ದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ; ಆದರೆ ಯಾವುದೇ ಆಡಳಿತಗಾರರು ಸಮರೋಪಾದಿಯಲ್ಲಿ ಪ್ರಯತ್ನ ಮಾಡಿ ಅದನ್ನು ತಡೆಯಲಿಲ್ಲ, ಇದು ವಾಸ್ತವವಾಗಿದೆ. ಈ ಸ್ಥಿತಿ ಹಿಂದೂ ರಾಷ್ಟ್ರವನ್ನು ಅನಿವಾರ್ಯಗೊಳಿಸುತ್ತದೆ !
ನವ ದೆಹಲಿ – ೨೦೨೦ ನೇ ಇಸವಿಯಲ್ಲಿ ದೇಶದಲ್ಲಿನ ಒಟ್ಟು ೫ ಸಾವಿರದ ೫೭೯ ರೈತರು ವಿವಿಧ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂದು ಕೆಂದ್ರಿಯ ಕೃಷಿ ಸಚಿವ ನರೇಂದ್ರ ತೋಮರ ಇವರು ಸಂಸತ್ತಿನಲ್ಲಿ ಮಾಹಿತಿ ನೀಡಿದರು. ೨೦೧೯ ರಲ್ಲಿ ೫ ಸಾವಿರದ ೯೫೭ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ ೨೦೨೦ ರಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.
ರಾಷ್ಟ್ರೀಯ ಅಪರಾಧ ನೊಂದಣಿ ವಿಭಾಗ ಅಂಕಿಅಂಶಗಳ ಸಂದರ್ಭ ನೀಡುತ್ತಾ ಕೃಷಿ ಸಚಿವ ತೋಮಾರ್ ಇವರು, ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ವಿಶಿಷ್ಟ ಕಾರಣಗಳು ಈ ವಿಭಾಗವು ತಮ್ಮ ವರದಿಯಲ್ಲಿ ನೀಡಿಲ್ಲ. ಆದರೂ ಕೌಟುಂಬಿಕ ಸಮಸ್ಯೆ, ಕಾಯಿಲೆ, ವ್ಯಸನ, ಪ್ರೇಮ ಪ್ರಕರಣ, ವೈವಾಹಿಕ ಸಂಬಂಧ, ನಿರುದ್ಯೋಗ, ವ್ಯವಸಾಯ ಸಮಸ್ಯೆ, ಪರೀಕ್ಷೆಯಲ್ಲಿನ ವೈಫಲ್ಯ, ಆಸ್ತಿ ವಿವಾದ ಇಂತಹ ವಿವಿಧ ಕಾರಣಗಳಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಾಷ್ಟ್ರೀಯ ಅಪರಾಧ ನೋಂದಣಿ ವಿಭಾಗ ವರದಿಯಲ್ಲಿ ಹೇಳಿದೆ.