ಪಣಜಿ (ಗೋವಾ) ಸಪ್ಟೆಂಬರ್ ೨೭ (ವಾರ್ತೆ) – ಹೆಲ್ಪ್ ಫುಲ್ ಆರ್ಗನೈಸೇಷನ್ ಫಾರ್ ಲೈಕ್ ಮಾಂಡೇಡ್ ಪೀಪಲ್ (HOLI) ಎಂದರೆ ‘ಹೋಲಿ’ ಈ ಸಂಘಟನೆಯಿಂದ ಆಜಾದ್ ಭವನ, ಪರ್ವರಿ ಇಲ್ಲಿ ೭ ದಿನದ ಸಂಗೀತಮಯ ಶ್ರೀಮದ್ ಭಾಗವತ ಕಥಾ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮ ಅಕ್ಟೋಬರ್ ೩ ರಿಂದ ೯, ೨೦೨೪ ವರೆಗೆ ನಡೆಯಲಿದೆ. ಈ ಸಂಗೀತಮಯ ಕಥಾ ವಾಚನ ಹಿಂದಿ ಭಾಷೆಯಲ್ಲಿ ಇರಲಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ನೀಡುವುದಕ್ಕಾಗಿ ‘ಹೋಲಿ’ ಸಂಘಟನೆಯಿಂದ ಸುದ್ಧಿಗೋಷ್ಠಿ ನಡೆಸಲಾಯಿತು. ಈ ಸುದ್ಧಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀ. ಕೆ.ಕೆ. ಚತುರ್ವೇದಿ, ಮಾರ್ಗದರ್ಶಕ ಡಾ. ಗೋವಿಂದ ಕಾಳೆ, ಕಾರ್ಯಕ್ರಮದ ಸಮನ್ವಯಕ ಶ್ರೀ. ಲಾಲಜಿ ಪಾಗಿ, ಮಹಾಸಚಿವ ಶ್ರೀ. ಬಿ.ಎಂ. ಯಾದವ ಮತ್ತು ಮಹಾಸಚಿವ ಶ್ರೀ. ಸೂರಜ ನಾಯಿಕ್ ಇವರು ಉಪಸ್ಥಿತರಿದ್ದರು. ಈ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳಿಂದ ಸಂಘಟನೆಯ ಕಾರ್ಯದ ಮಾಹಿತಿ ನೀಡಲಾಯಿತು.
🕉️🧘Want to revel in the transcendental pastimes of Bhagavan Sri Krishna and purify yourself ?
सदा सेव्या सदा सेव्या श्रीमद भागवती कथा। यस्याः श्रवणमात्रेण हरिश्चित्तं समाश्रयेत् ॥
🚩Join in to experience the divine nectar of “Srimad Bhagavat Katha” by “Bhagavat Bhaskar… pic.twitter.com/3JKZc2Qzyq
— Sanatan Prabhat (@SanatanPrabhat) September 26, 2024
