ಟ್ವಿಟರ್ ನಿಂದ ದೂರು ನಿವಾರಣೆ ಅಧಿಕಾರಿಯೆಂದು ವಿನಯ ಪ್ರಕಾಶ್ ಇವರ ನೇಮಕ

ಕೇಂದ್ರ ಸರಕಾರವು ನೂತನವಾಗಿ ಜಾರಿಗೆ ತಂದಿರುವ ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಯಮಗಳನ್ನು ಆರಂಭದಲ್ಲಿ ಟ್ವಿಟರ್ ಒಪ್ಪಿಕೊಂಡಿರಲಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ಟ್ವಿಟರ್ ಅವುಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿತ್ತು. ಅದಕ್ಕನುಸಾರ ದೂರು ನಿವಾರಣೆ ಅಧಿಕಾರಿಯನ್ನು ನೇಮಿಸಲಾಗಿದೆ.

ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ್ದಕ್ಕಾಗಿ ಕಾಶ್ಮೀರದಲ್ಲಿ ಈವರೆಗೆ ೫ ಮಂದಿಯ ಬಂಧನ !

ಭಯೋತ್ಪಾದಕರಿಗೆ ಹಣಕಾಸು ಒದಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಈವರೆಗೆ ಕಾಶ್ಮೀರದಲ್ಲಿ ಐದು ಜನರನ್ನು ಬಂಧಿಸಿದೆ. ಇದರಲ್ಲಿ ೩೬ ವರ್ಷದ ಮಹಿಳೆ ಕೂಡ ಭಾಗಿಯಾಗಿದ್ದು, ಆಕೆಯಿಂದ ಚೀನಾದ ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರಗೀತೆಗಾಗಿ ಎದ್ದು ನಿಲ್ಲದಿರುವುದು, ರಾಷ್ಟ್ರಗೀತೆಗೆ ಮಾಡಿದ ಅವಮಾನ; ಆದರೆ ಅಪರಾಧವಲ್ಲ ! – ಜಮ್ಮು- ಕಾಶ್ಮೀರ ಉಚ್ಚನ್ಯಾಯಾಲಯದ ವ್ಯಾಖ್ಯಾನ

ರಾಷ್ಟ್ರಗೀತೆಗಾಗಿ ನಿಲ್ಲದಿರುವುದು, ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಾಗಬಹುದು; ಆದರೆ ಅದು ರಾಷ್ಟ್ರೀಯ ಚಿಹ್ನೆಗಳ ಅವಮಾನವನ್ನು ತಡೆಯುವ ಅಧಿನಿಯಮದ ಅಡಿಯಲ್ಲಿ ಅದು ಅಪರಾಧವೆಂದು ಪರಿಗಣಿಸಲ್ಪಡುವುದಿಲ್ಲ,

ಅಸ್ಸಾಂನಲ್ಲಿಯೂ ಬರಲಿದೆ ‘ಲವ್ ಜಿಹಾದ್’ ವಿರುದ್ಧ ಕಾನೂನು !

ಜಿಹಾದ್ ವಿರೋಧಿ ಕಾನೂನು ಜಾರಿಗೆ ತಂದ ದೇಶದಲ್ಲಿ ತಮಿಳುನಾಡು ರಾಜ್ಯ ಮೊದಲನೆಯದು; ಆದಾಗ್ಯೂ, ೨೦೦೩ ರಲ್ಲಿ ಅವರು ಅದನ್ನು ರದ್ದುಗೊಳಿಸಿದರು. ಪ್ರಸ್ತುತ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ.

ಪ್ರಿಯತಮ ಸನಿ ಖಾನ್ ನ ‘ಬ್ಲಾಕ್‍ಮೇಲ್’ ನಿಂದ ಬೇಸತ್ತ ೧೪ ವರ್ಷದ ಹಿಂದೂ ಹುಡುಗಿಯ ಆತ್ಮಹತ್ಯೆ

೮ ನೇ ತರಗತಿಯಲ್ಲಿ ಕಲಿಯುತ್ತಿದ್ದ ಪಾಮೆಲಾ ಅಧಿಕಾರಿ ಈ ವಿದ್ಯಾರ್ಥಿನಿಯು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ೧೪ ವರ್ಷದ ಪಾಮೆಲಾ ರಾಷ್ಟ್ರೀಯ ಮಟ್ಟದ ಕರಾಟೆ ಪಟು ಆಗಿದ್ದಳು. ಸನಿ ಖಾನ್ ಹೆಸರಿನ ಪ್ರಿಯತಮನಿಂದಾಗುತ್ತಿದ್ದ ಬ್ಲಾಕ್‍ಮೇಲ್(ಬೆದರಿಕೆ ಹಾಕುವುದು) ನಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

‘ಅಲ್ಲಾಹನು ಎಲ್ಲರನ್ನೂ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ !'(ಅಂತೆ)

‘ಅಲ್ಲಾಹನು ಪ್ರತಿಯೊಬ್ಬರಿಗೆ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ.’ ವ್ಯಕ್ತಿ ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಪೋಷಿಸುತ್ತಾನೆ. ಅವರನ್ನು ವಿರೋಧಿಸುವುದು ಸೂಕ್ತವಲ್ಲ. ಇದರಿಂದ ಹಾನಿಯೇ ಆಗುತ್ತದೆ. ಇದು ಜನರ ಹಿತದ ಕಾನೂನು ಅಲ್ಲ’, ಎಂಬಂತಹ ಹುರುಳಿಲ್ಲದ ಟೀಕೆಯನ್ನು ಮಾಡಿದರು.

ಹೆಚ್ಚುತ್ತಿರುವ ಜನಸಂಖ್ಯೆಯು ವಿಕಾಸಕ್ಕೆ ಮಾರಕ ! – ಯೋಗಿ ಆದಿತ್ಯನಾಥ

ಸ್ವಾತಂತ್ರ್ಯನಂತರದ ೭೪ ವರ್ಷಗಳಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರಯತ್ನಿಸದ ಕಾರಣ ಇಂದು ದೇಶವು ಜನಸಂಖ್ಯಾಸ್ಫೋಟದ ತುತ್ತತುದಿಯಲ್ಲಿ ನಿಂತಿದೆ. ಈಗ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರೆ ಸ್ವಲ್ಪವಾದರೂ ಪರಿಣಾಮವಾಗಬಹುದೆಂದು ಅಪೇಕ್ಷಿಸಬಹುದು !

೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೈಸ್ತ ಪ್ರಾಧ್ಯಾಪಕನ ಬಂಧನ !

ಬಿಶಪ್ ಹೆಬರ್ ವಿಶ್ವವಿದ್ಯಾಲಯದ ತಮಿಳು ಭಾಷೆಯ ಪ್ರಾಧ್ಯಾಪಕ ಸಿ.ಜೆ. ಪಾಲ ಚಂದ್ರಮೋಹನ ಈತನನ್ನು ಸ್ನಾತಕೋತ್ತರ ವಿಭಾಗದ ೫ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ದೆಹಲಿಯಲ್ಲಿ ೨ ಸಾವಿರ ೫೦೦ ಕೋಟಿ ರೂಪಾಯಿಯ ಮಾದಕದ್ರವ್ಯ ಜಪ್ತಿ !

ದೆಹಲಿ ಪೊಲೀಸರು ೨ ಸಾವಿರ ೫೦೦ ಕೋಟಿ ರೂಪಾಯಿಯ ೩೫೪ ಕೆಜಿ ಹೇರಾಯಿನ್ ಈ ಮಾದಕ ದ್ರವ್ಯವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಜನರನ್ನು ಬಂಧಿಸಲಾಗಿದೆ. ಇವರಲ್ಲಿ ಅಫಘಾನಿಸ್ತಾನದ ನಾಗರಿಕನೊಬ್ಬನು ಒಳಗೊಂಡಿದ್ದಾನೆ.

ಕೇಂದ್ರದಲ್ಲಿನ ೭೮ ಸಚಿವರ ಪೈಕಿ ೩೩ ಸಚಿವರ ಮೇಲೆ ಗಂಭೀರ ಅಪರಾಧಗಳ ಆರೋಪ !

ಕೇಂದ್ರ ಮಂತ್ರಿಮಂಡಳಿಯ ವಿಸ್ತಾರದ ನಂತರ ಈಗ ಸಚಿವರ ಒಟ್ಟು ಸಂಖ್ಯೆ ೭೮ ಆಗಿದೆ; ಆದರೆ ಅದರಲ್ಲಿ ಶೇ. ೪೨ ರಷ್ಟು ಅಂದರೆ ೩೩ ಸಚಿವರ ವಿರುದ್ಧ ವಿವಿಧ ಅಪರಾಧಗಳ ಆರೋಪವಿದೆ. ಅದರಲ್ಲಿ ೨೪ ಜನರ ವಿರುದ್ಧ ಹತ್ಯೆ, ಹತ್ಯೆಯ ಪ್ರಯತ್ನ, ಲೂಟಿಯಂತಹ ಗಂಭಿರವಾದ ಅಪರಾಧದ ಆರೋಪಗಳಿವೆ.