Dry Fruits Prasad : ದೇವಸ್ಥಾನಗಳಲ್ಲಿ ಪ್ರಸಾದವೆಂದು ಡ್ರೈಫ್ರೂಟ್ಸ ಬಳಸಲಾಗುವುದು !

ಕಾಶಿ ವಿದ್ವತ್ ಪರಿಷತ್ತಿನ ನಿರ್ಣಯ

ವಾರಣಾಸಿ – ಕಾಶಿ ವಿದ್ವತ್ ಪರಿಷತ್ತು ದೇಶದ ದೇವಸ್ಥಾನಗಳಲ್ಲಿ ನೂತನ ಪ್ರಸಾದ ಪದ್ಧತಿಯನ್ನು ಜಾರಿಗೆ ತರಲು ಪ್ರಯತ್ನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಡ್ರೈಫ್ರೂಟ್ಸ ಗಳನ್ನು ದೇವಸ್ಥಾನಗಳಲ್ಲಿ ಪ್ರಸಾದವಾಗಿ ಬಳಸಲಾಗುತ್ತದೆ. ಪ್ರಸಾದದಲ್ಲಿನ ಕಲಬೆರಕೆಯನ್ನು ತಡೆಯಲು ಕಾಶಿ ವಿದ್ವತ್ ಪರಿಷತ್ ಮತ್ತು ಅಖಿಲ ಭಾರತೀಯ ಸಂತ ಸಮಿತಿ ಸೇರಿದಂತೆ ಕಾಶಿಯ ಅನೇಕ ಧಾರ್ಮಿಕ ಸಂಘಟನೆಗಳು ಪ್ರಸಾದವೆಂದು ಬತ್ತಾಸು ಮತ್ತು ಡ್ರೈಫ್ರೂಟ್ಸ ಗಳನ್ನು ಬಳಸಲು ನಿರ್ಧರಿಸಿವೆ.

1. ಕಾಶಿ ವಿದ್ವತ್ ಪರಿಷತ್ತಿನ ಮುಖ್ಯ ಕಾರ್ಯದರ್ಶಿ ರಾಮನಾರಾಯಣ ದ್ವಿವೇದಿ ಮಾತನಾಡಿ, ಭಾರತದ ಎಲ್ಲಾ ದೇವಸ್ಥಾನಗಳಲ್ಲಿ ಕಾಶಿ ವಿದ್ವತ್ ಪರಿಷತ್ತು ಎಲ್ಲಾ ಸಂತರೊಂದಿಗೆ ಚರ್ಚಿಸಿದ ನಂತರ ಎಲ್ಲಾ ಧಾರ್ಮಿಕ ಖಾದ್ಯ ಪದಾರ್ಥಗಳು ಸಂಪೂರ್ಣವಾಗಿ ಶುದ್ಧ ಮತ್ತು ಸ್ವಚ್ಛವಾಗಿಟ್ಟುಕೊಳ್ಳಲು ವ್ಯವಸ್ಥೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

2. ತಿರುಪತಿ ಬಾಲಾಜಿ ಮಂದಿರದಲ್ಲಿ ಅಶುದ್ಧ ಪ್ರಸಾದ ನೀಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಯಾಗರಾಜ್‌ನ ಪ್ರಮುಖ ದೇವಸ್ಥಾನಗಳಲ್ಲಿ ಹೊರಗಿನಿಂದ ಸಿಹಿತಿಂಡಿ, ಲಡ್ಡು, ಪೇಡಾ ಇತ್ಯಾದಿಗಳ ಪ್ರಸಾದವನ್ನು ತರಲು ನಿರ್ಬಂಧಿಸಲಾಗಿದೆ.

3. ಆಲೋಪ್ ಶಂಕರಿದೇವಿ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಶ್ರೀ ಪಂಚಾಯತಿ ಅಖಾಡಾ ಮಹಾನಿರ್ವಾಣಿ ಕಾರ್ಯದರ್ಶಿ ಯಮುನಾ ಪುರಿ ಮಹಾರಾಜ್ ಮಾತನಾಡಿ, ಸಧ್ಯ ಭಕ್ತರಿಗೆ ಹೊರಗಿನಿಂದ ದೇವಸ್ಥಾನದಲ್ಲಿ ಸಿಹಿ ಪ್ರಸಾದವನ್ನು ತರಲು ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.

4. ಸಂಗಮದ ದಡದಲ್ಲಿರುವ ಬಡೇ ಹನುಮಾನ್ ದೇವಸ್ಥಾನದ ಅರ್ಚಕ ಹಾಗೂ ಶ್ರೀಮಠದ ಬಾಘಂಬರಿ ಗಡ್ಡಿಯ ಮಹಾಂತ ಬಲಬೀರ ಗಿರಿಜಿ ಮಹಾರಾಜರು ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿಯು ಸ್ವತಃ ಲಡ್ಡುವಿನ ನೈವೇದ್ಯವನ್ನು ತಯಾರಿಸಿ ದೇವರಿಗೆ ಅರ್ಪಿಸುವುದು ಮತ್ತು ಅದನ್ನು ಭಕ್ತರಿಗೆ ನೀಡಲಾಗುವುದು ಎಂದು ಹೇಳಿದರು.

5. ಯಮುನೆಯ ದಡದಲ್ಲಿರುವ ಮನಕಾಮೇಶ್ವರ ದೇವಸ್ಥಾನದ ಮಹಂತ್ ಶ್ರೀಧರಾನಂದ ಬ್ರಹ್ಮಚಾರಿಜಿ ಮಹಾರಾಜ್ ಅವರು ಮಾತನಾಡಿ, ತಿರುಪತಿಯ ವಿವಾದದ ಬಳಿಕ ಮನಕಾಮೇಶ್ವರ ದೇವಸ್ಥಾನದಲ್ಲಿ ಹೊರಗಿನಿಂದ ಪ್ರಸಾದವನ್ನು ತರಲು ನಿರ್ಬಂಧಿಸಲಾಗಿದೆಯೆಂದು ಹೇಳಿದರು.

6. ಪ್ರಯಾಗ್‌ರಾಜ್‌ನಲ್ಲಿರುವ ಪ್ರಸಿದ್ಧ ಶ್ರೀ ಲಲಿತಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ಶಿವ ಮುರತ್ ಮಿಶ್ರಾ ಅವರು ಮಾತನಾಡಿ ದೇವಸ್ಥಾನದಲ್ಲಿ ದೇವಿಗೆ ಸಿಹಿ ಪ್ರಸಾದವನ್ನು ನೀಡಲಾಗುವುದಿಲ್ಲ; ಬದಲಾಗಿ ತೆಂಗಿನಕಾಯಿ, ಹಣ್ಣು, ಡ್ರೈಫ್ರೂಟ್ಸ ಗಳನ್ನು ಭಕ್ತರಿಗೆ ಪ್ರಸಾದವೆಂದು ನೀಡಲಾಗುವುದು. ಭವಿಷ್ಯದಲ್ಲಿ ದೇವಸ್ಥಾನದ ಪರಿಸರದಲ್ಲಿಯೇ ಅಂಗಡಿಗಳನ್ನು ತೆರೆಯುವ ಯೋಜನೆಯಿದ್ದು, ಅಲ್ಲಿ ಭಕ್ತರಿಗೆ ಶುದ್ಧ ಸಿಹಿ ಪ್ರಸಾದ ಸಿಗುವುದು ಎಂದು ಹೇಳಿದರು.