#SamoohikTarpan : ಹಿಂದೂ ಧರ್ಮದ ರಕ್ಷಣೆಗಾಗಿ ಬಲಿದಾನ ಮಾಡಿದ 80 ಕೋಟಿ ಪೂರ್ವಜರಿಗಾಗೆ ಅಕ್ಟೋಬರ್ 2ರಂದು ‘ಸಾಮೂಹಿಕ ತರ್ಪಣ’ ವಿಧಿ ಮಾಡಿ !

  • ಜಗತ್ತಿನ ಹಿಂದೂಗಳಿಗೆ ಕರೆ ನೀಡಿದ ಪ್ರಖರ ಹಿಂದುತ್ವನಿಷ್ಠೆ ಮೀನಾಕ್ಷಿ ಶರಣ್ !

  • ದೇಶಾದ್ಯಂತ ಉತ್ಸಾಹ ಭರಿತ ಪ್ರತಿಕ್ರಿಯೆ !

ಇಂದೋರ್ (ಮಧ್ಯಪ್ರದೇಶ) – ಕಳೆದ 1,400 ವರ್ಷಗಳಲ್ಲಿ (ಇಸ್ಲಾಂನ ಉದಯದಿಂದ), ಭಾರತವು ಅನೇಕ ವಿದೇಶಿ ಆಕ್ರಮಣಗಳನ್ನು ಮತ್ತು ಆಕ್ರಮಣಕಾರರಿಂದ ಮತಾಂತರಗಳನ್ನು ಎದುರಿಸಿತು. ಈ ಅವಧಿಯಲ್ಲಿ, ಸುಮಾರು 80 ಕೋಟಿ ಹಿಂದೂಗಳು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಹೋರಾಡಿ ಪ್ರಾಣ ಕಳೆದುಕೊಂಡರು. ದುರದೃಷ್ಟವಶಾತ್ ಈ ರೀತಿ ಸಾವನ್ನಪ್ಪಿದವರಿಗೆ ಯಾವುದೇ ಅಂತ್ಯಕ್ರಿಯೆಗಳು ಅಥವಾ ಅವರ ವಂಶಸ್ಥರಿಂದ ವಾರ್ಷಿಕ ಅಂತ್ಯಕ್ರಿಯೆಗಳು ಮಾಡಿರಲಿಲ್ಲ. ಅದಕ್ಕಾಗಿ ಮಹಾಲಯ(ಸರ್ವಪಿತ್ರಿ) ಅಮಾವಾಸ್ಯೆಯಂದು (ಅಕ್ಟೋಬರ್ 2) ‘ಸಾಮೂಹಿಕ ತರ್ಪಣ ವಿಧಿ’ ಮಾಡುವಂತೆ ‘ಅಯೋಧ್ಯಾ ಫೌಂಡೇಶನ್’ ಹಿಂದೂ ಸಂಘಟನೆ ವಿಶ್ವಾದ್ಯಂತ ಹಿಂದೂಗಳಿಗೆ ಕರೆ ನೀಡಿದೆ ಎಂದು ಪ್ರಖರ ಹಿಂದುತ್ವನಿಷ್ಠೆ ಹಾಗೂ ಸಂಘಟನೆಯ ಸಂಸ್ಥಾಪಕಿ ಮೀನಾಕ್ಷಿ ಶರಣ್ ಅವರು ‘ಸನಾತನ ಪ್ರಭಾತಕ್ಕೆ’ ತಿಳಿಸಿದರು.

