಿರಂಗವಾಗಿದೆ. ಈ ವರದಿಯ ಅನುಸಾರ ಚೀನಾದ ‘ಪೀಪಲ್ಸ್‌ ಲಿಬರೇಷನ್‌ ಆರ್ಮಿ’ಯ ಬಳಿ ಈಗ ಭೂಮಿ, ಹಾಗೆಯೇ ಸಮುದ್ರದ ಒಳಗಿನಿಂದ ಆಕ್ರಮಣ ಮಾಡಬಲ್ಲ ಕ್ಷಿಪಣಿಗಳಿವೆ. ಚೀನಾದ ಅತ್ಯಾಧುನಿಕ ಕ್ಷಿಪಣಿಗಳ ಕಾರ್ಯಕ್ರಮವು ಅಮೇರಿಕಾ ಹಾಗೂ ಭಾರತಕ್ಕೆ ಸಂಕಟವಾಗಬಹುದು, ಎಂದು ಈ ವರದಿಯಲ್ಲಿ ಹೇಳಲಾಗಿದೆ. ‘ಪೂರ್ವ ಲಡಾಖನಲ್ಲಿ ಚೀನಾ ಸೈನ್ಯದ ಹೆಚ್ಚುತ್ತಿರುವ ಸಿದ್ಧತೆಯು ಭಾರತಕ್ಕೆ ಸಂಕಟವಾಗಬಹುದು’, ಎಂದು ಈ ವರದಿಯಲ್ಲಿ ಹೇಳಲಾಗಿದೆ.
ವರದಿಯ ಅನುಸಾರ ಪಾರಂಪರಿಕ ಹಾಗೂ ಪರಮಾಣು ಕ್ಷಿಪಣಿಗಳ ಚಲಾವಣೆಯ ವ್ಯವಸ್ಥೆಯ ವಿಚಾರ ಮಾಡಿದರೆ ಚೀನಾದ ವ್ಯವಸ್ಥೆಯು ಅತ್ಯಂತ ಆಧುನಿಕವಾಗಿದೆ.

ಚೀನಾದ ಬಳಿ ಇರುವ ಅತ್ಯಂತ ಶಕ್ತಿಶಾಲಿ ‘ಕ್ರೂಜ’ ಕ್ರಿಪಣಿ !

ಹಿಂದೂ ಹಾಗೂ ಪ್ರಶಾಂತ ಮಹಾಸಾಗರಗಳ ಕ್ಷೇತ್ರದಲ್ಲಿ ಸುಮಾರು ೨ ಸಾವಿರ ಕ್ರಿಪಣಿಗಳನ್ನು ಹಾಕಲಾಗಿದೆ. ಈ ಕ್ಷಿಪಣಿಗಳಲ್ಲಿ ಕೆಲವು ಕ್ಷಿಪಣಿಗಳ ಕ್ಷಮತೆಯು ೧ ಸಾವಿರದ ೮೦೦ ಕಿ.ಮೀ. ವರೆಗೆ ಇದೆ. ಇಂದು ಚೀನಾದ ಬಳಿ ಅತ್ಯಂತ ಶಕ್ತಿಶಾಲಿ ‘ಕ್ರೂಜ್’ ಕ್ಷಿಪಣಿಯಿದೆ, ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಅಮೇರಿಕಾವನ್ನೂ ಗುರಿಯಾಗಿಸುವ ಕ್ಷಮತೆಯು ಚೀನಾಗೆ ದೊರೆತಿದೆ !

ಇದರೊಂದಿಗೆ ಚೀನಾದ ಬಳಿ ಎಲ್ಲಕ್ಕಿಂತ ಸಕ್ರೀಯ ಹಾಗೂ ಅತ್ಯುನ್ನತ ಕ್ಷಿಪಣಿಗಳ ವಿಕಾಸದ ಕಾರ್ಯಕ್ರಮವು ನಡೆಯುತ್ತಿದೆ. ಅದರೊಂದಿಗೆ ೭ ಸಾವಿರದಿಂದ ೧೫ ಸಾವಿರ ಕಿ.ಮೀ ವರೆಗೆ ಹಲ್ಲೆ ಮಾಡಬಹುದಾದ ಮಹಾದ್ವೀಪಗಳ ಬ್ಯಾಲಿಸ್ಟಿಕ್ ಕ್ಷಿಪಣಿಯಿದೆ. ಈ ಮಾಧ್ಯಮದಿಂದ ಚೀನಾಗೆ ಅಮೇರಿಕಾದ ಮುಖ್ಯಭೂಮಿಯನ್ನೂ ಗುರಿಯಾಗಿಸುವ ಕ್ಷಮತೆ ಲಭಿಸಿದೆ. ಚೀನಾದ ನೌಕಾದಳವು ನೀರಿನಿಂದಲೂ ಹಲ್ಲೆ ಮಾಡಬಹುದಾದ ಅತ್ಯಾಧುನಿಕ ಕ್ಷಿಪಣಿಗಳನ್ನು ಹಾಕುವ ಕಾರ್ಯವನ್ನೂ ಮಾಡುತ್ತಿದೆ.

ಸಂಪಾದಕೀಯ ನಿಲುವು

ಭಾರತವು ಚೀನಾದ ಜಾಗತಿಕ ಮಟ್ಟದಲ್ಲಿನ ಸೈನ್ಯ ಸಿದ್ಧತೆಯನ್ನು ಎದುರಿಸುವಷ್ಟು ಪ್ರಮಾಣದಲ್ಲಿ ತನ್ನ ಕ್ಷಮತೆಯನ್ನು ಹೆಚ್ಚಿಸುವುದು ಆವಶ್ಯಕವಾಗಿದೆ !