ಕರ್ನಾಟಕ : ರಾಜ್ಯ ಉತ್ಪಾದನಾ ಶುಲ್ಕ ಕಾರ್ಯಾಲಯದ ಮೇಲೆ ದಾಳಿ; ಗಾಂಜಾ, ಮದ್ಯ ಬಾಟಲಿಗಳು ಪತ್ತೆ!
ಬೆಂಗಳೂರು – ರಾಜ್ಯ ಉತ್ಪಾದನಾ ಶುಲ್ಕ ಕಾರ್ಯಾಲಯದಲ್ಲಿ ಅನೇಕ ದುಷ್ಕೃತ್ಯಗಳು ನಡೆಯುತ್ತಿವೆ ಎಂದು ದೂರುಗಳು ಕೇಳಿ ಬಂದ ಬಳಿಕ ಲೋಕಾಯುಕ್ತರು ರಾಜಧಾನಿಯ ಎರಡು ಕಾರ್ಯಾಲಯಗಳ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ ಅಲ್ಲಿ ಗಾಂಜಾ ಮತ್ತು ಸಾರಾಯಿ ಬಾಟಲಿಗಳು ದೊರೆತವು. ನಗರದಲ್ಲಿನ ಯಶವಂತಪುರ ಮತ್ತು ಬ್ಯಾಟರಾಯನಪುರದಲ್ಲಿರುವ ಕಚೇರಿಗಳಲ್ಲಿ ಸಿಗರೇಟಿನಲ್ಲಿನ ತಂಬಾಕು ತೆಗೆದು ಅದರಲ್ಲಿ ಗಾಂಜಾ ತುಂಬಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಮತ್ತು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸ್ವತಃ ಪರಿಶೀಲನೆಗಾಗಿ ಈ ಎರಡೂ ಉತ್ಪಾದನಾ ಶುಲ್ಕ ಕಚೇರಿಗಳಲ್ಲಿ ಉಪಸ್ಥಿತರಿದ್ದರು.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಮಾಧ್ಯಮಗಳ ಜೊತೆ ಈ ಬಗ್ಗೆ ಮಾತನಾಡಿ, ನಮ್ಮ ಬಳಿ ಸುಮಾರು ೧೩೨ ದೂರುಗಳು ಬಂದಿದ್ದವು. ಆದ್ದರಿಂದ ಈ ಕಚೇರಿಗಳ ಕಾರ್ಯವೈಖರಿಯ ಪರಿಶೀಲನೆ ಮಾಡಲಾಗುತ್ತಿದೆ. ದಾಳಿಯಲ್ಲಿ ಉತ್ಪಾದನ ಶುಲ್ಕ ಇಲಾಖೆಯಲ್ಲಿನ ೬೧ ಅಧಿಕಾರಗಳ ತಪಾಸಣೆ ನಡೆಸಲಾಯಿತು. ಲೆಕ್ಕವಿಲ್ಲದ ೨ ಲಕ್ಷ ರೂಪಾಯಿ ನಗದು ಕೂಡ ದೊರೆತಿದೆ. ಈ ಎಲ್ಲದರ ಕುರಿತು ಸಂಬಂಧಿತ ಅಧಿಕಾರಿಗಳ ಅಭಿಪ್ರಾಯವನ್ನು ಕೂಡ ಪಡೆಯಲಾಗುವುದು ಎಂದು ತಿಳಿಸಿದರು.
ಸಂಪಾದಕೀಯ ನಿಲುವು
|