ಉತ್ತರಪ್ರದೇಶದಲ್ಲಿ ದೇವಸ್ಥಾನದ ಸಮೀಪ ಮತಾಂಧರನ್ನು ಮದ್ಯಪಾನ ಮಾಡುವುದನ್ನು ತಡೆದಿದ್ದರಿಂದ ರಾ.ಸ್ವ. ಸಂಘದ ಕಾರ್ಯಾಲಯದ ಮೇಲೆ ಹಲ್ಲೆ !

  • ಇಬ್ಬರು ಕಾರ್ಯಕರ್ತರಿಗೆ ಗಂಭೀರ ಗಾಯ

  • ಭಾರತಮಾತೆಯ ಚಿತ್ರವನ್ನು ಹರಿದರು !

  • ೧೦ ಜನರ ಬಂಧನ

ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಸಂಘಟನೆಗಳ ಕಾರ್ಯಾಲಯಕ್ಕೆ ಮತ್ತು ಅವರ ಕಾರ್ಯಕರ್ತರ ಮೇಲೆ ಈ ರೀತಿ ಹಲ್ಲೆಗಳಾಗುವುದು ಹಿಂದೂಗಳು ಅಪೇಕ್ಷಿತವಿಲ್ಲ!

ಇಂತಹ ಮತಾಂಧರನ್ನು ಬಂಧಿಸಿ ಅವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲು ಸರಕಾರ ಪ್ರಯತ್ನಿಸಬೇಕು!

ಆಗ್ರಾ (ಉತ್ತರಪ್ರದೇಶ) – ಇಲ್ಲಿಯ ಆಲಮಗಂಜ ಚೌಕಿಯ ಹತ್ತಿರ ರಾಧಾಕೃಷ್ಣ ಮಂದಿರವಿದೆ. ಇಲ್ಲಿಗೆ ಮತಾಂಧರು ಮದ್ಯಪಾನ ಮಾಡಿ ಗಲಾಟೆ ಮಾಡಲು ಬರುತ್ತಿದ್ದರು. ಈ ಮಂದಿರದ ಎದುರಿಗೆ ರಾ.ಸ್ವ. ಸಂಘದ ಕಾರ್ಯಾಲಯವೂ ಇದೆ. ಸಂಘದ ಕಾರ್ಯಕರ್ತರು ಈ ಮತಾಂಧರನ್ನು ಮದ್ಯಪಾನ ಮಾಡಲು ಮತ್ತು ಗಲಾಟೆ ಮಾಡುವುದರಿಂದ ತಡೆದರು. ಆ ಸಮಯದಲ್ಲಿ ಅವರು ಅಲ್ಲಿಂದ ಹೋದರು; ಆದರೆ ಸ್ವಲ್ಪ ಸಮಯದ ಬಳಿಕ ೫೦ ರಿಂದ ೭೦ ಮತಾಂಧರು ಅಲ್ಲಿ ತಲುಪಿದರು ಮತ್ತು ಸಂಘದ ಕಾರ್ಯಾಲಯದ ಮೇಲೆ ಕಲ್ಲು ಎಸೆದರು ಹಾಗೂ ಕಾರ್ಯಾಲಯದಲ್ಲಿ ನುಗ್ಗಿ ಧ್ವಂಸಗೊಳಿಸಿದರು ಮತ್ತು ಅಲ್ಲಿದ್ದ ಭಾರತಮಾತೆಯ ಚಿತ್ರವನ್ನು ಹರಿದರು. ಈ ಹಲ್ಲೆಯಲ್ಲಿ ವಿಕಾಸ ಗುಪ್ತಾ ಮತ್ತು ಶಿವಮ್ ಕುಮಾರ ಈ ಇಬ್ಬರು ಗಂಭೀರವಾಗಿ ಗಾಯಗೊಂಡರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ೧೦ ಜನರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಅಲ್ಲಿಯ ಶಾಸಕ ಯೋಗೇಂದ್ರ ಉಪಾಧ್ಯಾಯ ಇವರು, ‘ಸಂಘದ ಕಾರ್ಯಕರ್ತರಿಗೆ ಮತಾಂಧರು ಬಂಧಿಸಿ ಕರೆದೊಯ್ದರು ಮತ್ತು ಅವರನ್ನು ಥಳಿಸಿದರು. ಒಂದು ವೇಳೆ ಮುಂದಿನ ೨೪ ಗಂಟೆಯೊಳಗೆ ಆರೋಪಿಗಳ ಮೇಲೆ ಕ್ರಮ ಕೈಕೊಳ್ಳದಿದ್ದರೆ, ಪೊಲೀಸರು ಅದರ ಪರಿಣಾಮವನ್ನು ಅನುಭವಿಸಬೇಕಾಗುವುದು’, ಎಂದು ಹೇಳಿದ್ದಾರೆ.