Mysore to Mahishuru : ಮಹಿಷ ದಸರಾ ಸಮಿತಿಯಿಂದ ಮೈಸೂರಿಗೆ ‘ಮಹಿಷೂರು’ ಎಂದು ನಾಮಕರಣ !

ಚಾಮುಂಡಿ ಬೆಟ್ಟಕ್ಕೆ ‘ಮಹಿಷ ಬೆಟ್ಟ’ ಎಂದು ಹೆಸರು !

(ಮಹಿಷಾ ದಸರಾ ಎಂದರೆ ಮಹಿಷಾಸುರನ ಹಬ್ಬ)

ಮೈಸೂರು – ಮಹಿಷ ದಸರಾ ಆಚರಣೆಯ ಸಮಿತಿಯು ಬಿಡುಗಡೆ ಮಾಡಿರುವ ಆಮಂತ್ರಣ ಪತ್ರಿಕೆಯಲ್ಲಿ ಮೈಸೂರಿನ ಹೆಸರನ್ನು ‘ಮಹಿಷರು’ ಮತ್ತು ಚಾಮುಂಡಿ ಬೆಟ್ಟವನ್ನು ‘ಮಹಿಷ ಬೆಟ್ಟ’ ಎಂದು ಮುದ್ರಿಸಲಾಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಿತಿಯು ಸೆಪ್ಟೆಂಬರ್ 29 ರಂದು ಮಹಿಷ ದಸರಾವನ್ನು ಆಚರಿಸುವ ಉದ್ದೇಶವನ್ನು ಹೊಂದಿದೆ. ಅಂದು ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನಿಗೆ ಪುಷ್ಪಹಾರ ಸಲ್ಲಿಸಿ ನಂತರ ನಗರ ಭವನದಲ್ಲಿ ಕಾರ್ಯಕ್ರಮ ನಡೆಸಲಿದ್ದಾರೆ. ಈ ದಸರಾಗೆ ವಿರೋಧ ವ್ಯಕ್ತವಾಗುತ್ತಿದೆ.

ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ವಿರೋಧಿಸಲಾಗುವುದು ! – ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ

ಮಹಿಷ್ ದಸರಾ ಆಚರಿಸುವ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸುವ ಪ್ರಯತ್ನ ನಡೆದರೆ ನಾವು ‘ಚಾಮುಂಡಿ ಚಲೋ’ ಅಭಿಯಾನ ನಡೆಸುತ್ತೇವೆ. ಮಹಿಷನ ಭಕ್ತರು ಗೆಲ್ಲುವರೋ ಅಥವಾ ಚಾಮುಂಡಿ ಭಕ್ತರೋ ನೋಡೋಣ ಎಂದು ಖಡಕ್ ಆಗಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಅಸುರನನ್ನು ವೈಭವಿಕರಿಸುವವರು ಧರ್ಮದ್ರೋಹಿಗಳಾಗಿದ್ದು ಅವರ ವಿರುದ್ಧ ಅಪರಾಧ ದಾಖಲಿಸಿ ಜೈಲಿಗೆ ತಳ್ಳಬೇಕು !