ತಮಿಳುನಾಡಿನ ‘ಅಂಬೂರ್‌ ಬಿರಿಯಾನಿ ಮೇಳದಲ್ಲಿ’ ಗೋಮಾಂಸ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ !

ಅಸಮಾಧಾನಗೊಂಡ ತಮಿಳುನಾಡು ಪರಿಶಿಷ್ಟ ಜಾತಿ-ಪಂಗಡ ಆಯೋಗ

ತಿರುಪ್ಪತ್ತೂರ (ತಮಿಳುನಾಡು) – ತಮಿಳುನಾಡಿನ ಅಂಬೂರಿನಲ್ಲಿ ನಡೆಯಬೇಕಿದ್ದ ‘ಬಿರಿಯಾನಿ ಮೇಳದಲ್ಲಿ’ ಗೋಮಾಂಸವಿರುವ ಬಿರಿಯಾನಿಯನ್ನು (ಬೀಫ್ ಬಿರಿಯಾನಿ) ಸೇರಿಸದಂತೆ ತಿರುಪ್ಪತ್ತೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಸರಕಾರಿ ಕಾರ್ಯಕ್ರಮದಲ್ಲಿ ‘ಬೀಫ್ ಬಿರಿಯಾನಿ’ ಸೇರಿಸದಿರುವುದು ‘ತಾರತಮ್ಯ’ ಮಾಡಿದಂತೆ ಎಂದು ಕಿಡಿ ಕಾರಿದೆ. ಆಯೋಗವು ತಿರುಪ್ಪತ್ತೂರ ಜಿಲ್ಲಾಧಿಕಾರಿ ಅಮರ ಕುಶವಾಹಾ ಅವರಿಗೆ ‘ಶೋಕಾಸ್’ (ಕಾರಣ ನೀಡಿ) ನೋಟಿಸ್ ನೀಡಿದೆ.

ಈ ‘ಬಿರಿಯಾನಿ ಮೇಳ’ ಮೇ ತಿಂಗಳಲ್ಲಿ ನಡೆಯಬೇಕಿತ್ತು; ಆದರೆ ಈ ಬಗ್ಗೆ ವಿವಾದ ಎದ್ದಿತ್ತು. ಜಿಲ್ಲಾಡಳಿತವು ಭಾರಿ ಮಳೆಯ ಮುನ್ಸೂಚನೆಯ ಕಾರಣ ನೀಡಿ ಕಾರ್ಯಕ್ರಮವನ್ನು ಮುಂದೂಡಿತ್ತು.

ಸಂಪಾದಕೀಯ ನಿಲುವು

ಗೋಮಾತೆಯನ್ನು ಹಿಂದೂಗಳು ಪೂಜಿಸುತ್ತಾರೆ. ಸರಕಾರದ ನಡೆಸುವ ಉತ್ಸವದಲ್ಲಿ ಗೋಮಾಂಸವಿರುವ ಬಿರಿಯಾನಿ (‘ಬೀಫ್ ಬಿರಿಯಾನಿ’)ಯನ್ನು ಸೇರಿಸುವುದೆಂದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ !