ಕೇರಳದಲ್ಲಿ ವಲಸಿಗರನ್ನು ನೆಲೆಸುವಂತೆ ಮಾಡಲು ದೊಡ್ಡ ಜಾಲವೊಂದು ಸಕ್ರಿಯವಾಗಿರುವ ಬಗ್ಗೆ ತನಿಖೆ

ಕೊಚ್ಚಿ (ಕೇರಳಮ್) – ಜೂನ್ ೨೫ ರಂದು ಕೊಚ್ಚಿ ಸಮೀಪದ ಏರೂರ್, ತ್ರಿಪುನಿತುರಾದಲ್ಲಿ ಕೇರಳಮ್ ಪೊಲೀಸ್, ಭಯೋತ್ಪಾದನಾ ನಿರೋಧಕ ದಳ (ATS) ಮತ್ತು ಭಾರತೀಯ ನೌಕಾಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ೬ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಲಾಗಿದೆ. ಇಲ್ಲಿನ ಎರಡು ಬಾಡಿಗೆ ಮನೆಗಳಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು. ಬಂಧಿತ ವಲಸಿಗರನ್ನು ಮೇದಿ ಹಸನ್ (೩೨ ವರ್ಷ), ಮಹಮ್ಮದ್ ಅಸೀಮ್ (೩೯ ವರ್ಷ), ತಾರಿಕ್ (೨೧ ವರ್ಷ), ಸೋಖಿರ್ (೧೭ ವರ್ಷ), ಮಹಮ್ಮದ್ ಸೊಹೇಲ್ (೩೩ ವರ್ಷ) ಮತ್ತು ಮಹಮ್ಮದ್ ಮಿಜಾನ್ ಎಂದು ಗುರುತಿಸಲಾಗಿದೆ. ಇವರು ಗುಜರಿ (ಭಂಗಾರ) ಆಯುವ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ವಾಸಿಸಲು ಅಗತ್ಯವಿರುವ ಯಾವುದೇ ದಾಖಲೆಗಳು ಅಥವಾ ಕಾನೂನುಬದ್ಧ ಅನುಮತಿ (ಪಾಸ್‌ಪೋರ್ಟ್) ಇವರ ಬಳಿ ಇರಲಿಲ್ಲ. ಇಂತವರು ನೆಲೆಸುವಂತೆ ಮಾಡುವಲ್ಲಿ ಯಾವುದಾದರೂ ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದೆಯೇ?, ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದಕ್ಕೂ ಮುನ್ನಾದಿನ, ಅಂದರೆ ಜೂನ್ ೨೪ ರಂದು ಕೇರಳಮ್ ಭಯೋತ್ಪಾದನಾ ನಿರೋಧಕ ದಳವು ೧೯ ವರ್ಷದ ಮೊಶಿಯುರ್ ಖಾನ್ ಅಲಿಯಾಸ್ ಅಮನ್ ಖಾನ್ ಎಂಬಾತನನ್ನು ಬಂಧಿಸಿತ್ತು. ಆತ ಇಲ್ಲಿನ ‘ಕರುನಾಗಪಲ್ಲಿ ಪುತೆಂತೆರುವು ಮುಸ್ಲಿಂ ಜಮಾತ್ ಮಸೀದಿ’ಯ ಅಡಿಯಲ್ಲಿ ಬರುವ ‘ಶರಿಯತುಲ್ ಇಸ್ಲಾಂ ಮದರಸಾ’ದಲ್ಲಿ ನೆಲೆಸಿ ಶಿಕ್ಷಣ ಪಡೆಯುತ್ತಿದ್ದನು. ಅಧಿಕಾರಿಗಳು ಆತನಿಂದ ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ನಕಲಿ ಭಾರತೀಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸಾವಿರಾರು ಬಾಂಗ್ಲಾದೇಶಿ ವಲಸಿಗರಿರುವ ಭೀತಿ !
ಕಳೆದ ಕೆಲವು ತಿಂಗಳುಗಳಿಂದ ಕೇರಳಮ್‌ದಲ್ಲಿ ಬಾಂಗ್ಲಾದೇಶಿ ವಲಸಿಗರು ವಾಸಿಸುತ್ತಿರುವ ಸುದ್ದಿಗಳು ಮುಂಚೂಣಿಗೆ ಬರುತ್ತಿವೆ. ಈ ವಲಸಿಗರು ರೆಸ್ಟೋರೆಂಟ್‌ಗಳನ್ನು ನಡೆಸುವುದು, ಮದರಸಾಗಳಲ್ಲಿ ಶಿಕ್ಷಣ ಪಡೆಯುವುದು, ಕೂಲಿ ಕೆಲಸ ಮಾಡುವುದು ಮುಂತಾದ ಕೆಲಸಗಳಲ್ಲಿ ತೊಡಗಿರುವುದು ಕಂಡುಬಂದಿದೆ. ಕೇರಳಮ್‌ದಲ್ಲಿ ಅಂದಾಜು ೩೫ ರಿಂದ ೪೦ ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಇವರು ಭಾರತದ ೨೫ ರಾಜ್ಯಗಳಿಂದ ಬಂದವರಾಗಿದ್ದಾರೆ. ಕೇವಲ ಪೆರುಂಬಾವೂರಿನಲ್ಲೇ ಈ ವಲಸಿಗರ ಸಂಖ್ಯೆ ೧ ಲಕ್ಷದಿಂದ ೧.೫ ಲಕ್ಷದಷ್ಟಿರಬಹುದೆಂದು ಅಂದಾಜಿಸಲಾಗಿದೆ. ಭಾಷೆಯ ಸಾಮ್ಯತೆಯಿಂದಾಗಿ ಯಾರು ಭಾರತೀಯರು ಮತ್ತು ಯಾರು ಬಾಂಗ್ಲಾದೇಶದವರು ಎಂಬುದನ್ನು ಗುರುತಿಸುವುದು ಕಷ್ಟವಾಗಿರುವುದರಿಂದ, ಇವರಲ್ಲಿ ಸಾವಿರಾರು ಬಾಂಗ್ಲಾದೇಶಿ ವಲಸಿಗರು ಸೇರಿದ್ದಾರೆಂದು ಕೇರಳಮ್‌ದ ಜನರು ಹೇಳುತ್ತಾರೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ನಿಮ್ಮ ಬಳಿ ಸಮವಸ್ತ್ರ ಇದೆ ಎಂದಮಾತ್ರಕ್ಕೆ ನೀವು ಏನು ಬೇಕಾದರೂ ಮಾಡಬಹುದೇ?
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!