ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿಕೆ!

ಗೋಪಾಲಗಂಜ್ (ಬಾಂಗ್ಲಾದೇಶ) – ಜಿಲ್ಲೆಯ ಕಾಶಿಯಾನಿಯಲ್ಲಿ ಅಲ್ಪಸಂಖ್ಯಾತ ಹಿಂದೂ ಕುಟುಂಬದ ೪ ಸದಸ್ಯರ ಮೇಲೆ ದಾಳಿ ನಡೆದಿರುವ ಬಗ್ಗೆ ‘ಬಾಂಗ್ಲಾದೇಶ ಮೈನಾರಿಟಿ ವಾಚ್’ ಸಂಸ್ಥೆ ಮಾಹಿತಿ ನೀಡಿದೆ. ರಾಷ್ಟ್ರೀಯ ಚುನಾವಣೆಯಲ್ಲಿ ಮತದಾನ ಮಾಡುವ ವಿಷಯವಾಗಿ ನೆರೆಹೊರೆಯ ಮುಸ್ಲಿಂ ಕುಟುಂಬದೊಂದಿಗೆ ನಡೆದಿದ್ದ ಹಳೆಯ ವಿವಾದವೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ. ನೆರೆಹೊರೆಯಲ್ಲಿ ವಾಸಿಸುವ ಅಜಿಬರ್ ಮೊಲ್ಲಾ ಎಂಬ ಯೂನಿಯನ್ ಪರಿಷತ್ ಸದಸ್ಯನು ತನ್ನ ಸಹಚರರೊಂದಿಗೆ ಸೇರಿಕೊಂಡು, ದೊಣ್ಣೆಗಳು ಮತ್ತು ಸ್ಥಳೀಯ ಮಾರಕಾಸ್ತ್ರಗಳಿಂದ ಹಿಂದೂ ಕುಟುಂಬದ ಮೇಲೆ ದಾಳಿ ಮಾಡಿದ್ದಾನೆ.
ಈ ಘಟನೆಯು ಗೋಪಾಲಗಂಜ್ ಜಿಲ್ಲೆಯ ಕಾಶಿಯಾನಿ ಉಪಜಿಲ್ಲೆಯ ಬೆಥುರಿ ಯೂನಿಯನ್ ವ್ಯಾಪ್ತಿಯ ರಾಮಡಿಯಾ ಈಸ್ಟ್ ಪಾರಾ ಗ್ರಾಮದಲ್ಲಿ ಜೂನ್ ೨೫ ರ ಮಧ್ಯಾಹ್ನ ನಡೆದಿದೆ. ಗಾಯಗೊಂಡವರಲ್ಲಿ ಕ್ಷಿತೀಶ್ ಬಿಸ್ವಾಸ್ (ವಯಸ್ಸು ೬೫ ವರ್ಷ), ಅವರ ಪತ್ನಿ ತುಳಸಿ ಬಿಸ್ವಾಸ್ (ವಯಸ್ಸು ೫೦ ವರ್ಷ), ಮಗಳು ಇತಿ ರಾಣಿ ಬಿಸ್ವಾಸ್ (ವಯಸ್ಸು ೩೦ ವರ್ಷ), ಮತ್ತು ಅವರ ಮೊಮ್ಮಗ ದೇವ್‌ರಾಜ್ ಬಿಸ್ವಾಸ್ (ವಯಸ್ಸು ೧೫ ವರ್ಷ) ಸೇರಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಲಾಗಿದೆ.
ಭಾರತ-ಬಾಂಗ್ಲಾದೇಶ ಗಡಿಯಲ್ಲಿ ನುಸುಳುಕೋರರನ್ನು ಹಿಮ್ಮೆಟ್ಟಿಸುವಾಗ ಬಾಂಗ್ಲಾದೇಶದಿಂದ ಭಾರಿ ವಿರೋಧ
ಫ್ರಾನ್ಸ್ನಲ್ಲಿ ತೀವ್ರ ಬಿಸಿಲಿನಿಂದಾಗಿ ಎಸಿ(ಎರ್ ಕಂಡಿಶನ್)ಗಳನ್ನು (ಎಸಿ, ಏರ್ ಕಂಡೀಶನರ್) ಖರೀದಿಸಲು ಅಂಗಡಿಗಳಲ್ಲಿ ಭಾರಿ ಜನಸಂದಣಿ
ಚೀನಾ ದೇಶವು ಭಾರತವನ್ನು ಪಾಕಿಸ್ತಾನ, ಶ್ರೀಲಂಕಾ ಮತ್ತು ಈಗ ಬಾಂಗ್ಲಾದೇಶದ ಬಂದರುಗಳ ಮೂಲಕ ಸುತ್ತುವರಿದಿದೆ!
ಮಾಜಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಸಹೋದರನ ಅಂತ್ಯಕ್ರಿಯೆಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರರು!
US-Iran Ceasefire : ಇರಾನ್ ವ್ಯಾಪಾರಿ ನೌಕೆಯ ಮೇಲೆ ನಡೆಸಿದ ದಾಳಿಯ ನಂತರ ಇರಾನ್ನ ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾದಿಂದ ದಾಳಿ
ಯುದ್ಧದಲ್ಲಿ ಅಮೆರಿಕಾವನ್ನು ಬೆಂಬಲಿಸುವ ‘ನಾಟೋ’ ಸದಸ್ಯ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ! – ಇರಾನ