Jhabua Conversion : ಝಾಬುವಾ (ಮಧ್ಯಪ್ರದೇಶ): ಹಿಂದೂಗಳ ಮತಾಂತರಕ್ಕೆ ಪ್ರಯತ್ನಿಸಿದ ಪಾದ್ರಿಗೆ ೫ ವರ್ಷದ ಜೈಲು ಶಿಕ್ಷೆ !

ಝಾಬುವಾ (ಮಧ್ಯಪ್ರದೇಶ) – ಬಡ ಹಿಂದುಗಳಗೆ ಹಣದ ಆಮಿಷ ತೋರಿಸಿ ಅವರನ್ನು ಮತಾಂತರಗೊಳಿಸಲು ರಮೇಶ ಎಂಬ ಪಾದ್ರಿಗೆ (ಕ್ರೈಸ್ತ ಧರ್ಮೋಪದೇಶಕ ) ಅಲ್ಲಿನ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜೇಂದ್ರ ಕುಮಾರ ಶರ್ಮಾ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾನೂನು ೨೦೨೧ರಡಿ ೫ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಹಾಗೂ ೧ ಲಕ್ಷ ೨೫ ಸಾವಿರ ರೂಪಾಯಿಯ ದಂಡ ಕೂಡ ವಿಧಿಸಲಾಗಿದೆ. ಆರೋಪಿ ಪಾದ್ರಿ ರಮೇಶ್ ಝಾಬುವಾ ಜಿಲ್ಲೆಯಲ್ಲಿನ ಕೆಲವು ಹಿಂದುಗಳಿಗೆ ಕರೆಸಿ ಅವರ ಮೇಲೆ ನೀರು ಸಿಂಪಡಿಸಿ ಅವರ ಮೇಲೆ ಕ್ರೈಸ್ತ ಧರ್ಮ ಸ್ವೀಕರಿಸುವದಕ್ಕಾಗಿ ಒತ್ತಡ ಹೇರಿದನು. ನೀವು ಕ್ರೈಸ್ತರಾದರೆ ಪ್ರತಿ ತಿಂಗಳಿಗೆ ೧ ಸಾವಿರ ರೂಪಾಯಿ ದೊರೆಯುವುದು ಮತ್ತು ಬೈಕ್ ಕೂಡ ಸಿಗುವುದು ಅಲ್ಲದೇ ಕುಟುಂಬದವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಗುವುದು ಎಂದು ಹೇಳಿದ್ದನು. ಸಂತ್ರಸ್ತ ಹಿಂದುಗಳು ಪಾದ್ರಿಯ ವಿರುದ್ಧ ರಾಣಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯ ವಿರುದ್ಧ ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ ೨೦೨೧ರ ಕಲಂ ೩,೫,೧೦(೨) ರಡಿ ದೂರು ದಾಖಲಿಸಿದ್ದರು.

ಸಂಪಾದಕೀಯ ನಿಲುವು

ಈಗ ಹಿಂದುಗಳು ಕೂಡ ಸ್ವಧರ್ಮದ ಶಿಕ್ಷಣ ಪಡೆದು ಧರ್ಮಾಭಿಮಾನ ಹೆಚ್ಚಿಸಬೇಕು, ಭವಿಷ್ಯದಲ್ಲಿ ಯಾರೂ ಅವರನ್ನು ಮತಾಂತರಗೊಳಿಸಲು ಧೈರ್ಯ ಮಾಡುವುದಿಲ್ಲ !