ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಮಜಾರ ಮಾಲಿಕತ್ವದ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ

ಕಾಗದಪತ್ರಗಳಿಲ್ಲದೆ ಹೋದರೆ ಮಜಾರನ್ನು ತೆಗೆದುಹಾಕಲಾಗುವುದು !

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ಆಗ್ರಾ ಕ್ಯಾಂಟ ರೈಲು ನಿಲ್ದಾಣದಲ್ಲಿರುವ ಬಾಬಾ ಭೂರೆ ಶಾಹ ಮಜಾರ್ ಕಟ್ಟಡದ ಮಾಲಿಕತ್ವದ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಆಡಳಿತವು ನೋಟಿಸ್ ಕಳುಹಿಸಲಾಗಿದೆ. ಮೇ ೧೩ ರವರೆಗೂ ಆ ದಾಖಲೆಗಳನ್ನು ಸಲ್ಲಿಸುವಂತೆ ಹೇಳಲಾಗಿದೆ. ಅನಂತರ ಅದರೆ ಮೇಲೆ ಅಕ್ರಮ ಕಟ್ಟಡವೆಂದು ಕ್ರಮ ಕೈಗೊಳ್ಳಬೇಕೇ ಅಥವಾ ಇಲ್ಲವೇ, ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಈಗ ಮಜಾರ್‌ನ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಜ್ಜಾದಾ ನಾಶಿನರವರಿಗೆ ಈ ನೊಟೀಸ ಅನ್ನು ಕಳುಹಿಸಲಾಗಿದೆ.

(ಸೌಜನ್ಯ : VK News)

ರೈಲ್ವೆಗೆ ಸೇರಿದ ಜಮೀನಿನ ಮೇಲಿರುವ ನೂರೀ ಮಸೀದಿಗೆ ಮತ್ತೊಂದು ನೊಟೀಸನ್ನು ಕಳುಹಿಸಲಾಗಿದೆ. ಮಸೀದಿಯ ಇಮಾಮನಿಗೆ ಕಳುಹಿಸಲಾದ ನೊಟೀಸ್‌ನಲ್ಲಿ, ಈ ಮಸೀದಿಯು ರೈಲ್ವೆಗೆ ಸೇರಿದ ಜಮೀನಿನ ಮೇಲೆ ಅಕ್ರಮವಾಗಿ ಕಟ್ಟಲಾಗಿದ್ದು ಅದನ್ನು ತೆಗೆದು ಹಾಕುವುದು ಅಗತ್ಯವಾಗಿದೆ. ಈ ಮಸೀದಿಯನ್ನು ತೆಗೆದು ಹಾಕಿ ಅದನ್ನು ಬೇರೆಯ ಕಡೆ ಸ್ಥಳಾಂತರಗೊಳಿಸಲಾಗುವುದು. (ಮಸೀದಿಯೇ ಅಕ್ರಮವಾಗಿರುವಾಗ ಅದನ್ನು ಮತ್ತೊಂದು ಕಡೆ ಏಕೆ ಸ್ಥಳಾಂತರಗೊಳಿಸಬೇಕು ? ಒಂದು ವೇಳೆ ಆಡಳಿತವು ಹಾಗೆ ಮಾಡಿದರೆ, ಯಾರು ತಮ್ಮ ಮನೆಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದಾರೋ ಅವರೂ ಕೂಡ ಬೇರೆಯ ಕಡೆ ಮನೆ ನೀಡುವಂತೆ ಬೇಡಿಕೆ ಮಾಡುತ್ತಾರೆ. ಇದರ ಒಂದು ಪರಂಪರೆ ನಿರ್ಮಾಣವಾಗುವುದು, ‘ಅಕ್ರಮವಾದ ಮನೆ ಕಟ್ಟಿ ಹಾಗೂ ಸಕ್ರಮ ಮನೆಗಳನ್ನು ಪಡೆಯಿರಿ !’ – ಸಂಪಾದಕರು)

ಸಂಪಾದಕೀಯ ನಿಲುವು

ಇಷ್ಟು ವರ್ಷಗಳವರೆಗೂ ಅಲ್ಲಿ ಮಜಾರ್ ಇದ್ದರೂ ಈ ಮೊದಲು ಈ ರೀತಿಯ ಪ್ರಯತ್ನವನ್ನು ಆಡಳಿತವು ಏಕೆ ಮಾಡಲಿಲ್ಲ ? ಈ ಮಜಾರನ್ನು ರೈಲು ನಿಲ್ದಾಣದಲ್ಲಿ ಹೇಗೆ ಕಟ್ಟಲಾಯಿತು ? ಅದಕ್ಕೆ ಯಾರು ಹೊಣೆ ? ಎಂಬ ಬಗ್ಗೆ ಕೂಡ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಬೇಕು !