ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು, ಅದೇ ನಿಮ್ಮ ಬೇಟೆಯಾಗಿರುವುದು ! – ಪ್ರಧಾನಿ ಮೋದಿ

ಇಂದು ನೀವು ದೇಶದ ಸುವರ್ಣ ಕಾಲವನ್ನು ಪ್ರವೇಶಿಸುತ್ತಿದ್ದೀರಿ. ರಾಷ್ಟ್ರದ ಅಮೃತ ಕಾಲದ ಹಾಗೆ ಇದು ನಿಮ್ಮ ಜೀವನದ ಅಮೃತ ಕಾಲವಾಗಿದೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ಆದರೆ ಜೀವನದಲ್ಲಿ ಸವಾಲುಗಳು ಇದ್ದೇ ಇರುವುದು. ಅದರಿಂದ ಪಲಾಯನ ಮಾಡುವರು ಅದಕ್ಕೆ ಬಲಿಯಾಗುವರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಮೊದಲು ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸಲಾಗುವುದು !(ಅಂತೆ)

ವಿಧಾನಸಭೆಯ ಮೊದಲ ಅಧಿವೇಶನದಲ್ಲಿಯೇ ಮತಾಂತರ ನಿಷೇಧ ಕಾನೂನನ್ನು ರದ್ದುಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬ ಹಿಂದೂದ್ರೋಹಿ ಹೇಳಿಕೆಯನ್ನು ಕಾಂಗ್ರೆಸ್‌ನ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ವಿಪಕ್ಷದ ನಾಯಕ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು.

‘ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ !’(ವಂತೆ)

ನಾನು ಜೀವಂತ ಇರುವ ವರೆಗೂ ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಲು ಬಿಡುವುದಿಲ್ಲ, ಎಂದು ತೆಲಂಗಾಣಾದ ಕಾಂಗ್ರೆಸ್ ನಾಯಕ ರಶೀದ್ ಖಾನ್ ಇವರು ಬೆದರಿಕೆಯೊಡ್ಡಿದರು.

ಪಾಕಿಸ್ತಾನವು ಇಸ್ಲಾಮಾಬಾದಿನಲ್ಲಿ ಭಾರತೀಯ ರಾಯಭಾರಿಯನ್ನು ಕರೆಸಿ ಕಳವಳ ವ್ಯಕ್ತ !

ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ರಾಯಭಾರಿಯನ್ನು ಕರೆಸಿ ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿದರೆನ್ನಲಾದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮದರ್ ತೆರೇಸಾ ಇವರ ಸಂಸ್ಥೆಯ ‘ವಿದೇಶಿ ಯೋಗದಾನದ ನೋಂದಣಿ’ಯ ನವೀಕರಣ ಅರ್ಜಿಯನ್ನು ತಳ್ಳಿಹಾಕಿದ ಕೇಂದ್ರೀಯ ಗೃಹ ಸಚಿವಾಲಯ

ಮದರ ತೆರೇಸಾ ಅವರು ಸ್ಥಾಪನೆ ಮಾಡಿರುವ ಸಂಸ್ಥೆಯ ‘ವಿದೇಶಿ ಕೊಡುಗೆ (ನಿಯಂತ್ರಣ) ಕಾನೂನಿ’ನಿಗನುಸಾರ ಆಗಿರುವ ನೋಂದಣಿಯ ನವೀಕರಣ ಮಾಡುವ ವಿಷಯದ ಅರ್ಜಿಯನ್ನು ಕೆಲವು ಪ್ರತಿಕೂಲ ಮಾಹಿತಿ ಸಿಕ್ಕಿರುವುದರಿಂದ ಡಿಸೆಂಬರ್ ೨೫ ರಂದು ಅದನ್ನು ನಿರಾಕರಿಸಲಾಗಿದೆ.

ಸರಪಂಚರು ೧೫ ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣದ ಭ್ರಷ್ಟಾಚಾರ ನಡೆಸಿದರೆ ಮಾತ್ರ ನನ್ನಲ್ಲಿ ದೂರು ನೀಡಿ !

ನನ್ನ ಬಳಿ ಸರಪಂಚರ ಭ್ರಷ್ಟಾಚಾರದ ಬಗ್ಗೆ ದೂರು ನೀಡಬೇಡಿ. ಒಬ್ಬ ಸರಪಂಚನು ೧೫ ಲಕ್ಷ ರೂಪಾಯಿಯ ವರೆಗೂ ಭ್ರಷ್ಟಾಚಾರ ಮಾಡುತ್ತಿದ್ದರೆ, ಆ ವಿಷಯವಾಗಿ ನನಗೆ ಹೇಳಬೇಡಿ

ಲುಧಿಯಾನಾ ಬಾಂಬ್‌ಸ್ಫೋಟದ ಮುಖ್ಯ ರೂವಾರಿ ಜಸವಿಂದರ ಸಿಂಹ ಮುಲತಾನಿ ಜರ್ಮನಿಯಲ್ಲಿ ಬಂಧನ

ಪಂಜಾಬಿನ ಲುಧಿಯಾನಾದ ನ್ಯಾಯಾಲಯದಲ್ಲಿ ಬಾಂಬ್ ಸ್ಫೋಟ ನಡೆಸಿರುವ ಪ್ರಕರಣದಲ್ಲಿ ಜರ್ಮನಿಯಲ್ಲಿ ಜಸವಿಂದರ ಸಿಂಹ ಮುಲತಾನಿ ಈ ಪ್ರಮುಖ ರೂವಾರಿಯನ್ನು ಬಂಧಿಸಲಾಗಿದೆ.

ರಾಜಸ್ಥಾನದಲ್ಲಿ ರಘುನಾಥ ಮಂದಿರದಲ್ಲಿನ ದೇವತೆಯ ವಿಗ್ರಹ ಕಳವು

ರಾಜಸ್ಥಾನದ ಬಗಡಿ ಊರಿನಲ್ಲಿ ರಘುನಾಥ ಮಂದಿರದ ಶ್ರೀರಘುನಾಥ ಮತ್ತು ಶ್ರೀ ಗಣೇಶ ಇವರ ವಿಗ್ರಹಗಳು ಹಾಗೂ ಬೆಳ್ಳಿಯ ಕಿರೀಟ ಮತ್ತು ಛತ್ರ ಇದನ್ನು ಕಳವು ಮಾಡಲಾಗಿದೆ.

ಉತ್ತರಪ್ರದೇಶದಲ್ಲಿ ದೇವಸ್ಥಾನದ ಸಮೀಪ ಮತಾಂಧರನ್ನು ಮದ್ಯಪಾನ ಮಾಡುವುದನ್ನು ತಡೆದಿದ್ದರಿಂದ ರಾ.ಸ್ವ. ಸಂಘದ ಕಾರ್ಯಾಲಯದ ಮೇಲೆ ಹಲ್ಲೆ !

೫೦ ರಿಂದ ೭೦ ಮತಾಂಧರು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು.

ಎರ್ನಾಕುಲಂ (ಕೇರಳ) ಇಲ್ಲಿ ಪ್ರವಾಸಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ.