Word ‘Dharma’ Petition : ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಪದದ ಬದಲಿಗೆ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಉಪಯೋಗಿಸಲು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲು

ಉಚ್ಚನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಉತ್ತರ ನೀಡುವಂತೆ ಆದೇಶ

ನವ ದೆಹಲಿ – ದೆಹಲಿ ಉಚ್ಚನ್ಯಾಯಾಲಯವು ಸರಕಾರಿ ದಾಖಲೆಗಳಲ್ಲಿ ಜನನ ಪ್ರಮಾಣಪತ್ರ, ಆಧಾರ ಕಾರ್ಡ್‌, ರೇಶನಕಾರ್ಡ, ಬ್ಯಾಂಕ ಖಾತೆ, ವಾಹನ ಚಾಲನೆ ಪರವಾನಿಗೆ (ಡ್ರೈವಿಂಗ ಲೈಸನ್ಸ) ಇತ್ಯಾದಿ ಸರಕಾರಿ ದಾಖಲೆಗಳಲ್ಲಿ ‘ಧರ್ಮ’ ಈ ಶಬ್ದದ ಬದಲಾಗಿ ‘ಪಂಥ’ ಅಥವಾ ‘ಸಂಪ್ರದಾಯ’ ಈ ಶಬ್ದಗಳನ್ನು ಬಳಸಬೇಕೆಂದು ಒತ್ತಾಯಿಸುವ ಅರ್ಜಿಗೆ ಕೇಂದ್ರ ಸರಕಾರಕ್ಕೆ ಉತ್ತರ ನೀಡುವಂತೆ ಆದೇಶ ನೀಡಿದೆ. ಕಾರ್ಯಕಾರಿ ಮುಖ್ಯ ನ್ಯಾಯಾಧೀಶರ ಅಧ್ಯಕ್ಷತೆಯಡಿಯಲ್ಲಿ ವಿಭಾಗೀಯಪೀಠವು ಕೇಂದ್ರೀಯ ಸಂಸ್ಕೃತಿ ಮತ್ತು ಶಿಕ್ಷಣ ಸಚಿವಾಲಯಕ್ಕೆ ಈ ಅರ್ಜಿಯ ಕುರಿತು ವಿಚಾರ ಮಾಡಿ ಕಾನೂನಿನ್ವಯ ನಿರ್ಣಯವನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಿದೆ.

1. ವಿಚಾರಣೆಯ ವೇಳೆ ನ್ಯಾಯಾಲಯವು ಅರ್ಜಿದಾರರಿಗೆ, ನಾವು ತತ್ವಜ್ಞಾನಿಗಳಲ್ಲ ಎಂದು ಹೇಳಿದೆ. ನೀವು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಕೆಲವೊಮ್ಮೆ ನೀವು ನಮ್ಮನ್ನು ಅಂತರಾಷ್ಟ್ರೀಯ `ಬ್ಯಾಂಕಿಂಗ್ ಎಕ್ಸಚೇಂಜ’ ನ ಪರಿಣಿತರು ಎಂದು ತಿಳಿಯುತ್ತೀರಿ ಮತ್ತು ಕೆಲವೊಮ್ಮೆ ನೀವು ನಮ್ಮನ್ನು ತತ್ವಜ್ಞಾನಿಗಳೆಂದು ತಿಳಿಯುತ್ತೀರಿ. ಅದರೊಂದಿಗೆ ನಮಗೂ ಯಾವುದೇ ಸಂಬಂಧವಿಲ್ಲ. ಇದೆಲ್ಲದರ ಮೇಲೆ ಕೇಂದ್ರ ಸರಕಾರವೇ ನಿರ್ಣಯ ತೆಗೆದುಕೊಳ್ಳಬೇಕು.

2. ಉಚ್ಚ ನ್ಯಾಯಾಲಯವು ನವೆಂಬರ 28, 2023 ರಂದು ಕೇಂದ್ರ ಮತ್ತು ದೆಹಲಿ ಸರಕಾರಗಳಿಗೆ ನೋಟಿಸ್ ನೀಡಿತ್ತು. ಅರ್ಜಿಯಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಧರ್ಮ ಮತ್ತು ಪಂಗಡದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುವ ಅಧ್ಯಾಯವನ್ನು ಸೇರಿಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಭಾಜಪ ಮುಖಂಡ ಹಾಗೂ ವಕೀಲರಾದ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು ಈ ಅರ್ಜಿ ದಾಖಲಿಸಿದ್ದಾರೆ.

3. ಧಾರ್ಮಿಕ ಕಾರಣಗಳಿಂದಾಗಿ ದ್ವೇಷ ಮತ್ತು ದ್ವೇಷಭಾವನೆಗಳನ್ನು ನಿಯಂತ್ರಿಸಲು ಮತ್ತು ಸಾಮಾನ್ಯ ಜನರಿಗೆ ಧರ್ಮದ ಬಗ್ಗೆ ಶಿಕ್ಷಣ ನೀಡಲು ಶಾಲಾ ಪಠ್ಯಕ್ರಮದಲ್ಲಿ ಪಂಥಗಳು ಮತ್ತು ಧರ್ಮಗಳನ್ನು ಸೇರಿಸಬೇಕು ಎಂದು ಅರ್ಜಿಗಳಲ್ಲಿ ಹೇಳಲಾಗಿತ್ತು.

4. ಅರ್ಜಿಯಲ್ಲಿ, ಧರ್ಮಕ್ಕೆ ‘ಪಂಥ’ ಅಥವಾ ‘ಧರ್ಮ’ ಎನ್ನುವ ಸೂಕ್ತ ಅರ್ಥವನ್ನು ನೀಡಬೇಕು. ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಶಾಲಾ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್, ರಹಿವಾಸಿ ಪ್ರಮಾಣಪತ್ರ, ಮರಣ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ಮುಂತಾದ ಸರಕಾರಿ ದಾಖಲೆಗಳಲ್ಲಿ ಧರ್ಮದ ಅರ್ಥ ‘ಪಂಥ’ ಎಂದಾಗುವುದಿಲ್ಲ. ಧರ್ಮ ವಿಭಜಿಸುವುದಿಲ್ಲ. ಧರ್ಮ ಇದು ವಿಶ್ವದ ಕ್ರಮ ವೈಶ್ವಿಕ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳುವ ಪ್ರಯತ್ನವಾಗಿದೆ. ಧರ್ಮ ಪರ್ಯಾಯ ಅಥವಾ ಧ್ಯೇಯ ಆಯ್ಕೆ ಮಾಡುವ ಅಪರಿಮಿತ ಸ್ವಾತಂತ್ರ್ಯವನ್ನು ನೀಡುತ್ತದೆ. ಜಾತ್ಯತೀತತೆ ಮತ್ತು ಸಹಿಷ್ಣುತೆ ಧರ್ಮದಲ್ಲಿ ಅಂತರ್ಗತವಾಗಿರುತ್ತದೆ. ಪಂಥ ಮತ್ತು ಸಂಪ್ರದಾಯದಲ್ಲಿ ಜ್ಞಾನದ (ತಿಳಿವಳಿಕೆ) ಕೊರತೆ ಇದೆ. ಪಂಥದಲ್ಲಿ ಅನೇಕ ವಿಷಯಗಳು ತರ್ಕಬದ್ಧವಾಗಿಲ್ಲ. ಧರ್ಮಕ್ಕಾಗಿ ಅನೇಕ ಯುದ್ಧಗಳು ಮತ್ತು ಯುದ್ಧದಂತಹ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಧರ್ಮದಲ್ಲಿ ಜನರು ಒಬ್ಬ ವ್ಯಕ್ತಿಯ ಅಥವಾ ಅವನ ಮಾರ್ಗವನ್ನು ಅನುಸರಿಸುತ್ತಾರೆ. ಧರ್ಮವು ವಿವೇಕ ಮತ್ತು ಬುದ್ಧಿವಂತಿಕೆಯ ಫಲವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಧರ್ಮ ಮತ್ತು ಪಂಥದ ಅರ್ಥಗಳು ಸಂಪೂರ್ಣವಾಗಿ ವಿಭಿನ್ನವಾಗಿವೆ.