ಬ್ರಾಂಪ್ಟನ್ (ಕೆನಡಾ) – ಇಲ್ಲಿನ ಮಹಾರಾಜ ರಣಜಿತ್ ಸಿಂಗ್ ಅವರ ಪ್ರತಿಮೆಯ ಮೇಲೆ ಪ್ಯಾಲೆಸ್ತೀನ್ ಪರ ಯುವಕರಿಬ್ಬರು ದಾಳಿಗೆ ಪ್ರಯತ್ನ ನಡೆಸಿ ಪ್ಯಾಲೆಸ್ತೀನ್ ಧ್ವಜ ಹಾರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಯುವಕರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು ಮತ್ತು ಅನೇಕ ಜನರು ಕೆಳಗೆ ನಿಂತಿದ್ದರು. ಮಹಾರಾಜ ರಂಜಿತ್ ಸಿಂಗ್ ಅವರ ಕುದುರೆಯ ಮೇಲೆ ವ್ಯಕ್ತಿಯೊಬ್ಬರು ಬಟ್ಟೆ ಕಟ್ಟುತ್ತಿರುವುದು ಕಂಡುಬಂದಿದೆ. ಇಡೀ ಪ್ರಕರಣದ ಮಾಹಿತಿಯನ್ನು ಕೆನಡಾ ಪೊಲೀಸರಿಗೆ ತಿಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಾರಾಜ ರಣಜಿತ್ ಸಿಂಗ್ ಅವರು 18 ನೇ ಶತಮಾನದಲ್ಲಿ ಪಂಜಾಬಿನ ಮಹಾರಾಜರಾಗಿದ್ದರು. ಅವರು ತಮ್ಮ 40 ವರ್ಷಗಳ ಆಳ್ವಿಕೆಯಲ್ಲಿ ಬ್ರಿಟಿಷರನ್ನು ತಮ್ಮ ಸಾಮ್ರಾಜ್ಯದ ಸುತ್ತ ತಿರುಗಾಡಲು ಸಹ ಬಿಡಲಿಲ್ಲ.
ಸಂಪಾದಕೀಯ ನಿಲುವುಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ? |