Orissa High Court : ನ್ಯಾಯ ಕುರುಡಾಗಿರುತ್ತದೆ; ಆದರೆ ನ್ಯಾಯಾಧೀಶರು ಕುರುಡಾಗಿರುವುದಿಲ್ಲ ! – ಒಡಿಸ್ಸಾ ಉಚ್ಚ ನ್ಯಾಯಾಲಯ

  • ನಕಲಿ ದಾಖಲೆ ಪ್ರಸ್ತುತಪಡಿಸಿರುವುದಕ್ಕೆ ಒಡಿಸ್ಸಾ ಉಚ್ಚ ನ್ಯಾಯಾಲಯದಿಂದ ನ್ಯಾಯವಾದಿಗೆ ಛೀಮಾರಿ !

  • ಅಪರಾಧದ ಸಮಯದಲ್ಲಿ ಆರೋಪಿ ಅಪ್ರಾಪ್ತ ಆಗಿರುವುದರ ನಕಲಿ ದಾಖಲೆ ಪೂರೈಸಿರುವುದು ಬಹಿರಂಗ !

ಕಟಕ (ಒಡಿಸ್ಸಾ) – ಒಂದು ಅಪರಾಧದಲ್ಲಿ ಸಹಭಾಗಿ ಆಗಿರುವ ಆರೋಪಿ ಅಪರಾಧದ ಸಮಯದಲ್ಲಿ ಅಪ್ರಾಪ್ತವಾಗಿದ್ದನು, ಇದನ್ನು ಹೇಳುವುದಕ್ಕಾಗಿ ಅವನ ನಕಲಿ ಶಾಲೆ ವರ್ಗಾವಣೆ ಪ್ರಮಾಣಪತ್ರ ನ್ಯಾಯಾಲಯದ ಎದುರು ಪ್ರಸ್ತುತಪಡಿಸಲಾಯಿತು. ಸಾಕ್ಷಿಯಿಂದ ಪರಸ್ಪರ ವಿರೋಧಿ ಸಾಕ್ಷಿ ನೀಡಿರುವುದರಿಂದ ಇದು ನ್ಯಾಯಾಲಯದ ಗಮನಕ್ಕೆ ಬರುತ್ತದೆ ಅವರು ಅರ್ಜಿದಾರರ ನ್ಯಾಯವಾದಿ ನಿತ್ಯಾನಂದ ಪಾಂಡ ಇವರಿಗೆ ಛೀಮಾರಿ ಹಾಕುತ್ತ, ನ್ಯಾಯ ಕುರುಡಾಗಿರಬಹುದು; ಆದರೆ ನ್ಯಾಯಾಧೀಶರು ಕುರುಡಾಗಿರುವುದಿಲ್ಲ. ಹಾಗೂ ನ್ಯಾಯ ವ್ಯವಸ್ಥೆ ಕಾನೂನಿನ ಸಮರ್ಥನೆ ಮಾಡುವುದಕ್ಕಾಗಿ ಕಾನೂನು ಉದ್ಯಮಿಗಳ ಸಮಗ್ರತೆಯ ಮೇಲೆ ಅವಲಂಬಿತವಾಗಿರುತ್ತದೆ. ಎಂದು ಹೇಳುತ್ತಾ ನ್ಯಾಯಮೂರ್ತಿ ಎಸ್.ಕೆ. ಸಾಹು ಇವರು ಮಧ್ಯಂತರ ಅರ್ಜಿ ತಳ್ಳಿ ಹಾಕಿದ್ದಾರೆ.

೧. ಒಂದು ಪ್ರಕರಣದಲ್ಲಿ ಅಪರಾಧ ಸಿದ್ಧ ಆಗಿರುವಾಗ ಸನಾತನ ಹೆಸ್ಸಾ ಹೆಸರಿನ ಅಪರಾಧಿ ನಕಲಿ ದಾಖಲೆ ಜಮಾ ಮಾಡಿ, ಅವನು ಅಪರಾಧದ ಸಮಯದಲ್ಲಿ ಅಪ್ರಾಪ್ತನಾಗಿದ್ದನು ಎಂದು ಹೇಳಲು ಪ್ರಯತ್ನಿಸುತ್ತಿದ್ದನು.

೨. ಇದರಿಂದ ಅವನಿಗೆ ಆಗಿರುವ ಶಿಕ್ಷೆ ಕಡಿಮೆ ಆಗಬಹುದು, ಎಂದು ಅವನ ಉದ್ದೇಶವಾಗಿತ್ತು. ಆದರೆ ದಾಖಲೆ ಪತ್ರದ ಸತ್ಯಾಸತ್ಯತೆ ಪರಿಶೀಲಿಸಿದಾಗ ವಿಪರ್ಯಾಸ ಬೆಳಕಿಗೆ ಬಂದಿದೆ.

೩. ಇದರಿಂದ ಐತಿಹಾಸಿಕ ನಿರ್ಣಯದ ಆಧಾರ ನೀಡುತ್ತಾ ನ್ಯಾಯಾಲಯವು ನ್ಯಾಯವಾದಿಗೆ ಸತ್ಯ ಖಾಯಂ ಗೊಳಿಸುವುದರ ಕುರಿತು ವತ್ತು ನೀಡಿದೆ. ಹಾಗೂ ಅನುಕೂಲ ತೀರ್ಪು ಪಡೆಯುವುದಕ್ಕಾಗಿ ನಕಲಿ ದಾಖಲೆಗಳನ್ನು ಪ್ರಸ್ತುತಪಡಿಸಲು ಹೆಚ್ಚುತ್ತಿರುವ ಪ್ರವೃತ್ತಿಯ ಕುರಿತು ಅಸಮಧಾನ ವ್ಯಕ್ತಪಡಿಸಿದೆ.

೪. ನ್ಯಾಯಮೂರ್ತಿ ಎಸ್. ಕೆ. ಸಾಹು ಇವರು, ಇಂತಹ ವಂಚನೆ ಮಾಡುವ ಪ್ರತಿಪಾದನೆಯಿಂದ ಕಾನೂನಿನಲ್ಲಿ ಉದ್ಯಮಿಗಳ ವಿಶ್ವಾಸಕ್ಕೆ ಹಾನಿ ಉಂಟಾಗುತ್ತದೆ ಮತ್ತು ನ್ಯಾಯ ವ್ಯವಸ್ಥೆಯ ಕಾರ್ಯಕಲಾಪದಲ್ಲಿ ಅಡಚಣೆ ನಿರ್ಮಾಣವಾಗುತ್ತದೆ. ಇದರಿಂದ ನ್ಯಾಯ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕಡಿಮೆ ಆಗುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಹಿಂದೂ ರಾಷ್ಟ್ರದಲ್ಲಿನ ನ್ಯಾಯಾಧೀಶರು ಇಂತಹ ಸೂಕ್ಷ್ಮದಲ್ಲಿನ ತಿಳಿಯುವ ಉನ್ನತ ಸಾಧಕ ಇರಬಹುದು. ಇಂತಹ ಸಕ್ಷಮ ನ್ಯಾಯ ವ್ಯವಸ್ಥೆಯಿಂದ ನ್ಯಾಯ ತ್ವರಿತ ಸಿಗುವುದು ಮತ್ತು ನ್ಯಾಯವಾದಿಗಳಿಂದ ನ್ಯಾಯಾಲಯದ ವಂಚನೆ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದರಿಂದಲೇ ‘ಸನಾತನ ಪ್ರಭಾತ’ ಕಳೆದ ೨೫ ವರ್ಷದಿಂದ ಇಂತಹ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನ ಮಾಡುತ್ತಿದೆ !