ಭಾಜಪ ಸರಕಾರವು ಮಧ್ಯಾಹ್ನದ ಬಿಸಿಯೂಟ ಪೂರೈಸುವ ಗುತ್ತಿಗೆಯನ್ನು ‘ಇಸ್ಕಾನ್’ಗೆ ನೀಡಿದೆ
ಬಂಗಾಳದ ಮೇಲೆ ಶಾಖಾಹಾರಿ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂದು ವಿರೋಧ ಪಕ್ಷಗಳ ಟೀಕೆ

ಕೊಲಕಾತಾ (ಬಂಗಾಳ) – ‘ಇಸ್ಕಾನ್’ ಈ ಆಧ್ಯಾತ್ಮಿಕ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿರುವುದರಿಂದ ಬಂಗಾಳದಲ್ಲಿ ವಿವಾದ ಸೃಷ್ಟಿಯಾಗಿದೆ. ವಿರೋಧ ಪಕ್ಷಗಳು ‘ಭಾಜಪ ಬಂಗಾಳದಲ್ಲಿ ಶಾಖಾಹಾರಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿವೆ. ಕೊಲಕಾತಾ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ಸಿದ್ಧಪಡಿಸುವ ಗುತ್ತಿಗೆಯನ್ನು ‘ಇಸ್ಕಾನ್’ಗೆ ನೀಡಲು ರಾಜ್ಯದ ನೂತನ ಭಾಜಪ ಸರಕಾರವು ನಿರ್ಧರಿಸಿದೆ. ಈ ಕಾರಣದಿಂದ ಇನ್ನು ಮುಂದೆ ಮೊಟ್ಟೆ ನೀಡುವುದನ್ನು ನಿಲ್ಲಿಸಲಾಗುವುದು. ಮೊಟ್ಟೆಯ ಬದಲಾಗಿ ಈಗ ಪನೀರ್, ರಾಜಮಾ, ಸೋಯಾಬೀನ್ ಮತ್ತು ಹಾಲಿನ ಉತ್ಪನ್ನಗಳಂತಹ ಶಾಖಾಹಾರಿ ಪರ್ಯಾಯಗಳನ್ನು ನೀಡಲಾಗುವುದು.
ವಿರೋಧ ಪಕ್ಷಗಳ ವಾದ!
ವಿರೋಧ ಪಕ್ಷದ ನಾಯಕ ಋತುಬ್ರತ್ ಬ್ಯಾನರ್ಜಿ ಅವರು ಮೊಟ್ಟೆ ನಿಷೇಧಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಬಂಗಾಳಿ ಮಕ್ಕಳು ತಲೆಮಾರುಗಳಿಂದ ಪ್ರಾಣಿಜನ್ಯ ಪ್ರೊಟೀನ್ ತಿಂದು ಬೆಳೆದಿದ್ದಾರೆ, ಆದ್ದರಿಂದ ಪೋಷಕಾಂಶದ ಯೋಜನೆಯು ಸ್ಥಳೀಯ ಆಹಾರ ಸಂಸ್ಕೃತಿಗೆ ಅನುಗುಣವಾಗಿಯೇ ಇರಬೇಕು” ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ಸಿನ ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್ ಅವರೂ ಸಹ ಸರಕಾರವು ಕಲ್ಯಾಣ ಯೋಜನೆಯ ಮಾಧ್ಯಮದಿಂದ ಶಾಖಾಹಾರವನ್ನು ಹೇರುತ್ತಿದೆ ಎಂದು ಆರೋಪಿಸಿದ್ದಾರೆ.
Controversy in Kolkata as ISKCON removes eggs from school midday meals; opposition claims ‘vegetarian culture’ is being imposed.
Why were non-veg items even served in schools?
Children can eat what they want at home. This opposition is clearly deliberate.
#Kolkata #ISKCON… pic.twitter.com/gBehf1j79W
— Sanatan Prabhat (@SanatanPrabhat) June 27, 2026
ಸರಕಾರದ ಸಮರ್ಥನೆ
ಇನ್ನೊಂದೆಡೆ ಮುಖ್ಯಮಂತ್ರಿ ಶುಭೇಂದು ಅಧಿಕಾರಿಯವರು ವಿಧಾನಸಭೆಯಲ್ಲಿ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾ, “ಮಕ್ಕಳಿಗೆ ಗುಣಮಟ್ಟದ ಮತ್ತು ಸ್ವಚ್ಛವಾದ ಆಹಾರವನ್ನು ಖಚಿತಪಡಿಸುವುದೇ ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ. ಯಾರ ಮೇಲೂ ಧಾರ್ಮಿಕ ನಂಬಿಕೆಯನ್ನು ಹೇರುತ್ತಿಲ್ಲ” ಎಂದು ಹೇಳಿದ್ದಾರೆ. ಪೋಷಕಾಂಶಗಳನ್ನು ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ನಿರ್ಧರಿಸಬೇಕೇ ಹೊರತು, ಆಹಾರದಲ್ಲಿ ಮೊಟ್ಟೆ ಇದೆಯೇ ಇಲ್ಲವೇ ಎಂಬುವುದರ ಮೇಲಲ್ಲ ಎಂದು ಶಾಲಾ ಶಿಕ್ಷಣ ಸಚಿವ ದೀಪಕ ಬರ್ಮನ್ ತಿಳಿಸಿದ್ದಾರೆ.
ಶಾಖಾಹಾರಿ ಆಹಾರ ಬಂಗಾಳಕ್ಕೆ ಹೊಸದೇನಲ್ಲ! – ಇಸ್ಕಾನ್ ಅಭಿಪ್ರಾಯ
ಇಸ್ಕಾನ್‌ನ ಕೊಲಕಾತಾ ಉಪಾಧ್ಯಕ್ಷ ರಾಧಾರಮಣ ದಾಸ್ ಅವರು, “ಸಂಸ್ಥೆಯು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ 12 ಲಕ್ಷ ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸುತ್ತಿದೆ. ಬಂಗಾಳದಲ್ಲಿ ಪಾಲಿಸಲಾಗುವ ‘ಗೌಡೀಯ ವೈಷ್ಣವ’ ಪರಂಪರೆಯೂ ಸಹ ಇದೇ ಮಣ್ಣಿನದ್ದಾಗಿರುವುದರಿಂದ ಶಾಖಾಹಾರಿ ಆಹಾರವು ಬಂಗಾಳಕ್ಕೆ ಹೊಸದೇನಲ್ಲ, ಹಾಗೆಯೇ ಬೇಳೆಕಾಳುಗಳು ಮತ್ತು ಸೋಯಾಬೀನ್‌ನಿಂದಲೂ ಅಗತ್ಯವಿರುವ ಪ್ರೊಟೀನ್ ದೊರೆಯುತ್ತದೆ” ಎಂದು ಹೇಳಿದ್ದಾರೆ.
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)