ಪ್ರಾಣಿಗಳಿಗೆ ಯಾವುದೇ ಹಕ್ಕುಗಳಿಲ್ಲದಿದ್ದರೂ, ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ! – ಮದ್ರಾಸ್ ಹೈಕೋರ್ಟ್

ವಿದ್ಯುತ್ ಸ್ಪರ್ಶದಿಂದ ಹಸು ಸತ್ತರೆ ಪರಿಹಾರ ನೀಡುವಂತೆ ವಿದ್ಯುತ್ ಇಲಾಖೆಗೆ ಕೋರ್ಟ್ ಆದೇಶ

ಚೆನ್ನೈ (ತಮಿಳುನಾಡು) – ಪ್ರಾಣಿಗಳಿಗೆ ಹಕ್ಕಿಲ್ಲದಿದ್ದರೂ ಅವುಗಳನ್ನು ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ವಿದ್ಯುದಾಘಾತದಿಂದ ಹಸು ಸಾವನ್ನಪ್ಪಿದ್ದು, ಪರಿಹಾರ ನೀಡುವಂತೆ ತಮಿಳುನಾಡು ವಿದ್ಯುತ್ ಇಲಾಖೆಗೆ ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿಭಾಗೀಯಪೀಠವು ರಾಜ್ಯ, ಸರಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳೊಂದಿಗೆ ಪುರಸಭೆಗಳು ಮತ್ತು ಪಂಚಾಯತ್‌ಗಳು ಪ್ರಾಣಿಗಳಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಬದ್ಧವಾಗಿವೆ ಎಂದು ಹೇಳಿದರು.

ಏನಿದು ಪ್ರಕರಣ ?

ಘಟನೆಯಲ್ಲಿ ವ್ಯಕ್ತಿಯೊಬ್ಬರ ಒಡೆತನದ 4 ಹಸುಗಳು ಮೇಯಲು ಹೋಗುತ್ತಿದ್ದವು. ಹೊಲವೊಂದರಲ್ಲಿ 100 ‘ಕೆವಿಎ ಪವರ್’ನ ‘ಟ್ರಾನ್ಸ್‌ಫಾರ್ಮರ್’ ಪಕ್ಕದ ಕೊಚ್ಚೆ ಗುಂಡಿಗೆ ಹಸುವೊಂದು ಪ್ರವೇಶಿಸಿದೆ. ಆ ಹೊಂಡದಲ್ಲಿ ವಿದ್ಯುತ್ ಸೋರಿಕೆಯಾಗಿ ಹಸು ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ. ಅದರ ಮಾಲೀಕರು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯ ಮೇಲ್ಕಂಡ ಆದೇಶ ನೀಡಿದೆ.