ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!

ಮೈಸೂರು – ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ದಾನ ಕಳ್ಳತನದ ಕುರಿತು ಪ್ರತಿಕ್ರಿಯೆ ನೀಡುತ್ತಾ ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಶ್ರೀ. ಅರುಣ ಯೋಗಿರಾಜ ಅವರು, “ಈ ಘಟನೆಯಿಂದ ದೇಶ-ವಿದೇಶಗಳ ಕೋಟ್ಯಂತರ ಭಕ್ತರಿಗೆ ತೀವ್ರ ಆಘಾತವಾಗಿದೆ” ಎಂದು ಹೇಳಿದರು. ಅಯೋಧ್ಯೆಯ ತಮ್ಮ ಸ್ವಂತ ಅನುಭವವನ್ನು ವಿವರಿಸುತ್ತಾ ಅವರು, ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಪದಾಧಿಕಾರಿಗಳು, ವಿಶೇಷವಾಗಿ ಪ್ರಧಾನ ಕಾರ್ಯದರ್ಶಿ ಶ್ರೀ. ಚಂಪತ ರಾಯ್ ಅವರನ್ನು ಬೆಂಬಲಿಸಿದರು. “ಚಂಪತ ರಾಯ್ ಅವರು ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಯ ಪ್ರತೀಕವಾಗಿದ್ದಾರೆ” ಎಂದು ಶ್ರೀ. ಯೋಗಿರಾಜ ಹೇಳಿದರು. “ಈ ಪ್ರಕರಣದಲ್ಲಿ ತನಿಖೆಯ ನಂತರ ಸತ್ಯ ಹೊರಬರಲಿದೆ” ಎಂದೂ ಅವರು ತಿಳಿಸಿದರು.