ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಕ್ರೈಸ್ತರಲ್ಲದವರಿಗೆ ಬೈಬಲ್ ಅಧ್ಯಯನವನ್ನು ಕಡ್ಡಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವೆವು ! – ಕರ್ನಾಟಕ ಶಿಕ್ಷಣ ಸಚಿವ

ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣ ಸಚಿವರಲ್ಲಿ ಮನವಿ !

ಬೆಂಗಳೂರು – ಇಲ್ಲಿನ ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯುವುದು ಕಡ್ಡಾಯಗೊಳಿಸಿರುವುದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯು ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಇವರನ್ನು ಭೇಟಿ ಮಾಡಿದರು. ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು, “ಕ್ಲಾರೆನ್ಸ ಹೈಸ್ಕೂಲ್ ಗ್ಲಾಸ್ಪೆಲ್ ವಿಷನ್ ಇಂಡಿಯಾದಿಂದ ಅನುದಾನ ಸಿಗುತ್ತದೆ. ಈ ಗ್ಲಾಸ್ಪೆಲ್ ಇಂಡಿಯಾ ಮತಾಂತರದ ಚಟುವಟಿಕೆಯಲ್ಲಿ ಭಾಗಿಯಾಗಿದೆ. ಮತ್ತು ಬೆಂಗಳೂರಿನಲ್ಲಿ ಬಹಳಷ್ಟೂ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಹಬ್ಬ ಹರಿದಿನಗಳಲ್ಲಿ ಅಂದರೆ ಗಣೇಶ ಚರ್ಥುರ್ತಿ, ನವರಾತ್ರಿ ಹಾಗೂ ದೀಪಾವಳಿ ಬಂದಾಗಲೇ ಪರೀಕ್ಷೆಯನ್ನು ಇಡುವ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು. ಕ್ರೈಸ್ತರಲ್ಲದವರಿಗೆ ಬೈಬಲ್ ಕಲಿಕೆಯು ಕಡ್ಡಾಯಗೊಳಿಸಿದ ವಿರುದ್ಧ ಬಿ.ಸಿ. ನಾಗೇಶ ಇವರಿಗೆ ಮನವಿಯನ್ನು ನೀಡಲಾಯಿತು. ನಾಗೇಶ ಇವರು ಈ ಕುರಿತು ಅನಿಖೆಯ ಆದೇಶವನ್ನು ನೀಡಿದ್ದಾರೆ. ವರದಿ ಬಂದ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವೆವು, ಎಂದು ಆಶ್ವಾಸನೆಯನ್ನೂ ನೀಡಿದರು.”

ಶ್ರೀ. ಮೋಹನ ಗೌಡ ತಮ್ಮ ಮಾತನ್ನು ಮುಂದುವರೆಸುತ್ತಾ, ರಾಷ್ಟ್ರೀಯ ಮಕ್ಕಳ ಆಯೋಗದ ಜಿಲ್ಲಾಧಿಕಾಯವರನ್ನು ಕ್ಲಾರೆನ್ಸ ಪ್ರಕಣದಲ್ಲಿ ಕಾನೂನಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾಧಿಕಾರಿ ಅದೇ ರೀತಿ ಶಿಕ್ಷಣ ಸಚಿವರಿಂದ ಕ್ರಮಕ್ಕಾಗಿ ಕಾದು ನೋಡುತ್ತಿದ್ದೇವೆ. ತದನಂತರ ನಾವು ನ್ಯಾಯಾಂಗ ಹೋರಾಟ ಮಾಡುವವರಿದ್ದೇವೆ, ಕೇವಲ ಕ್ಲಾರೆನ್ಸ್ ಹೈಸ್ಕೂಲ್ ಮಾತ್ರವಲ್ಲದೇ ರಾಜ್ಯಾದಂತ್ಯ ಎಲ್ಲಾ ಕಾನ್ವೆಂಟ್ ಶಾಲೆಗಳಲ್ಲಿ ಮತಾಂತರ ಅಥವಾ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಸುವುದು ನಡೆಯುತ್ತಿದೆಯೇ, ಈ ರೀತಿಯ ಎಲ್ಲಾ ಅಂಶಗಳನ್ನು ವಿಚಾರಣೆ ನಡೆಸಬೇಕು ಅದೆಲ್ಲವೂ ನಿಲ್ಲಬೇಕು ಹಾಗೂ ‘ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು’ ಎಂದು ಶ್ರೀ. ಮೋಹನ ಗೌಡ ಇವರು ಒತ್ತಾಯಿಸಿದ್ದಾರೆ.