ಎರ್ನಾಕುಲಂ (ಕೇರಳ) ಇಲ್ಲಿ ಪ್ರವಾಸಿ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ

೧೫ ಪೊಲೀಸರಿಗೆ ಗಾಯ

ಪೊಲೀಸರ ೩ ವಾಹನಗಳು ಜಖಂ

ಪೊಲೀಸರ ಮೇಲೆ ಹಲ್ಲೆಯಾಗುತ್ತದೆ ಮತ್ತು ಅವರು ಹೊಡಿಸಿಕೊಳ್ಳುತ್ತಿದ್ದರೆ, ಜನಸಾಮಾನ್ಯರನ್ನು ಯಾರು ರಕ್ಷಿಸುವರು ? ಭಯೋತ್ಪಾದಕರಿಂದ ಪೊಲೀಸರು ತಮ್ಮ ಮತ್ತು ಜನರ ರಕ್ಷಣೆ ಹೇಗೆ ಮಾಡುವರು ?

ಕೊಚ್ಚಿ (ಕೇರಳ) – ಎರ್ನಾಕುಲಂ ಜಿಲ್ಲೆಯಲ್ಲಿ ಕಿಝಕ್ಕಂಬಲಂ ಇಲ್ಲಿ ‘ಕಿಟೆಕ್ಸ್ ಕಂಪನಿಯ ಕಾರ್ಮಿಕರ ಶಿಬಿರದ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿರುವಾಗ ನಾಗಾಲ್ಯಾಂಡ್ ಮತ್ತು ಮಣಿಪುರ್ ಇಲ್ಲಿಯ ಮದ್ಯಪಾನ ಮಾಡಿರುವ ಪ್ರವಾಸಿಗರು ಪೊಲೀಸರ ಮೇಲೆ ಹಲ್ಲೆ ನಡೆಸಿ ಹಿಂಸಾಚಾರ ನಡೆಸಿದ್ದಾರೆ. ಇದರಲ್ಲಿ ಪೊಲೀಸರ ಒಂದು ವಾಹನವನ್ನು ಸುಟ್ಟು ಹಾಕಿದ್ದಾರೆ ಹಾಗೂ ಎರಡು ವಾಹನಗಳನ್ನು ಧ್ವಂಸ ಮಾಡಿಸಿದ್ದಾರೆ. ಇದರಲ್ಲಿ ಓರ್ವ ನಿರೀಕ್ಷಕ ಸಹಿತ ೧೫ ಪೊಲೀಸರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವು ಜನರಿಗೆ ಶಸ್ತಚಿಕಿತ್ಸೆ ಸಹ ಮಾಡಬೇಕಾಯಿತು; ಆದರೆ ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ. ‘ಈ ಘಟನೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಗುರುತಿಸಲು ಮತ್ತು ಸಾಕ್ಷಿಗಳನ್ನು ಸಂಗ್ರಹಿಸಲು ತನಿಖೆ ಆರಂಭಿಸಲಾಗಿದೆ’, ಎಂದು ಪೊಲೀಸ್ ಅಧೀಕ್ಷಕ ಕೆ. ಕಾರ್ತಿಕ್ ಇವರು ಪತ್ರಕರ್ತರಿಗೆ ತಿಳಿಸಿದರು. ಕಿಟೆಕ್ಸ ಕಂಪನಿಯಲ್ಲಿ ಕೆಲಸ ಮಾಡುವ ಮತ್ತು ಅವರಿಗಾಗಿ ಕಟ್ಟಿರುವ ಗೃಹನಿರ್ಮಾಣ ಶಿಬಿರದಲ್ಲಿರುವ ಸರಾಸರಿ ೧೫೦ ಕಾರ್ಮಿಕರನ್ನು ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಪೊಲೀಸರು ಈ ಕಾರ್ಮಿಕರಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

೧. ಈ ಹಿಂಸಾಚಾರವು ಕಾರ್ಮಿಕರ ಗುಂಪಿನಿಂದ ನಡೆದಿರುವ ವಿವಾದದಿಂದ ಆರಂಭವಾಗಿದೆ. ಅವರು ವಾದ-ವಿವಾದದ ನಂತರ ಇಲ್ಲಿಯ ಸ್ಥಳೀಯ ಜನರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರ ಮಾಹಿತಿ ಪೊಲೀಸರಿಗೆ ಸಿಗುತ್ತಿದ್ದಂತೆ ಘಟನಾಸ್ಥಳಕ್ಕೆ ಬಂದಿದ್ದು, ಕಾರ್ಮಿಕರು ಅವರ ಮೇಲೆಯೂ ಕಲ್ಲುತೂರಾಟ ಮತ್ತು ಲಾಠಿಗಳಿಂದ ಹಲ್ಲೆ ನಡೆಸಿದರು.

೨. ಕಿಟೆಕ್ಸ್‌ನ ಅಧ್ಯಕ್ಷ ಜೈಕಬ ಇವರು, ಇಲ್ಲಿ ಕೆಲವು ಗುಂಪುಗಳು ಈ ಕಾರ್ಮಿಕರಿಗೆ ಮಾದಕ ವಸ್ತುಗಳು ಸರಬರಾಜು ಮಾಡುತ್ತವೆ. ಈ ನಶೆಯಲ್ಲಿ ಕಾರ್ಮಿಕರು ಗಲಾಟೆ ಮಾಡುತ್ತಾರೆ. (ಅಲ್ಲಿ ಸ್ಥಳೀಯ ಗುಂಪುಗಳು ಮಾದಕ ವಸ್ತುಗಳು ಪೂರೈಸುತ್ತವೆ, ಇದು ಜೈಕಬ ಇವರಿಗೆ ತಿಳಿದಿದ್ದರೆ, ಪೊಲೀಸರಿಗೂ ತಿಳಿದೇ ಇರುತ್ತದೆ, ಆದರೂ ಪೊಲೀಸರು ಅವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲ, ಇದರ ಅರ್ಥ ಇಬ್ಬರಲ್ಲಿ ಒಡಂಬಡಿಕೆ ಇದೆ ಎಂಬುದು ಸ್ಪಷ್ಟವಾಗುತ್ತದೆ. – ಸಂಪಾದಕರು)