(ಮೌಲ್ವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)
ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿನ ತೋಡಿ ತೇರಾಹ ಬಿಸ್ವಾ ಗ್ರಾಮದ ಮದರಸಾದಲ್ಲಿ ಕಲಿಯುತ್ತಿದ್ದ 14 ವರ್ಷದ ವಿದ್ಯಾರ್ಥಿಗೆ ಮೌಲ್ವಿ ಆಸ್ ಮಹಮದ ಬೈದಿದ್ದರಿಂದ ವಿದ್ಯಾರ್ಥಿಯು ಮೌಲ್ವಿಯ ಕುತ್ತಿಗೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಶಿರಚ್ಛೇದ ಮಾಡಲು ಯತ್ನಿಸಿದ್ದಾನೆ. ಇದರಲ್ಲಿ ಮೌಲ್ವಿ ಗಾಯಗೊಂಡಿದ್ದಾನೆ. ನಂತರ ವಿದ್ಯಾರ್ಥಿಯು ಅಲ್ಲಿಂದ ಓಡಿ ಹೋಗಿದ್ದಾನೆ. ಮೌಲ್ವಿ ಆಸ ಮಹಮದ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಘಟನೆಯಲ್ಲಿ ಪೊಲೀಸರು ಮೂವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಏನು ಕಲಿಸಲಾಗುತ್ತಿದೆಯೋ, ಅದನ್ನೇ ಅವರು ಪ್ರತ್ಯಕ್ಷ ಕೃತಿಯಲ್ಲಿ ಮಾಡಿ ತೋರಿಸುತ್ತಿದ್ದಾರೆ, ಎಂದು ಯಾರಿಗಾದರೂ ಅನಿಸಿದಲ್ಲಿ ತಪ್ಪೇನಿದೆ ? ಇಂತಹ ಮದರಸಾಗಳ ಮೇಲೆ ಈಗ ದೇಶದಲ್ಲಿ ನಿರ್ಬಂಧ ಹೇರುವುದೇ ಇದರ ಮೇಲಿನ ಉಪಾಯವಾಗಿದೆ. |