(‘ನಾಟೋ’ ಎಂದರೆ ವಿಶ್ವದ 29 ದೇಶಗಳ ಸಹಭಾಗವಿರುವ ಒಂದು ಸೈನ್ಯ ಸಂಘಟನೆ)

ತೆಲ ಅವಿವ/ತೆಹರಾನ/ವಾಷಿಂಗ್ಟನ್ – ಇರಾನ್ ವಿರುದ್ಧದ ದಾಳಿಗಳಲ್ಲಿ ಅಮೆರಿಕಾ ಮತ್ತು ಇಸ್ರೇಲನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಅವುಗಳ ಕೃತ್ಯಗಳಿಗಾಗಿ ಹೊಣೆಗಾರರನ್ನಾಗಿ ಮಾಡಬೇಕು ಎಂಬ ನಿಲುವನ್ನು ಇರಾನ ತಳೆದಿದೆ. ಇರಾನಿನ ವಿದೇಶಾಂಗ ಸಚಿವಾಲಯದ ವಕ್ತಾರರಾದ ಇಸ್ಮಾಯಿಲ ಬಘಾಯಿಯವರು ಮಾತನಾಡಿ, ಇರಾನಿನ ವಿರುದ್ಧದ ಸೈನ್ಯ ಕಾರ್ಯಾಚರಣೆಯಲ್ಲಿ ಇಟಲಿ ಮತ್ತು ರೊಮೇನಿಯಾ ದೇಶಗಳು ಅಮೆರಿಕಾವನ್ನು ಬೆಂಬಲಿಸಿದ್ದವು ಎಂಬುದನ್ನು ನಾಟೋ ಮುಖ್ಯಸ್ಥ ಮಾರ್ಕ್ ರುಟೆಯವರೇ ಸ್ವತಃ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಹಾರ್ಮುಝ ಜಲಸಂಧಿಯಲ್ಲಿ ವ್ಯಾಪಾರಿ ನೌಕೆಯ ಮೇಲೆ ಅಪರಿಚಿತರಿಂದ ದಾಳಿ
ಹಾರ್ಮುಝ ಜಲಸಂಧಿಯಲ್ಲಿ ಒಂದು ವ್ಯಾಪಾರಿ ಹಡಗಿನ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಈ ದಾಳಿಯು ಈ ಹಡಗು ಒಮಾನಿನ ಕರಾವಳಿಯ ಬಳಿಯಲ್ಲಿದ್ದಾಗ ನಡೆದಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ವಿಶ್ವಸಂಸ್ಥೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ ಇರಾನ
ಹಾರ್ಮುಝನ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಹೊಸ ಕಡಲ ಮಾರ್ಗಗಳನ್ನು, ವಿಶೇಷವಾಗಿ ನಿರ್ಗಮನ ಮಾರ್ಗಗಳನ್ನು ಸಿದ್ಧಪಡಿಸುವ ವಿಶ್ವಸಂಸ್ಥೆಯ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ. ನಿಯಮಗಳನ್ನು ಪಾಲಿಸದೆ ಚಲಿಸುವ ನೌಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ ಹೇಳಿದೆ. ಇನ್ನೊಂದೆಡೆ, ಹಾರ್ಮುಝ ಜಲಸಂಧಿಯ ಮೇಲೆ ಯಾವುದೇ ಒಂದು ದೇಶದ ನಿಯಂತ್ರಣವನ್ನು ಅಮೆರಿಕಾ ಒಪ್ಪಿಕೊಳ್ಳುವುದಿಲ್ಲ ಎಂದು ಅಮೆರಿಕಾ ಸ್ಪಷ್ಟಪಡಿಸಿದೆ.
ಲೆಬನಾನನಲ್ಲಿ ಇಸ್ರೇಲಿನ ದಾಳಿ ಮುಂದುವರಿದಿದೆಯೇ ?
ಲೆಬನಾನನ ನಬಾತಿಹನ ಬಳಿ ಕಾರೊಂದರ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಹೇಳಲಾಗುತ್ತಿದೆ; ಆದರೆ ಇಸ್ರೇಲ್ ಸೇನೆಯು ಮಾತ್ರ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !
ಕೆನಡಾದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ. ೬೦ ರಷ್ಟು ಕುಸಿತ!
‘ಭಾರತವು ಔಷಧಗಳ ಪೆಟ್ಟಿಗೆಯಲ್ಲಿ ಅಫ್ಘಾನಿಸ್ತಾನಕ್ಕೆ ಡ್ರೋನ್ಗಳನ್ನು ಕಳುಹಿಸಿದೆ!’(ಯಂತೆ)
ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 235 ಮಂದಿ ಸಾವು!
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast