ಶಂಕರಾಚಾರ್ಯರಿಗೆ ಪ್ರವೇಶ ನಿರಾಕರಿಸಿದ ನಾಗಾಲ್ಯಾಂಡ್ ಸರಕಾರ !
ದಿಮಾಪುರ (ನಾಗಾಲ್ಯಾಂಡ್) – ಗೋಹತ್ಯೆ ತಡೆಯುವಂತೆ ಕೋರುವ `ಗೋ ಧ್ವಜ ಸ್ಥಾಪನೆ ಯಾತ್ರೆ’ ಯ ಮೇಲೆ ನಾಗಾಲ್ಯಾಂಡ ಸರಕಾರವು ಸಾರ್ವಜನಿಕ ಶಾಂತಿ ಭಂಗವಾಗುವ ಕಾರಣವನ್ನು ನೀಡಿ ನಿರ್ಬಂಧ ಹೇರಿದೆ. ದಿಮಾಪುರ ಪೊಲೀಸ್ ಆಯುಕ್ತರ ಕಚೇರಿಯಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವು ದಿಮಾಪೂರ, ಚುಮುಕೆಡಿಮಾ ಮತ್ತು ನ್ಯೂಲ್ಯಾಂಡ ಜಿಲ್ಲೆಗಳಿಗೆ ಅನ್ವಯಿಸಲಿವೆ. ರಾಜಧಾನಿ ಕೊಹಿಮಾದಲ್ಲಿ ಸಪ್ಟೆಂಬರ 28 ರಂದು ನಡೆಯಲಿದ್ದ ‘ಗೋ ಧ್ವಜ ಯಾತ್ರೆ’ಯನ್ನು ಅನೇಕ ನಾಗಾ ಸಂಘಟನೆಗಳು ಬಲವಾಗಿ ವಿರೋಧಿಸಿವೆ. ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧವನ್ನು ಬೆಂಬಲಿಸಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಈ ಯಾತ್ರೆ ಈ ಪ್ರದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗಿದೆಯೆಂದು ಹೇಳಲಾಗುತ್ತಿದೆ.
Nagaland Govt bans ‘Go Dhwaj Sthapana Yatra’ 🕉️#Shankaracharya Swami Avimukteshwaranand denied entry
“Why was I stopped?” – Shankaracharya Swami Avimukteshwaranand
Why the silence from advocates of individual freedom & democracy?
How can such a ban be imposed when the BJP is… pic.twitter.com/OivCULOQP0
— Sanatan Prabhat (@SanatanPrabhat) September 28, 2024
ನನ್ನನ್ನು ಏಕೆ ತಡೆಯಲಾಯಿತು? – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ
ಈ ಮೊದಲು ಸೆಪ್ಟೆಂಬರ್ 25 ರಲ್ಲಿ ಜ್ಯೋತಿಷ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ನಾಗಾಲ್ಯಾಂಡನ ಗೋ ಧ್ವಜವನ್ನು ಸ್ಥಾಪಿಸಲು ಹೋದಾಗ ಅಲ್ಲಿನ ಸರಕಾರವು ಅವರಿಗೆ ಪ್ರವೇಶವನ್ನು ನಿರಾಕರಿಸಿತು. (ಈ ಬಗ್ಗೆ ವ್ಯಕ್ತಿ ಸ್ವಾತಂತ್ರ್ಯವಾದಿಗಳು ಅಥವಾ ಪ್ರಜಾಪ್ರಭುತ್ವವಾದಿಗಳು ಏನೂ ಮಾತನಾಡುತ್ತಿಲ್ಲ ಏಕೆ? – ಸಂಪಾದಕರು) ಈ ಕುರಿತು ಶಂಕರಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿ, “ನಾನು ಯಾರಿಗೂ ಹಾನಿ ಮಾಡಿಲ್ಲ ಅಥವಾ ಯಾರಿಗೂ ಕೆಟ್ಟದ್ದನ್ನು ನುಡಿದಿಲ್ಲ. ನಾನು ಕೇವಲ ನನ್ನ ಸಂದೇಶವನ್ನು ಜನರಿಗೆ ತಲುಪಿಸಲು ಬಯಸುತ್ತ್ತಿದ್ದೇನೆ. ನನ್ನನ್ನು ತಡೆದದ್ದು ಯಾಕೆ? ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ನನ್ನ ಪ್ರವಾಸದಲ್ಲಿ ಅಡೆತಡೆಗಳನ್ನು ಒಡ್ಡಬಾರದು. ಗೋಹತ್ಯೆ ಮತ್ತು ಗೋ ಸಂವರ್ಧನೆಗೆ ಸಂಬಂಧಿಸಿದಂತೆ ಅವರಿಗೆ ತೊಂದರೆಯೆನಿಸುವ ಸಮಸ್ಯೆಗಳನ್ನು ಚರ್ಚಿಸಬಹುದು.’’ಎಂದು ಹೇಳಿದರು.
ನಾಗಾ ಸ್ಟೂಡೆಂಟ್ಸ್ ಫೆಡರೇಶನ್ ಶಂಕರಾಚಾರ್ಯರ ಭೇಟಿಯನ್ನು ನಿಷೇಧಿಸಿದೆ ಮತ್ತು ಈ ಯಾತ್ರೆಯು ಸ್ಥಳೀಯ ನಾಗಾ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅವಮಾನವಾಗಿದೆ ಎಂದು ಹೇಳಿದೆ. ಈ ಯಾತ್ರೆಯು ನಾಗಾ ಜನರ ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳನ್ನು ರಕ್ಷಿಸುವ ಸಂವಿಧಾನದ ಕಲಂ 371 ಎ ಅಡಿಯಲ್ಲಿ ನೀಡಲಾದ ಹಕ್ಕುಗಳಿಗೆ ಸವಾಲಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವು
|