ದೆಹಲಿಯ ಮಾಲಿನ್ಯವನ್ನು ನಿಯಂತ್ರಿಸಲು ಸರ್ವೋಚ್ಚ ನ್ಯಾಯಾಲಯದಿಂದ ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ೨೪ ತಾಸುಗಳ ಗಡುವು

ನ್ಯಾಯಾಲಯವು ಈ ರೀತಿ ಗಡುವು ನೀಡಬೇಕಾಗುತ್ತದೆ ಎಂದರೆ ಸರಕಾರದಿಂದ ಅಪೇಕ್ಷಿತವಾಗಿರುವಂತಹ ಪ್ರಯತ್ನವಾಗುತ್ತಿಲ್ಲ, ಎಂಬುದು ಸ್ಪಷ್ಟವಾಗುತ್ತದೆ ! ಇದರಿಂದ ದೇಶದ ಪ್ರತಿಯೊಂದು ವಿಷಯವೂ ನ್ಯಾಯಾಲಯವು ಹೇಳದಿದ್ದರೆ ನಡೆಯುವುದಿಲ್ಲ, ಎಂಬಂತಹ ಚಿತ್ರಣ ನಿರ್ಮಾಣವಾಗಿದೆ.

ನವ ದೆಹಲಿ – ಒಂದು ವೇಳೆ ನೀವು ಮಾಲಿನ್ಯವನ್ನು ತಡೆಯಲು ಕ್ರಮ ವಹಿಸದಿದ್ದರೆ ನಾವು ನಾಳೆ ಕಠಿಣ ಕಾರ್ಯಾಚರಣೆ ನಡೆಸುವೆವು. ನಾವು ನಿಮಗೆ ೨೪ ತಾಸುಗಳ ಗಡುವು ನೀಡುತ್ತಿದ್ದೇವೆ. ಈ ಗಡುವಿನೊಳಗೆ ಉಪಾಯ ಹುಡುಕದಿದ್ದರೆ ನಾವು ಹೆಜ್ಜೆಯನ್ನಿಡುವೆವು ಎಂದು ಸರ್ವೋಚ್ಚ ನ್ಯಾಯಾಲಯವು ದೆಹಲಿ ಮತ್ತು ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ. ‘ನಮಗೆ ಯಾವುದೇ ರೀತಿಯ ಕ್ರಮವಹಿಸುತ್ತಿಲ್ಲ’ ಎಂದು ಅನಿಸುತ್ತಿದೆ. ಮಾಲಿನ್ಯ ಮಾತ್ರ ಸತತವಾಗಿ ಹೆಚ್ಚಾಗುತ್ತಲೇ ಇದೆ. ಕೇವಲ ಸಮಯವನ್ನು ಪೋಲು ಮಾಡಲಾಗುತ್ತಿದೆ’, ಎಂಬ ಮಾತುಗಳಲ್ಲಿ ಸರ್ವೋಚ್ಚ ನ್ಯಾಲಾಯಲಯದ ಮುಖ್ಯ ನ್ಯಾಯಾಧೀಶರಾದ ಎನ್.ವೀ. ರಮಣಾರವರು ಸರಕಾರದ ಕಿವಿಹಿಂಡಿದ್ದಾರೆ. ಕಳೆದ ೪ ವಾರಗಳಿಂದ ದೆಹಲಿಯಲ್ಲಿನ ವಾಯು ಮಾಲಿನ್ಯದ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ತನ್ನ ಅಸಮಾಧಾನ ವ್ಯಕ್ತ ಪಡಿಸಿತು.

ದೆಹಲಿ ಸರಕಾರವು ಶಾಲೆಯನ್ನು ಪುನರಾರಂಭಿಸುವ ತೀರ್ಮಾನದ ಬಗ್ಗೆ ನ್ಯಾಯಾಲಯವು ಟೀಕಿಸಿತು. ಶಾಲೆ ಪ್ರಾರಂಭವಾಗಿದ್ದರೂ ಆನ್‌ಲೈನ್ ಶಿಕ್ಷಣದ ಪರ್ಯಾಯ ಕೂಡ ಮಕ್ಕಳಿಗೆ ಲಭ್ಯವಿದೆ; ಆದರೆ ಯಾರಿಗೆ ಮನೆಯಲ್ಲಿರುವ ಇಚ್ಛೆಯಿದೆಯೇ ? ನಮಗೂ ಮಕ್ಕಳೂ ಮೊಮ್ಮಕ್ಕಳೂ ಇದ್ದಾರೆ. ಕೊರೋನಾದ ಸೋಂಕು ಪ್ರಾರಂಭವಾದಾಗಿನಿಂದ ಅವರು ಯಾವ ಸಮಸ್ಯೆಗಳನ್ನೆಲ್ಲಾ ಎದುರಿಸುತ್ತಿದ್ದಾರೆ, ಎಂಬುದು ನಮಗೆ ಗೊತ್ತಿದೆ’, ಎಂದು ಹೇಳುತ್ತಾ ದೆಹಲಿ ಸರಕಾರವನ್ನು ದೂಷಿಸಿತು.

…ಆದರೂ ಕೂಡ ಮಾಲಿನ್ಯ ಏಕೆ ಹೆಚ್ಚಾಗುತ್ತಿದೆ?

ಮಾಲಿನ್ಯವನ್ನು ನಿಯಂತ್ರಿಸಲು ಸರಕಾರವು ಪ್ರಯತ್ನಿಸುತ್ತಿರುವುದಾಗಿ ಹೇಳಿಕೆಯನ್ನು ನ್ಯಾಯಾಲಯವು ಟೀಕಿಸಿತು. ನ್ಯಾಯಾಲಯವು ಈ ಸಮಸ್ಯೆಯ ಮೇಲೆ ಆಲಿಕೆ ಪ್ರಾರಂಭವಾದಾಗ ಕೂಡ ಹವಾಮಾನದ ಒಂದು ವಿಶೇಷ ಗುಣಮಟ್ಟವಿತ್ತು. ಒಂದು ವೇಳೆ ನೀವೇನಾದರೂ ಅಷ್ಟು ಪ್ರಯತ್ನ ಮಾಡಿರುವುದಾಗಿ ಹೇಳುತ್ತಿರುವುದಾದರೆ ಮಾಲಿನ್ಯ ಏಕಿಷ್ಟು ಹೆಚ್ಚಾಗುತ್ತಿದೆ? ಯಾವು ಜನಸಾಮಾನ್ಯನೂ ಇದೇ ಪ್ರಶ್ನೆ ಕೇಳುತ್ತಾನೆ. ನ್ಯಾಯವಾದಿಗಳು ಅನೇಕ ದಾವೆ ಮಾಡುತ್ತಾರೆ ಮತ್ತು ಸರಕಾರವು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಹಾಗಾದರೆ ಇಷ್ಟು ಮಾಲಿನ್ಯವು ಏಕೆ ಹೆಚ್ಚಾಗುತ್ತಿದೆ?, ಎಂದು ನ್ಯಾಯಾಲಯವು ಪ್ರಶ್ನಿಸಿತು.