ಅಯೋಧ್ಯಾ ಫೌಂಡೇಶನ್ ಸಂಘಟನೆಯ ಅಧ್ಯಕ್ಷೆ ಮೀನಾಕ್ಷಿ ಶರಣ್

ಮೀನಾಕ್ಷಿ ಶರಣ್ ಮಾತು ಮುಂದುವರೆಸಿ,

1. ಕೇವಲ 1947ರಲ್ಲಿ ಭಾರತದ ವಿಭಜನೆಯ ಸಮಯದಲ್ಲಿ, 50 ಲಕ್ಷ ಅಮಾಯಕ ಹಿಂದೂಗಳನ್ನು ಬರ್ಬರವಾಗಿ ಕೊಲ್ಲಲಾಯಿತು. ಅವರ ಬಲಿದಾನ ಹಿಂದೂಗಳ ಇತಿಹಾಸದಲ್ಲಿಯೂ ದಾಖಲಾಗಿಲ್ಲ.
2. ಹಿಂದೂಗಳ ಬಲಿದಾನವು ಮಾನವ ಇತಿಹಾಸದಲ್ಲಿಯೇ ಅತಿದೊಡ್ಡ ಧಾರ್ಮಿಕ ನರಮೇಧದ ಉದಾಹರಣೆಯಾಗಿದೆ. ಹಿಂದೂಗಳ ಈ ನರಮೇಧ ಯಹೂದಿಗಳ ನರಮೇಧಕ್ಕಿಂತ 2 ಸಾವಿರ ಪಟ್ಟು ಹೆಚ್ಚಿದೆ; ಆದರೆ ಹಿಂದೂ ಸಮಾಜವು ಇದರತ್ತ ವಿಶ್ವ ಸಮುದಾಯದ ಗಮನ ಸೆಳೆಯುವಲ್ಲಿ ವಿಫಲವಾಗಿದೆ.

3. ನೈತಿಕವಾಗಿ ಭ್ರಷ್ಟರಾಗಿರುವ ಇತಿಹಾಸಕಾರರು ಈ ಬೃಹತ್ ಹತ್ಯಾಕಾಂಡವನ್ನು ವಿದ್ಯಾರ್ಥಿಗಳಿಂದ ದೂರವಿಟ್ಟರು. ಸ್ವತಂತ್ರ ಭಾರತದ ತಲೆಮಾರುಗಳು ಹಿಂದೂಗಳು ತಮ್ಮ ಸ್ವಂತ ಇಚ್ಛೆಯ ಆಕ್ರಮಣಕಾರರಿಂದ ಆಳಲ್ಪಡುವ ಗುಲಾಮ-ಮನಸ್ಸಿನ ಸಮುದಾಯವೆಂದು ತಿಳಿದುಕೊಂಡು ಬೆಳೆದವು.
4. ಆದರೂ ಹಿಂದೂಗಳ ಪ್ರತಿಷ್ಠೆ ಮತ್ತು ಶೌರ್ಯವು ಇಷ್ಟೊಂದು ಕುಸಿದಿದ್ದರೂ ಸಹ 1,400 ವರ್ಷಗಳ ಆಕ್ರಮಣದ ನಂತರವೂ ಅವರು ತಮ್ಮ ಸಂಖ್ಯೆಯನ್ನು 80%ರಷ್ಟು ಉಳಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

‘ಸಾಮೂಹಿಕ ತರ್ಪಣ ವಿಧಿ’ಗೆ ಸಿಕ್ಕ ಸ್ಪಂದನೆ !

ಅಕ್ಟೋಬರ್ 2 ರಂದು ಬೆಳಿಗ್ಗೆ 10.30 ರಿಂದ 12.00 ರವರೆಗೆ ಈ ಕೆಳಗಿನ ಸ್ಥಳಗಳಲ್ಲಿ ಸಾಮೂಹಿಕ ತರ್ಪಣ ವಿಧಿಯನ್ನು ಆಯೋಜಿಸಲಾಗಿದೆ :

1. ಉತ್ತರಾಖಂಡ: ಹರಿದ್ವಾರದ ಚಂಡಿ ಘಾಟ್‌ನಲ್ಲಿ ಪ್ರಮುಖ ತರ್ಪಣ ವಿಧಿ ನಡೆಯಲಿದೆ! ‘ಸೋಶಿಯಲ್ ಬಲೂನಿ ಪಬ್ಲಿಕ್ ಸ್ಕೂಲ್’ನ 50 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

