ನಾವು ಶಾಂತಿ ಪ್ರಸ್ತಾಪಿತ ಗೊಳಿಸುತ್ತಿದ್ದು ಈ ಮುಂದೆಯೂ ಕೂಡ ಹಾಗೆ ಮಾಡುತ್ತಿರುವೆವು ! – ಇಸ್ರೇಲಿನ ಪ್ರಧಾನಮಂತ್ರಿ ಬೆಂಜಾಮೀನ್ ನೇತಾನ್ಯಾಹೂ

  • ಇಸ್ರೇಲಿನ ಪ್ರಧಾನಮಂತ್ರಿ ಬೆಂಜಾಮೀನ್ ನೇತಾನ್ಯಾಹೂ ಇವರಿಂದ ವಿಶ್ವಸಂಸ್ಥೆಯಲ್ಲಿ ಹೇಳಿಕೆ

  • ನೇತಾನ್ಯಾಹೂ ಇವರ ಭಾಷಣ ಆರಂಭವಾಗುತ್ತಲೇ ಅನೇಕ ದೇಶದ ಪ್ರತಿನಿಧಿಗಳಿಂದ ಸಭಾತ್ಯಾಗ

ನ್ಯೂಯಾರ್ಕ್ – ಇಸ್ರೈಲ್‌ಗೆ ಶಾಂತಿ ಬೇಕಿದೆ. ನಾವು ಶಾಂತಿ ಪ್ರಸ್ತಾಪಿಸುತ್ತಿದ್ದು ಈ ಮುಂದೆ ಕೂಡ ಹಾಗೆ ಮಾಡುವೆವು. ಕಳೆದ ವರ್ಷ ಯಾವಾಗ ನಾನು ವಿಶ್ವ ಸಂಸ್ಥೆಯ ಮಹಾಸಭೆಗೆ ಉದ್ದೇಶಿಸಿ ಮಾತನಾಡಿದೆ, ಆಗ ನಾವು ಸೌದಿ ಅರೇಬಿಯಾದ ಜೊತೆಗೆ ಐತಿಹಾಸಿಕ ಒಪ್ಪಂದ ಮಾಡುವವರಿದ್ದೆವು; ಆದರೆ ಹಮಾಸ ನಮ್ಮ ಮೇಲೆ ದಾಳಿ ನಡೆಯಿತು ಮತ್ತು ಈ ಒಪ್ಪಂದ ನಿಂತಿತು, ಎಂದು ಇಸ್ರೈಲ್‌ನ ಪ್ರಧಾನಮಂತ್ರಿ ಬೆಂಜಾಮೀನ ನೇತಾನ್ಯಾಹೂ ಇವರು ಹೇಳಿಕೆ ನೀಡಿದರು. ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮಾತನಾಡುತ್ತಿದ್ದರು. ನೇತಾನ್ಯಾಹೂ ಇವರ ಭಾಷಣ ಆರಂಭವಾಗುತ್ತಲೇ ಅನೇಕ ದೇಶದ ಪ್ರತಿನಿಧಿಗಳು ಸಭಾಗೃಹದಿಂದ ಹೊರ ನಡೆದರು.

ನೇತಾನ್ಯಾಹೂ ಮಾತು ಮುಂದುವರೆಸಿ,

೧. ಇಸ್ರೈಲ್‌ನ ಪ್ರಧಾನಮಂತ್ರಿ ಎಂದು ನಾನು ಈ ಒಪ್ಪಂದದ ಕುರಿತು ದೃಢವಾಗಿದ್ದೇನೆ. ಎರಡು ದೇಶದಲ್ಲಿನ ಶಾಂತಿ ಒಪ್ಪಂದ ಸಂಪೂರ್ಣ ಮದ್ಯ ಪೂರ್ವಕ್ಕೆ ವ್ಯಾಪಿಸುವುದು. ಇರಾನ್ ಇದನ್ನು ಆಗದಂತೆ ತಡೆಯುತ್ತಿದೆ.

೨. ನಾನು ಇರಾನಿನ ಅಧಿಕಾರಶಾಹಿಗೆ, ನೀವು ಏನಾದರೂ ನಮ್ಮ ಮೇಲೆ ದಾಳಿ ನಡೆಸಿದರೆ, ನಾವು ಅದಕ್ಕೆ ಖಂಡಿತವಾಗಿಯೂ ಪ್ರತ್ಯುತ್ತರ ನೀಡುವೆವು ಎಂದು ಹೇಳುತ್ತೇನೆ.

೩. ಯುದ್ಧದ ನಂತರ ನಾವು ಗಾಝಾವನ್ನು ಹಮಾಸನ ಕೈಗೆ ನೀಡುವುದಿಲ್ಲ. ನಾವು ಇನ್ನಮ್ಮೆ ಅಕ್ಟೋಬರ್ ೭ (ಈ ದಿನದಂದು ಹಮಾಸನು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು) ರಂತೆ ಆಗಲು ಬಿಡುವುದಿಲ್ಲ. ನಾವು ಹಮಾಸನ ೨೪ ಬಟಾಲಿಯನ್ ನಲ್ಲಿನ ೨೩ (ಸೈನಿಕರ ತುಕಡಿ, ಒಂದು ತುಕಡಿಯಲ್ಲಿ ೫೦೦ ರಿಂದ ೧ ಸಾವಿರ ಸೈನಿಕರು ಇರುತ್ತಾರೆ) ನಾಶ ಮಾಡಿದ್ದೇವೆ.

೪. ಹಮಾಸನ ಜನರು ಚಿಕ್ಕ ಮಕ್ಕಳನ್ನು ಜೀವಂತವಾಗಿ ಸುಟ್ಟಿದ್ದಾರೆ ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದ್ದಾರೆ. ಜನರ ಶಿರಚ್ಛೇದನ ಮಾಡಿದ್ದಾರೆ, ಕುಟುಂಬಗಳನ್ನೇ ಕೊಂದಿದ್ದಾರೆ. ಹಮಾಸವು ೨೫೦ ಜನರನ್ನು ಒತ್ತೆಯಾಗಿ ಇಟ್ಟುಕೊಂಡಿತ್ತು.

೫. ಹಿಜುಬುಲ್ಲ ಈ ಭಯೋತ್ಪಾದಕ ಸಂಘಟನೆ ಶಾಲೆ, ಆಸ್ಪತ್ರೆ ಮುಂತಾದ ಸ್ಥಳಗಳಿಂದ ನಮ್ಮ ಮೇಲೆ ರಾಕೆಟ್ ಬಿಟ್ಟಿತ್ತು. ಹಿಜಬುಲ್ಲಾ ಇರಾನಿನ ಸಹಾಯದಿಂದ ತಯಾರಿಸಿರುವ ರಾಕೆಟ್ಅನ್ನು ನಾವು ನಾಶ ಮಾಡಿದ್ದೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಸ್ರಾಯಿಲ ಭಯೋತ್ಪಾದಕರಿಗೆ ಅವರ ದೇಶದಲ್ಲಿ ನುಗ್ಗಿ ವಧಿಸಿ ತಮ್ಮ ದೇಶದಲ್ಲಿ ಶಾಂತಿ ಪ್ರಸ್ತಾಪಿತ ಗೊಳಿಸಿದೆ. ಭಾರತ ಹೀಗೆ ಎಂದು ಮಾಡುವುದು ?