ಬಾಂಗ್ಲಾದೇಶದಲ್ಲಿ ಹಿಂದೂ ದೇವತೆಗಳ ಮೂರ್ತಿ ಧ್ವಂಸ ಮಾಡಿದ ಛಾಯಾಚಿತ್ರವನ್ನು ಟ್ವಿಟ್ ಮಾಡಿದ್ದಕ್ಕೆ ಕೊಲಕಾತಾ ಪೊಲೀಸರಿಂದ ಹಿಂದೂ ಖಾತೆದಾರನಿಗೆ ನೋಟೀಸ್ !

ಬಾಂಗ್ಲಾದೇಶದ ಸರಕಾರವಲ್ಲ, ಬಂಗಾಲದಲ್ಲಿರುವ ಕೊಲಕಾತಾ ಪೊಲೀಸರು ಈ ವಿಷಯದ ಬಗ್ಗೆ ಓರ್ವ ಹಿಂದೂಗೆ ನೊಟೀಸ್ ನೀಡುತ್ತಾರೆ ಎಂಬುದು ಖೇದಕರ ! ಬಂಗಾಲದಲ್ಲಿರುವ ತೃಣಮೂಲ ಕಾಂಗ್ರೆಸ್ ಬಂಗಾಲದಲ್ಲಿ ಅಧಿಕಾರದಲ್ಲಿದೆಯೇ ಅಥವಾ ಬಾಂಗ್ಲಾದೇಶದಲ್ಲಿ ?

ಕರ್ನಾಟಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ಪ್ರಯೋಜನವಿಲ್ಲ. – ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗಲೂ ಇಂತಹ ಪ್ರಕರಣಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಕಾನೂನಿನಂತೆ ಕ್ರಮ ಕೈಗೊಳ್ಳದಿರುವ ಆಡಳಿತಾಧಿಕಾರಿ ಮತ್ತು ಪೊಲೀಸರನ್ನೆ ಸರಕಾರ ಜೀವಾವಧಿ ಸೆರೆಮನೆಯಲ್ಲಿಡಬೇಕು !

ಬಂಗಾಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರ ಟ್ವಿಟರ್ ಖಾತೆ ತಾತ್ಕಾಲಿಕ ಬಂದ್

ಬಂಗಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಟ್ವಿಟರ್ ಈ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ‘ಸ್ಟೋರೀಸ್ ಆಫ್ ಬಂಗಾಲಿ ಹಿಂದೂಸ್’ ಹೆಸರಿನ ಬಳಕೆದಾರರ ಖಾತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಆಧಾರದಲ್ಲಿ ಚಲನಚಿತ್ರ ನಿರ್ಮಾಣಕ್ಕಾಗಿ ಚಿತ್ರನಿರ್ಮಾಪಕರಿಗೆ ಸಹಾಯ ಮಾಡುವೆವು ! – ಅನುರಾಗ ಸಿಂಹ ಠಾಕೂರ, ಕೇಂದ್ರೀಯ ಮಾಹಿತಿ ಮತ್ತು ಪ್ರಸಾರಣ ಮಂತ್ರಿ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಈ ವಿಷಯ ಆಧಾರಿತ ಚಲನಚಿತ್ರ ನಿರ್ಮಾಣ ಮಾಡುವುದ್ದಕ್ಕಾಗಿ ‘ನ್ಯಾಶನಲ್ ಫಿಲ್ಮ್ ಡೆವಲಪ್.ಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್.ಎಫ್,ಡಿ.ಸಿ.) ಮೂಲಕ ಚಲನಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಲಾಗುವುದು.

‘ನಾವು ೪೦ ಕೋಟಿ ಇದ್ದೇವೆ, ನಮ್ಮನ್ನು ದುರ್ಬಲರೆಂದು ತಿಳಿಯಬೇಡಿ !’ (ಯಂತೆ)

ಮಥುರಾದಲ್ಲಿ ಅಯೋಧ್ಯೆಯಂತಹ ಸ್ಥಿತಿಯನ್ನು ಉದ್ಭವಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದಲ್ಲಿ ೪೦ ಕೋಟಿಗಿಂತಲೂ ಹೆಚ್ಚು ಮುಸಲ್ಮಾನರಿದ್ದಾರೆ. ಅವರನ್ನು ದುರ್ಬಲರೆಂದು ತಿಳಿಯಬೇಡಿ.

