ಹರಿದ್ವಾರದ ಧರ್ಮಸಂಸತ್ತಿನಲ್ಲಿ ವಕ್ತಾರರು ಮುಸಲ್ಮಾನರ ವಿಷಯವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎನ್ನಲಾಗುವ ಪ್ರಕರಣ
ಪಾಕಿಸ್ತಾನವು ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೂ ನಡೆಯದಿದ್ದರು, ಈ ರೀತಿಯ ಕಳವಳ ವ್ಯಕ್ತಪಡಿಸುವ ಬದಲು ಪಕಿಸ್ತಾನದಲ್ಲಿನ ಹಿಂದೂ, ಸಿಕ್ಖ್ ಮತ್ತು ಕ್ರೈಸ್ತರು ಈ ಅಲ್ಪಸಂಖ್ಯಾತರ ಮೇಲೆ ಪ್ರತಿದಿನ ನಡೆಯುವ ದೌರ್ಜನ್ಯಗಳ ಕಡೆಗೆ ಗಮನ ನೀಡಿ ಅವರ ರಕ್ಷಣೆ ಮಾಡುವ ಕಡೆಗೆ ಗಮನ ನೀಡಬೇಕು !
ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಸ್ತುವಾರಿ ರಾಯಭಾರಿಯನ್ನು ಕರೆಸಿ ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ಮುಸಲ್ಮಾನರ ವಿರುದ್ಧ ದ್ವೇಷಪೂರ್ಣ ಭಾಷಣ ಮಾಡಿದರೆನ್ನಲಾದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
#Pakistan summons Indian diplomat over hate speeches against minorities at #Haridwar Dharma Sansadhttps://t.co/KctXSs93jY
— TIMES NOW (@TimesNow) December 28, 2021
ಪಾಕಿಸ್ತಾನವು ಒಂದು ಅಧಿಕೃತ ಮನವಿಯಲ್ಲಿ, ಭಾರತಿಯ ವಿದೇಶಾಂಗ ಸಚಿವಾಲಯದ ಉಸ್ತುವಾರಿ ಎಂ. ಸುರೇಶ ಕುಮಾರ ಇವರನ್ನು ಇಸ್ಲಾಮಾಬಾದಿನ ರಾಯಭಾರಿ ಕಛೇರಿಗೆ ಕರೆಸಿದರು ಮತ್ತು ಹಿಂದುತ್ವ ಬೆಂಬಲಿಗರು ಭಾರತೀಯ ಮುಸಲ್ಮಾನರ ನರಮೇಧದ ಬಗ್ಗೆ ಮಾತನಾಡುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಆಯೋಜಕರು ಯಾವುದೇ ಖೇದ ವ್ಯಕ್ತಪಡಿಸಿಲ್ಲ ಅಥವಾ ಭಾರತ ಸರಕಾರವು ಇದನ್ನು ಖಂಡಿಸಲಿಲ್ಲ ಇದು ಭಾರತಕ್ಕಾಗಿ ಅತ್ಯಂತ ಖಂಡನೀಯ ವಿಷಯವಾಗಿದೆ. ಸಂಬಂಧಪಟ್ಟವರ ಮೇಲೆ ಕ್ರಮಕೈಗೊಂಡಿಲ್ಲ. ಭಾರತದಲ್ಲಿನ ಮುಸಲ್ಮಾನರ ಭವಿಷ್ಯದ ಭೀಕರ ಚಿತ್ರಣ ಎದುರಿಗೆ ಕಾಣುತ್ತದೆ. ಭಾರತವು ಈ ದ್ವೇಷಯುಕ್ತ ಭಾಷಣದ ಮತ್ತು ಅಲ್ಪಸಂಖ್ಯಾತರ ವಿರುದ್ಧ ವ್ಯಾಪಕ ದೌರ್ಜನ್ಯದ ಘಟನೆಯ ವಿಚಾರಣೆ ನಡೆಸಿ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ತಡೆಯಲು ಉಪಾಯಯೋಜನೆ ಮಾಡುವುದು ಅಪೇಕ್ಷಿತವಾಗಿದೆ ಎಂದು ಹೇಳಿದೆ.