ಮಹಿಳೆಯ ಬಂಧನ
ಬೆಂಗಳೂರು – ತುಮಕೂರು ಜಿಲ್ಲೆಯ ತಿಪಟೂರಿನ ಒಂದು ಮಠದ ಸ್ವಾಮೀಜಿಯ ಅಶ್ಲೀಲ ವಿಡಿಯೊಗಳು ಮತ್ತು ಛಾಯಾಚಿತ್ರಗಳನ್ನು ತೋರಿಸಿ ಅವರ ಬಳಿ 6 ಕೋಟಿ ರೂಪಾಯಿಗಳ ಬೇಡಿಕೆಯಿಟ್ಟು ಬ್ಲಾಕ್‌ಮೇಲ್ ಮಾಡಿರುವ ಪ್ರಕರಣ ಬಹಿರಂಗವಾಗಿದೆ. ಸ್ವಾಮೀಜಿಯವರು ನೀಡಿದ ದೂರಿನನ್ವಯ ಪೊಲೀಸರು ವಿದ್ಯಾ ಬಿರಾದಾರ ಪಾಟೀಲ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಆರೋಪಿ ವಿದ್ಯಾ ತನ್ನನ್ನು ತಾನು ಕರ್ನಾಟಕ ಮಹಿಳಾ ಹಕ್ಕು ಆಯೋಗದ ಅಧ್ಯಕ್ಷೆ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲರ ಸಹೋದರಿಯೆಂದು ಹೇಳಿ ಸ್ವಾಮೀಜಿಯವರನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾಳೆಂದು ಹೇಳಲಾಗುತ್ತಿದೆ.
1. ಆಗಸ್ಟ್ 31ರಂದು ವಿದ್ಯಾ ಸ್ವಾಮೀಜಿಯವರನ್ನು ಸಂಪರ್ಕಿಸಿ ಡಿ.ಬಿ. ಪಲ್ಲವಿ ಮತ್ತು ಸೂರ್ಯನಾರಾಯಣ ಹೆಸರಿನವರು ನಿಮಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ನೀಡಿ ದೂರು ದಾಖಲಿಸಿದ್ದಾರೆ ಎಂದು ಹೇಳಿದಳು. ತದನಂತರ ಮೇಲಿಂದ ಮೇಲೆ ಸ್ವಾಮೀಜಿಯವರನ್ನು ಕರೆ ಮಾಡಿ ಕಿರುಕುಳ ನೀಡಿದಳು. ಇದರಿಂದ ಬೇಸತ್ತ ಸ್ವಾಮೀಜಿಯವರು ಮಹಿಳೆಗೆ ತನ್ನ ಕಾನೂನು ಸಲಹೆಗಾರರನ್ನು ಸಂಪರ್ಕಿಸಲು ಹೇಳಿದರು.
2. ವಿದ್ಯಾ ಬೆಂಗಳೂರಿನ ಗಾಂಧಿನಗರದಲ್ಲಿ ನ್ಯಾಯವಾದಿಗಳನ್ನು ಭೇಟಿಯಾಗಿ ತನ್ನ ಬಳಿ ಅಶ್ಲೀಲ ವಿಡಿಯೋ ಇದೆಯೆಂದು ಹೇಳಿ ಅದನ್ನು ಸಾರ್ವಜನಿಕಗೊಳಿಸದಿರಲು 6 ಕೋಟಿ ರೂಪಾಯಿ ನೀಡಬೇಕು ಮತ್ತು ತಕ್ಷಣವೇ 50 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದಳು. ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡವುದಾಗಿ ಬೆದರಿಕೆ ಹಾಕಿದಳು.
3. ಸ್ವಾಮೀಜಿ ನೀಡಿರುವ ದೂರಿನ ಪ್ರಕಾರ ಸ್ವಾಮೀಜಿಯವರಂತೆ ಕಾಣುವ ವ್ಯಕ್ತಿಯೊಬ್ಬರ ನಕಲಿ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸಿದ್ಧಗೊಳಿಸಲಾಗಿದೆಯೆಂದು ಆರೋಪಿಸಲಾಗಿದೆ.