ನವ ದೆಹಲಿ – ಕೇಂದ್ರ ಸರಕಾರವು ಸಂಸತ್ತಿನ ಇತ್ತೀಚಿನ ಅಧಿವೇಶನದಲ್ಲಿ ಮಂಡಿಸಿದ ಮಾಹಿತಿಯ ಪ್ರಕಾರ, ೨೦೨೧-೨೦೨೨ರ ಅವಧಿಯಲ್ಲಿ ಬ್ಯಾಂಕ್‌ಗಳ ಸ್ವಯಂ ಪರಿಶೀಲನೆಯ ಸಮಯದಲ್ಲಿ ೨ ಸಾವಿರ ರೂಪಾಯಿಗಳ ೧೩ ಸಾವಿರದ ೬೦೪ ನಕಲಿ ನೋಟುಗಳು ಪತ್ತೆಯಾಗಿವೆ. ಇದಕ್ಕೆ ಹೋಲಿಸಿದರೆ, ೨೦೧೮-೧೯ ಮತ್ತು ೨೦೨೦-೨೧ರ ಅವಧಿಯಲ್ಲಿ ಈ ಅನುಪಾತವು ಕಡಿಮೆಯಿತ್ತು ಎಂದು ಸರಕಾರ ಹೇಳಿಕೊಂಡಿದೆ. ಮತ್ತೊಂದೆಡೆ ‘ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ’ದ ವಿವರಗಳ ಪ್ರಕಾರ, ೨೦೧೮ ರಿಂದ ೨೦೨೦ ರ ಅವಧಿಯಲ್ಲಿ ದೇಶದ ವಿವಿಧ ಸ್ಥಳಗಳಲ್ಲಿ ಪೊಲೀಸರು ನಡೆಸಿದ ದಾಳಿಗಳಲ್ಲಿ ನಕಲಿ ನೋಟುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ೨೦೧೮ರಲ್ಲಿ ೫೪ ಸಾವಿರದ ೭೭೬, ೨೦೧೯ರಲ್ಲಿ ೯೦ ಸಾವಿರದ ೫೬೬, ೨೦೨೦ರಲ್ಲಿ ೨ ಲಕ್ಷ ೪೪ ಸಾವಿರದ ೮೩೪ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
೨೦೧೬ ರಲ್ಲಿ ನೋಟಬಂದಿ ಮಾಡಿದ ನಂತರ, ಸರಕಾರವು ೨ ಸಾವಿರ ರೂಪಾಯಿಗಳ ಹೊಸ ನೋಟುಗಳನ್ನು ಪರಿಚಯಿಸಿತು; ಆದರೆ ಅದರಲ್ಲಿಯೂ ನಕಲಿ ನೋಟುಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ನಕಲಿ ನೋಟುಗಳ ಕಳ್ಳಸಾಗಣೆ ತಡೆಯಲು ಸರಕಾರ ಕಾನೂನು ರೂಪಿಸಿದೆ. ತನಿಖಾ ವ್ಯವಸ್ಥೆಯ ಸಹಾಯದಿಂದ ಹುಡುಕಾಟವನ್ನು ಸಹ ಮಾಡಲಾಗುತ್ತದೆ.
ಸಂಪಾದಕೀಯ ನಿಲುವುಭಾರತದ ಕರೆನ್ಸಿಯಲ್ಲಿ ನಕಲಿ ನೋಟುಗಳನ್ನು ತಡೆಗಟ್ಟುವ ಪ್ರಯತ್ನಗಳ ಹೊರತಾಗಿಯೂ ಪತ್ತೆಯಾಗುವುದು ಇದು ವ್ಯವಸ್ಥೆಗೆ ನಾಚಿಕೆಯ ಸಂಗತಿ ! |