2. ಹಿಮಾಚಲ ಪ್ರದೇಶ :
ಅ. ಚಂಬಾ ಜಿಲ್ಲೆ: ಭಲೈ, ತಿಸ್ಸಾ, ಪಾಂಗಿ, ಕುಗ್ತಿ, ಸಾಹೋ ಇತ್ಯಾದಿ ಸ್ಥಳ
ಆ. ಕುಲು ಜಿಲ್ಲೆ: ಮಲಾನಾ, ಕೈಸ್, ಕಸೋಲ್, ಶೋಜಾ ಇತ್ಯಾದಿ ಸ್ಥಳ
ಇ. ಕಾಂಗಡಾ ಜಿಲ್ಲೆ: ಧರ್ಮಶಾಲಾ, ಪಾಲಂಪುರ್, ದೆಹಹ್ರಾ ಇತ್ಯಾದಿ ಸ್ಥಳ
ಈ. ಸೋಲನ್ ಜಿಲ್ಲೆ: ಚಂಬಘಾಟ್, ಬಡೋಗ್, ಕಂದಘಾಟ್ ಇತ್ಯಾದಿ ಸ್ಥಳ
ಉ. ಸಿರ್ಮೌರ್ ಜಿಲ್ಲೆ: ಕುಮಾರಹಟ್ಟಿ, ಕೋಟ್ಲಾ, ಜೈತ್‌ಪುರ, ರೈತ್ ಇತ್ಯಾದಿ ಸ್ಥಳ

3. ಉತ್ತರ ಪ್ರದೇಶ: ದೇವಹಾ ನದಿ ಘಾಟ್, ಬರ್ಖೇರಾ, ಜಿಲ್ಲೆ ಬರೇಲಿ ಮತ್ತು ಶಿವ ಮಂದಿರ, ಠುಠೀಬಾರಿ, ಜಿಲ್ಲೆ ಮಹಾರಾಜ್‌ಗಂಜ್

4. ಮಧ್ಯಪ್ರದೇಶ: ನೀಲ್ ಗಂಗಾ ಸರೋವರ, ಉಜ್ಜಯಿನಿ; ಕಾತರ್ ಘಾಟ್, ಮೋರಟಕ್ಕಾ, ಅಂಕರೇಶ್ವರ; ಮೋರಟಕ್ಕಾ ಮಾ ನರ್ಮದಾ ಘಾಟ್‌ನಲ್ಲಿ 21 ಯುವಕರು ಮತ್ತು ಯುವತಿಯರು ಸಾಮೂಹಿಕ ತರ್ಪಣ ನೀಡಲಿದ್ದಾರೆ.

5. ಮಹಾರಾಷ್ಟ್ರ : ಶ್ರೀ ಓಂಕಾರೇಶ್ವರ ದೇವಸ್ಥಾನ, ಪುಣೆ ಮತ್ತು N.R.I. ಕಾಂಪ್ಲೆಕ್ಸ್, ನವಿ ಮುಂಬಯಿ.

ಸಂಪಾದಕೀಯ ನಿಲುವು

ಹಿಂದೂ ಜನಜಾಗೃತಿಗೆ ಇಂತಹ ಚಟುವಟಿಕೆಗಳು ಅತೀ ಅಗತ್ಯವಾಗಿದ್ದು ಮೀನಾಕ್ಷಿ ಶರಣರನ್ನು ಅಭಿನಂದನೆ ಸಲ್ಲಿಸಿದಷ್ಟೂ ಕಡಿಮೆಯೆ ! ಹಿಂದೂಗಳು ಇಂತಹ ಚಟುವಟಿಕೆಗಳಿಂದ ಬೋಧನೆ ಪಡೆದು ಹಾಗೂ ಇತಿಹಾಸದಿಂದ ಕಲಿತು ಹಿಂದೂ ಧರ್ಮದ ರಕ್ಷಣೆಗಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು ಎಂಬುದೇ ಆಶಯ !