ದೆಹಲಿಯ ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯದಿಂದ ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ೨೪ ತಾಸುಗಳ ಗಡುವು

ಒಂದು ವೇಳೆ ನೀವು ಮಾಲಿನ್ಯವನ್ನು ತಡೆಯಲು ಕ್ರಮ ವಹಿಸದಿದ್ದರೆ ನಾವು ನಾಳೆ ಕಠಿಣ ಕಾರ್ಯಾಚರಣೆ ನಡೆಸುವೆವು. ನಾವು ನಿಮಗೆ ೨೪ ತಾಸುಗಳ ಗಡುವು ನೀಡುತ್ತಿದ್ದೇವೆ. ಈ ಗಡುವಿನೊಳಗೆ ಉಪಾಯ ಹುಡುಕದಿದ್ದರೆ ನಾವು ಹೆಜ್ಜೆಯನ್ನಿಡುವೆವು ಎಂದು ಸರ್ವೋಚ್ಚ ನ್ಯಾಯಾಲಯವು ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ.

ಭಾರತದ ಕರ್ನಾಟಕದಲ್ಲಿ ಓಮಿಕ್ರಾನ್‌ನ ೨ ರೋಗಿಗಳು ಪತ್ತೆ ! – ಕೇಂದ್ರ ಸರಕಾರದ ಮಾಹಿತಿ

ಭಾರತದಲ್ಲಿ ಕರೋನಾದ ಓಮಿಕ್ರಾನ್‌ನ ೨ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇಬ್ಬರೂ ರೋಗಿಗಳು ಕರ್ನಾಟಕ ರಾಜ್ಯದವರಾಗಿದ್ದಾರೆ. ಇವರಿಬ್ಬರೂ ಪುರುಷರಾಗಿದ್ದು ಒಬ್ಬರು ೪೬ ವರ್ಷ ಮತ್ತು ಇನ್ನೊಬ್ಬರು ೬೬ ವರ್ಷ ವಯಸ್ಸಿನವರಾಗಿದ್ದಾರೆ.

ಜಾಲೋರ (ರಾಜಸ್ಥಾನ) ಇಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ದೇವಸ್ಥಾನದ ವೃದ್ಧ ಅರ್ಚಕರ ಹತ್ಯೆ

ಜಾಲೋರ ಜಿಲ್ಲೆಯ ಧೂಂಬಡಿಯ ಗ್ರಾಮದ ಶ್ರೀ ಹನುಮಾನ ದೇವಸ್ಥಾನದ ೭೦ ವರ್ಷದ ಅರ್ಚಕರಾದ ನೈನದಾಸ ವೈಷ್ಣವ ಇವರನ್ನು ದುಷ್ಕರ್ಮಿಗಳು ಚಾಕುವಿನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.

ಅಸ್ಸಾಂನಲ್ಲಿ ಮತಾಂತರಗೊಂಡ ಕ್ರೈಸ್ತರು ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದಲ್ಲಿ ಕಿತ್ತು ತೆಗೆದಿದ್ದ ಶಿವಲಿಂಗ ಮತ್ತು ತ್ರಿಶೂಲವನ್ನು ಪುನಃ ಸ್ಥಾಪಿಸಿದ ಹಿಂದೂಗಳು !

ಅಸ್ಸಾಂನಲ್ಲಿಯ ಕಛಾರ್ ಜಿಲ್ಲೆಯ ಕಟಿಗೋರಾದಲ್ಲಿ ಮಹಾದೇವ ಟಿಲಾ ಇಲ್ಲಿಯ ಶಿವಲಿಂಗ ಮತ್ತು ತ್ರಿಶೂಲನ್ನು ಕ್ರೈಸ್ತರು ಕಿತ್ತು ತೆಗೆದಿದ್ದರು ಹಾಗೂ ಅವರು ಅಲ್ಲಿ ಆಲದ ವಿಶಾಲವಾದ ಮರವನ್ನು ಕಡಿದಿದ್ದರು.

೨೦೨೧ ರಲ್ಲಿ ದೇಶದಲ್ಲಿ ೫ ಸಾವಿರದ ೫೭೯ ರೈತರ ಆತ್ಮಹತ್ಯೆ

೨೦೨೦ ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ೫ ಸಾವಿರದ ೫೭೯ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮರ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು.