ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳು ಪಲಾಯನಗೈದರು.- ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಅನ್ಯ ಸ್ಥಳಗಳಲ್ಲಿ ಪಲಾಯನ ಮಾಡಲು ಅನಿವಾರ್ಯವಾಯಿತು.

ತಮಿಳುನಾಡುನಲ್ಲಿ ರಥಯಾತ್ರೆಯ ಸಮಯದಲ್ಲಿ ವಿದ್ಯುತ್ ಅವಘಡದಿಂದ ೧೧ ಜನರ ಸಾವು ಮತ್ತು ೧೫ ಜನರಿಗೆ ಗಾಯ

ಲ್ಲಿಯ ಒಂದು ಧಾರ್ಮಿಕ ರಥಯಾತ್ರೆಯ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ೧೧ ಜನರು ಸಾವನ್ನಪ್ಪಿದ್ದಾರೆ ಮತ್ತು ೧೫ ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಿಗ್ಗಿನ ಜಾವ ೩ ಗಂಟೆಯ ಸಮಯದಲ್ಲಿ ನಡೆದಿದೆ. ರಥಯಾತ್ರೆಯಲ್ಲಿ ರಥದ ಕಳಸ ವಿದ್ಯುತ್ ತಂತಿಗೆ ತಾಗಿದ್ದರಿಂದ ಈ ಘಟನೆ ನಡೆದಿದೆ. ಈ ಅವಘಡದಲ್ಲಿ ೭ ಜನರು ಸಾವನ್ನಪ್ಪಿದ್ದರೆ, ೪ ಜನರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.

ನಲ್ಲೊರ್ (ಆಂಧ್ರಪ್ರದೇಶ)ನಲ್ಲಿ ಹನುಮ ಶೋಭಾಯಾತ್ರೆಯ ಮೇಲೆ ಮತಾಂಧರಿಂದ ಅನಧಿಕೃತ ಮಸೀದಿಯಿಂದ ಕಲ್ಲು ಮತ್ತು ಮದ್ಯದ ಬಾಟಲಿಗಳ ತೂರಾಟ !

ಇಲ್ಲಿ ಏಪ್ರಿಲ್ ೨೪ ರಂದು ಶ್ರೀ ಹನುಮ ಶೋಭಾಯಾತ್ರೆ ನಡೆಸುವಾಗ ಅದರ ಮೇಲೆ ಅನಧಿಕೃತ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಯಿತು. ಹಾಗೂ ಮೆರವಣಿಗೆಯಲ್ಲಿನ ಹನುಮಂತನ ಮೂರ್ತಿಯ ಮೇಲೆ ಮದ್ಯದ ಬಾಟಲಿಗಳನ್ನು ಎಸೆಯಲಾಯಿತು.

ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಮಜಾರ ಮಾಲಿಕತ್ವದ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ

ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ.

ಉತ್ತರಾಖಂಡದಲ್ಲಿ ಆಡಳಿತವು ಹಿಂದೂ ಮಹಾಪಂಚಾಯತಕ್ಕೆ ಅನುಮತಿ ನಿರಾಕರಿಸಿತು !

ಉತ್ತರಾಖಂಡದಲ್ಲಿ ಡಾಡಾ ಜಲಾಲಪೂರ ಎಂಬ ಗ್ರಾಮದಲ್ಲಿ ಆಯೋಜಿಸಲಾದ ಹಿಂದು ಮಹಾಪಂಚಾಯತಕ್ಕೆ ಹರಿದ್ವಾರ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದೆ. ಅಲ್ಲಿ ಅನುಚ್ಛೇದ ೧೪೪ (ಸಂಚಾರ ನಿಶೇಧಾಜ್ಞೆ) ಅನ್ನು ಜಾರಿಗೊಳಿಸಲಾಗಿದೆ.

ಅಲವರನಲ್ಲಿ ಶಿವನ ಮಂದಿರ ಕೆಡವಿದ ವಿರುದ್ಧ ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿ ಸಾಧು-ಸಂತರು ಭಾಗಿ !

ರಸ್ತೆ ಅಗಲಿಕರಣದ ನೆಪದಲ್ಲಿ ರಾಜಗಡದ ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಸ್ಥಾನ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾಧಿಕಾರಿ ಕಚೇರಿಗೆ ‘ಪ್ರತಿಭಟನಾ ಮೆರವಣಿಗೆ’ ನಡೆಸಿತು.

ಸಮಾನ ನಾಗರಿಕ ಸಂಹಿತೆ ಸಂವಿಧಾನಕ್ಕೆ ವಿರುದ್ಧ(ವಂತೆ) ! – ಗದ್ದಲವೆಬ್ಬಿಸಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ !

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಾನ ನಾಗರಿಕ ಸಂಹಿತೆಯು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತ ಅದನ್ನು ವಿರೋಧಿಸಿದೆ. ಉತ್ತರಾಖಂಡ ಸರಕಾರವು ಸಮಾನ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸಿದೆ.

ಉತ್ತರಪ್ರದೇಶದ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ಸ್ಥಾಪನೆ

ಉತ್ತರ ಪ್ರದೇಶದ ಮದರಸಾಗಳ ಆಧುನೀಕರಣದ ಯೋಜನೆಯಲ್ಲಿ ಸಹಭಾಗಿಯಾಗಿರುವ ೭ ಸಾವಿರ ೪೪೨ ಮದರಸಾಗಳ ವಿಚಾರಣೆಗಾಗಿ ಸಮಿತಿ ನೇಮಿಸಲಾಗಿದೆ. ಮೆ ೧೫ ರ ವರೆಗೆ ಸಮಿತಿ ತನ್ನ ವರದಿ ಪ್ರಸ್ತುತ ಪಡಿಸಬೇಕೆಂದು ಹೇಳಲಾಗಿದೆ.

ಭಾಜಪದವರು ಬಡ ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಕಲ್ಲುತೂರಾಟ ಮಾಡಿಸುತ್ತಾರೆ ! – ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪ

ಭಾಜಪದವರು ಬಡ ಮುಸಲ್ಮಾನ ಯುವಕರಿಗೆ ಹಣ ಕೊಟ್ಟು ಅವರಿಂದ ಕಲ್ಲುತೂರಾಟ ನಡೆಸುತ್ತಾರೆ ಎಂಬ ದೂರು ನನ್ನ ಹತ್ತಿರ ಬಂದಿದೆ ಎಂದು ರಾಜ್ಯದ ಕಾಂಗ್ರೆಸ್ ನಾಯಕ ಮತ್ತು ಶಾಸಕ ದಿಗ್ವಿಜಯ್ ಸಿಂಗ್ ಹೇಳಿದರು.

ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಕ್ರೈಸ್ತರಲ್ಲದವರಿಗೆ ಬೈಬಲ್ ಅಧ್ಯಯನವನ್ನು ಕಡ್ಡಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವೆವು ! – ಕರ್ನಾಟಕ ಶಿಕ್ಷಣ ಸಚಿವ

ಇಲ್ಲಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯುವುದು ಕಡ್ಡಾಯಗೊಳಿಸಿರುವುದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರನ್ನು ಭೇಟಿ ಮಾಡಿದರು. ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, “ಕ್ಲಾರೆನ್ಸ ಹೈಸ್ಕೂಲ್ ಗ್ಲಾಸ್ಪೆಲ್ ವಿಷನ್ ಇಂಡಿಯಾದಿಂದ ಅನುದಾನ ಸಿಗುತ್ತದೆ.