ಧಾರವಾಡ : ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಯಲ್ಲಿ ವಂಚನೆ ಆಗಿದೆಯೆಂದು ಧಾರವಾಡ ಜಿಲ್ಲೆಯಲ್ಲಿನ ನವಲಗುಂದದ ಮಾಹಿತಿ ಅಧಿಕಾರಿ ಕಾರ್ಯಕರ್ತರಾದ ಮಾಬುಸಾಬ್ ಯರಗುಪ್ಪಿ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ೫ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು ಮತ್ತು ಆ ಆಯೋಜನೆಗಳ ಲಾಭಕ್ಕಾಗಿ ಬೃಹತ್ ಸಭೆಗಳನ್ನು ಕೂಡ ನಡೆಸಿತ್ತು. ಈ ವರ್ಷದ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ ೫ ಗ್ಯಾರಂಟಿ ಸಭೆಗಳು ನಡೆದಿದ್ದವು, ಅದರಲ್ಲಿ ಮುಖ್ಯಮಂತ್ರಿಗಳು ಸ್ವತಃ ಭಾಗಿಯಾಗಿದ್ದರು. ಈ ಸಭೆಯ ಲೆಕ್ಕಾಚಾರದಲ್ಲಿ ಗೊಂದಲವಿರುವ ಬಗ್ಗೆ ಎರಗುಪ್ಪಿ ಆರೋಪಿಸಿದ್ದಾರೆ.