‘ಹೋಲಿ’ ಸಂಘಟನೆ 2016ರಲ್ಲಿ ಸ್ಥಾಪನೆ ಆಗಿದ್ದು ಗೋವಾದಲ್ಲಿನ ಸ್ಥಳಿಯ ಜನರು ಹಾಗೂ ಉತ್ತರ ಮತ್ತು ದಕ್ಷಿಣ ಭಾರತೀಯರು ಈ ಸಂಘಟನೆಯಲ್ಲಿ ಕಾರ್ಯನಿರತರಾಗಿದ್ದಾರೆ. ದೇಶಪ್ರೇಮ ಹೆಚ್ಚಿಸಲು ಈ ಸಂಘಟನೆ ಕಾರ್ಯ ಮಾಡುತ್ತಿದೆ. ರಾಷ್ಟ್ರಭಕ್ತಿಯ ಕುರಿತು ಹಿಂದಿ ಕವಿ ಸಮ್ಮೇಳನ, ಆರೋಗ್ಯ ಶಿಬಿರಗಳು, ಕೊರೊನಾ ಮಹಾಮಾರಿಯ ಕಾಲದಲ್ಲಿ ರೋಗಿಗಳಿಗೆ ಸಹಾಯ ಮಾಡುವುದು, ಪ್ರಧಾನಮಂತ್ರಿ ಸಹಾಯ ನಿಧಿ ಅರ್ಪಣೆ ಮಾಡುವುದು, ಪೌರತ್ವ ಸುಧಾರಣೆ ಕಾನೂನಿಗೆ ಬೆಂಬಲ ನೀಡುವ ಮೆರವಣಿಗೆ, ವೃಕ್ಷಾರೋಪಣ ಕಾರ್ಯಕ್ರಮ, ಶ್ರೀರಾಮನ ಕುರಿತಾದ ಸುಂದರಕಾಂಡದ ಬಗ್ಗೆ ಸಾಂಕೇತಿಕ ಕಾರ್ಯಕ್ರಮದ ಆಯೋಜನೆ, ಶ್ರೀಮದ್ ಭಗವದ್ಗೀತಾ ಮತ್ತು ರಾಮಚರಿತ ಮಾನಸ ಗ್ರಂಥದ ವಿತರಣೆ; ಯೋಗ ಶಿಬಿರ, ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯದಲ್ಲಿ ವಿಶೇಷ ಕೊಡುಗೆ, ಸೇವಾಭಾವಿ ವೃತ್ತಿಯ ವಿವಿಧ ಉಪಕ್ರಮಗಳ ಆಯೋಜನೆ ಹಾಗೂ ತಾನಾಜಿ ವಾರಿಯರ್, ಕಾಶ್ಮೀರ್ ಫೈಲ್ ಮುಂತಾದ ಚಲನಚಿತ್ರಗಳ ಉಚಿತ ಪ್ರದರ್ಶನ ಇವುಗಳಂತಹ ಅನೇಕ ಉಪಕ್ರಮಗಳು ಸಂಘಟನೆಯಿಂದ ನಡೆಸಲಾಗುತ್ತಿದೆ.
ಈ ಸಮಯದಲ್ಲಿ ಸಂಘಟನೆಯ ಅಧ್ಯಕ್ಷ ಕೆ. ಕೆ. ಚತುರ್ವೇದಿ ಇವರು ಮಾತನಾಡಿ, ”ನಾವು ಪ್ರತಿವರ್ಷ ಹಿಂದಿ ಭಾಷೆಯ ಪ್ರಚಾರ ಮತ್ತು ಪ್ರಸಾರ ಮಾಡುವುದಕ್ಕಾಗಿ ವಿವಿಧ ರೀತಿಯ ಪ್ರಯತ್ನ ಮಾಡುತ್ತೇವೆ. ಯುವಕರಲ್ಲಿ ರಾಷ್ಟ್ರವಾದ, ರಾಷ್ಟ್ರದ ಕುರಿತು ಪ್ರೇಮ ಜಾಗೃತಿ ಮಾಡುವುದಕ್ಕಾಗಿ ಕೂಡ ಪ್ರಯತ್ನ ನಡೆಯುತ್ತಿದೆ.” ಎಂದು ಹೇಳಿದರು. ಮಹಾಸಚಿವ ಸೂರಜ ನಾಯಕ್ ಇವರು ಮಾತನಾಡಿ, ”ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಮೊದಲ ಬಾರಿ ಈ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ. ಆಝಾದ ಭವನದ ಸಭಾಗೃಹದ ಕ್ಷಮತೆ ೫೦೦ ಜನರದ್ದಾಗಿದೆ. ಹೆಚ್ಚೆಚ್ಚು ಜನರವರೆಗೆ ತಲುಪುವುದಕ್ಕಾಗಿ ನೀವೆಲ್ಲರೂ ಸಹಕಾರ ನೀಡಬೇಕು.” ಎಂದು ಹೇಳಿದರು. ಆಚಾರ್ಯ ಶ್ರೀ. ಕೃಷ್ಣ ಮಹಾರಾಜ ಜಿ ಇವರು ಈ ಸ್ಥಳದಲ್ಲಿ ಪ್ರತಿದಿನ ಕಥಾವಾಚನ ಮಾಡುವರು. ಅವರು ಖಗೋಲಶಾಸ್ತ್ರದ ಅಧ್ಯಯನಕಾರರಾಗಿದ್ದಾರೆ ಮತ್ತು ಸಂಸ್ಕೃತದಲ್ಲಿ ಪದವಿ ಪಡೆದಿದ್ದಾರೆ. ಯಾವ ಭಕ್ತರಿಗೆ ಅವರ ಜ್ಯೋತಿಷ್ಯ ಜಾತಕ ತೋರಿಸುವ ಇಚ್ಛೆ ಇದೆಯೋ, ಅವರು ಅವರಿಗೆ ಬೆಳಗಿನ ಸಮಯದಲ್ಲಿ ಭೇಟಿ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮ
ಈ ಕಾರ್ಯಕ್ರಮ ನವರಾತ್ರಿಯ ಸಮಯದಲ್ಲಿ ಎಂದರೆ ಅಕ್ಟೋಬರ್ ೩ ರಿಂದ ಅಕ್ಟೋಬರ್ ೯, ೨೦೨೪ರ ಸಮಯದಲ್ಲಿ ನಡೆಯಲಿದೆ. ಆ ಸಮಯದಲ್ಲಿ ಪ್ರತಿದಿನ ಸಂಜೆ ೫ ರಿಂದ ರಾತ್ರಿ ೮ ಈ ಸಮಯದಲ್ಲಿ ಶ್ರೀಮದ್ ಭಾಗವತ ಈ ಗ್ರಂಥದ ಕುರಿತು ನಿರೂಪಣೆ ನಡೆಯುವುದು. ಅಕ್ಟೋಬರ್ ೩ ರಂದು ಶ್ರೀಮದ್ಭಾಗವತ ಮಹಾತ್ಮ ಶುಕದೇವ ಜನನ ಮತ್ತು ಪರೀಕ್ಷಿತ ಜನನ; ಅಕ್ಟೋಬರ್ ೪ ರಂದು ಕಪಿಲ ದೇವಹೂತಿ ಸಂವಾದ ಮತ್ತು ಧ್ರುವ ಚರಿತ್ರೆ; ಅಕ್ಟೋಬರ್ ೫ ರಂದು ಅಜಾಮಿಲ ಪ್ರಸಂಗ ಮತ್ತು ಪ್ರಹ್ಲಾದ ಚರಿತ್ರೆ; ಅಕ್ಟೋಬರ್ ೬ ರಂದು ವಾಮನ ಅವತಾರ, ಶ್ರೀರಾಮ ಜನನ, ಶ್ರೀ ಕೃಷ್ಣ ಜನನ; ಅಕ್ಟೋಬರ್ ೭ ಬಾಲಲೀಲೆ ಮತ್ತು ಗೋವರ್ಧನ ಪೂಜೆ; ಅಕ್ಟೋಬರ್ ೮ ಶ್ರೀಕೃಷ್ಣ-ರುಕ್ಮಿಣಿ ವಿವಾಹ ಮತ್ತು ಅಕ್ಟೋಬರ್ ೯ ರಂದು ಸುಧಾಮ ಚರಿತ್ರೆ ಮತ್ತು ಪರೀಕ್ಷಿತ ಮೋಕ್ಷ ಈ ವಿಷಯದ ಕುರಿತು ನಿರೂಪಣೆ ನಡೆಸಲಾಗುವುದು. ಪ್ರತಿದಿನ ಕಥಾ ವಾಚನ ನಡೆದ ನಂತರ ಮಹಾಪ್ರಸಾದ ಇರುವುದು. ಅದರ ನಂತರ ಅಕ್ಟೋಬರ್ ೧೦ ರಂದು ಹೋಮ ಮತ್ತು ಪ್ರಸಾದ ವಿತರಣೆಯ ಕಾರ್ಯಕ್ರಮ ನಡೆಯುವುದು. ಈ ಕಾರ್ಯಕ್ರಮದ ಆರಂಭದಲ್ಲಿ ಅಕ್ಟೋಬರ್ ೩ ರಂದು ಕಲಶ ಯಾತ್ರೆ ನಡೆದು ಅದರ ಮುಕ್ತಾಯ ಆಝಾದ ಭವನದಲ್ಲಿ ಆಗುವುದು. ಹೆಚ್ಚೆಚ್ಚು ಮಹಿಳಾಭಕ್ತರು ಇದರಲ್ಲಿ ಭಾಗವಹಿಸುವಂತೆ ಆಯೋಜಕರು ಕರೆ ನೀಡಿದ್ದಾರೆ. ಇದಲ್ಲದೆ ಈ ಕಾರ್ಯಕ್ರಮದ ಪ್ರಯುಕ್ತ ಮಧ್ಯಪ್ರದೇಶದಲ್ಲಿನ ಕಲಾಸಂಗಮ, ಗುಂಡವಾನಾ ಆರ್ಟ್ ನಲ್ಲಿನ ವಿದ್ಯಾರ್ಥಿಗಳು ಲೈವ್ ಪೇಂಟಿಂಗ್ (ಕಥೆ ನಡೆಯುತ್ತಿರುವಾಗ ಚಿತ್ರದಲ್ಲಿ ಬಣ್ಣ ತುಂಬುವುದು) ಮಾಡುವರು.