ಉತ್ತರಾಖಂಡದಲ್ಲಿ ಆಡಳಿತವು ಹಿಂದೂ ಮಹಾಪಂಚಾಯತಕ್ಕೆ ಅನುಮತಿ ನಿರಾಕರಿಸಿತು !

ಕಾಲಿ ಸೇನೆಯ ರಾಜ್ಯ ಸಂಯೋಜಕರಾದ ಸ್ವಾಮೀ ದಿನೆಶಾನಂದ ಭಾರತೀಯವರ ಬಂಧನ

ಡೆಹರಾಡೂನ (ಉತ್ತರಾಖಂಡ) – ಉತ್ತರಾಖಂಡದಲ್ಲಿ ಡಾಡಾ ಜಲಾಲಪೂರ ಎಂಬ ಗ್ರಾಮದಲ್ಲಿ ಆಯೋಜಿಸಲಾದ ಹಿಂದು ಮಹಾಪಂಚಾಯತಕ್ಕೆ ಹರಿದ್ವಾರ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದೆ. ಅಲ್ಲಿ ಅನುಚ್ಛೇದ ೧೪೪ (ಸಂಚಾರ ನಿಶೇಧಾಜ್ಞೆ) ಅನ್ನು ಜಾರಿಗೊಳಿಸಲಾಗಿದೆ. ಈ ಮಹಾಪಂಚಾಯತ್ತಿನ ಸಿದ್ಧತೆಗಾಗಿ ತಲುಪಿದ ಕಾಲಿ ಸೇನೆಯ ರಾಜ್ಯ ಸಂಯೋಜಕರಾದ ಸ್ವಾಮಿ ದಿನೇಶಾನಂದ ಭಾರತಿ ಹಾಗೂ ಅವರ ೬ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಪಂಚಾಯತ್ತಿಗೋಸ್ಕರ ಹಾಕಲಾದ ಡೇರೆಯನ್ನು ಕೂಡ ಪೊಲೀಸರು ತೆಗೆದು ಹಾಕಿದ್ದಾರೆ.

೧. ಇದೇ ಗ್ರಾಮದಲ್ಲಿ ಏಪ್ರಿಲ ೧೬ ರಂದು ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮತಾಂಧರು ಕಲ್ಲು ತೂರಾಟ ನಡೆಸಿದ್ದರು. ‘ಈ ಪ್ರಕರಣದಲ್ಲಿ ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಲಿಲ್ಲ’, ಎಂದು ಕಾಲಿ ಸೇನೆಯು ಆರೋಪಿಸಿತ್ತು. ಅದಕ್ಕಾಗಿ ಅವರು ಏಪ್ರಿಲ ೨೭ ರಂದು ಹಿಂದು ಮಹಾಪಂಚಾಯತವನ್ನು ಆಯೋಜಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಸ್ವಾಮಿ ದಿನೆಶಾನಂದ ಭಾರತಿಯವರು ಅಲ್ಲಿಗೆ ತಲುಪಿದ್ದರು.

೨. ಆಡಳಿತವು, ಈ ಮಹಾಪಂಚಾಯತಿನಲ್ಲಿ ಪ್ರಚೋದನಕಾರಿ ಭಾಷಣಯಾಗುವ ಸಾಧ್ಯತೆಯಿಂದ ಅದಕ್ಕೆ ಅನುಮತಿಯನ್ನು ನಿರಾಕರಿಸಲಾಯಿತು ಹಾಗೂ ಅಲ್ಲಿ ಸಂಚಾರನಿಶೇಧಾಜ್ಞೆಯನ್ನು ಜಾರಿಗೊಳಿಸಲಾಯಿತು. ಅಲ್ಲಿನ ವಾತಾವರಣವನ್ನು ಹಾಳುಮಾಡುವ ಪ್ರಯತ್ನವನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಉತ್ತರಾಖಂಡದಲ್ಲಿ ಭಾಜಪದ ಸರಕಾರವಿರುವಾಗ ಈ ರೀತಿಯಲ್ಲಿ ಅನುಮತಿಯನ್ನು ನಿರಾಕರಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !