ಅಸ್ಸಾಂನಲ್ಲಿ ಮತಾಂತರಗೊಂಡ ಕ್ರೈಸ್ತರು ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದಲ್ಲಿ ಕಿತ್ತು ತೆಗೆದಿದ್ದ ಶಿವಲಿಂಗ ಮತ್ತು ತ್ರಿಶೂಲವನ್ನು ಪುನಃ ಸ್ಥಾಪಿಸಿದ ಹಿಂದೂಗಳು !

ಗುಹಾಟಿ (ಆಸ್ಸಾಂ) – ಅಸ್ಸಾಂನಲ್ಲಿಯ ಕಛಾರ್ ಜಿಲ್ಲೆಯ ಕಟಿಗೋರಾದಲ್ಲಿ ಮಹಾದೇವ ಟಿಲಾ ಇಲ್ಲಿಯ ಶಿವಲಿಂಗ ಮತ್ತು ತ್ರಿಶೂಲನ್ನು ಕ್ರೈಸ್ತರು ಕಿತ್ತು ತೆಗೆದಿದ್ದರು ಹಾಗೂ ಅವರು ಅಲ್ಲಿ ಆಲದ ವಿಶಾಲವಾದ ಮರವನ್ನು ಕಡಿದಿದ್ದರು. ಈಗ ಹಿಂದೂ ರಕ್ಷಾ ದಳ, ಹಿಂದೂ ಛಾತ್ರ ಸಂಘ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳು ಪುನಃ ಶಿವಲಿಂಗ ಸ್ಥಾಪನೆ ಮಾಡಿ ಪೂಜೆ-ಅರ್ಚನೆ ಮಾಡಲು ಪ್ರಾರಂಭಿಸಿದ್ದಾರೆ ಹಾಗೂ ಅಲ್ಲೇ ಆಲದ ಹೊಸ ಸಸಿಯನ್ನು ನೆಟ್ಟರು.

ಖಾಸಿ ಸಮುದಾಯವು ಕಛಾರ್ ಜಿಲ್ಲೆಯ ಉತ್ತರ ಬರೆಲಿಯಲ್ಲಿ ಬೆಟ್ಟದ ಕೆಳಗಡೆ ವಾಸವಾಗಿದೆ. ಈ ಸಮುದಾಯದಲ್ಲಿ ಹೆಚ್ಚಿನ ಜನರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಇಲ್ಲಿಯ ಹಿಂದೂಗಳು ಮಾಡಿರುವ ಆರೋಪಕ್ಕನುಸಾರ ಖಾಸಿ ಸಮುದಾಯದ ಕ್ರೈಸ್ತ ಧರ್ಮ ಸ್ವೀಕರಿಸಿದ ಜನರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.