ಬಂಗಾಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವವರ ಟ್ವಿಟರ್ ಖಾತೆ ತಾತ್ಕಾಲಿಕ ಬಂದ್

ಹೊಸ ಮತ್ತು ಅದೂ ಹಿಂದೂ ಧರ್ಮದವರು ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ ನೇಮಕವಾದರೂ ‘ಟ್ವಿಟರ್’ನಿಂದ ಮುಂದುವರಿದ ಹಿಂದೂದ್ವೇಷ

ಹಿಂದೂಗಳು ಮತ್ತು ಅವರ ಸಂಘಟನೆಯ ಟ್ವಿಟರನ ಹಿಂದೂದ್ವೇಷ ಬಗ್ಗುಬಡಿಯಲು ಸಂಘಟಿತರಾಗಿ ಪ್ರಯತ್ನಿಸಬೇಕು ಹಾಗೂ ಕೇಂದ್ರ ಸರಕಾರವು ಇದರಲ್ಲಿ ಹಸ್ತಕ್ಷೇಪ ಮಾಡಿ ಟ್ವಿಟರನ ಸ್ವಚ್ಛಂದತೆಯನ್ನು ತಡೆಯಲು ಕ್ರಮ ಕೈಗೊಳ್ಳಬೇಕು.

ನವ ದೆಹಲಿ – ಬಂಗಾಲದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಟ್ವಿಟರ್ ಈ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ‘ಸ್ಟೋರೀಸ್ ಆಫ್ ಬಂಗಾಲಿ ಹಿಂದೂಸ್’ ಹೆಸರಿನ ಬಳಕೆದಾರರ ಖಾತೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಖಾತೆಯನ್ನು ಡಾ. ಸಂದೀಪ ದಾಸ್ ಇವರು ನಡೆಸುತ್ತಿದ್ದರು. ಅವರು ಈ ಕ್ರಮದ ಮಾಹಿತಿ ನೀಡಿದರು. ಕಾನೂನು ಉಲ್ಲಂಘಿಸಿದ್ದರಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಹೇಳುತ್ತಿದೆ. ಈ ಮೊದಲು ನವರಾತ್ರಿ ಉತ್ಸವದಲ್ಲಿ ಬಾಂಗ್ಲಾದೇಶದ ಮತಾಂಧರಿಂದ ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯದ ಮಾಹಿತಿ ನೀಡುವ ‘ಇಸ್ಕಾನ್ ಬಾಂಗ್ಲಾದೇಶ’ ಮತ್ತು ‘ಬಾಂಗ್ಲಾದೇಶ ಯುನಿಟಿ ಕೌನ್ಸಿಲ್’ ಈ ಟ್ವಟರ್ ಖಾತೆಗಳನ್ನು ಬಂದ್ ಮಾಡಿತ್ತು.

೧. ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟರ್ ಅನ್ನು ಟೀಕಿಸಲಾಗುತ್ತಿವೆ. ಶಿಕ್ಷಕಿ ಡಾ. ಇಂದು ವಿಶ್ವನಾಥನ್ ಇವರು ಟ್ವಿಟರ್ ನ ಹೊಸ ಮುಖ್ಯ ಕಾರ್ಯಕಾರಿ ಅಧಿಕಾರಿ ಪರಾಗ ಅಗರ್ವಾಲ್ ಇವರನ್ನು ಉದ್ದೇಶಿಸಿ, ಹಿಂದೂಗಳು ಅವರ ಅನುಭವ ಹೇಳುವುದು ಎಂದರೆ ಹಿಂಸೆಯೇ ? ಹಿಂದೂಗಳಿಗೆ ಅಭಿವ್ಯಕ್ತಿ ಸ್ವಾತಂತ್ರದ ವಿಷಯವಾಗಿ ಮಾತನಾಡಲು ಷರತ್ತು ವಿಧಿಸಲಾಗಿದೆಯೇ? ಎಂದು ಟ್ವೀಟ್ ಮಾಡಿದ್ದಾರೆ.
೨. ಕೆಲವರು, ಮುಖ್ಯ ಕಾರ್ಯಕಾರಿ ಅಧಿಕಾರಿ ಹೊಸಬರಾದರೂ ಟ್ವಿಟರನ ಕಾರ್ಯಪದ್ಧತಿಯು ಸರ್ವಾಧಿಕಾರಿ ಪದ್ಧತಿಯಾಗಿದೆ, ಎಂದಿದ್ದಾರೆ.