ತಂಜಾವೂರು (ತಮಿಳನಾಡು) – ಇಲ್ಲಿಯ ಒಂದು ಧಾರ್ಮಿಕ ರಥಯಾತ್ರೆಯ ಸಮಯದಲ್ಲಿ ನಡೆದಿರುವ ಅಪಘಾತದಲ್ಲಿ ೧೧ ಜನರು ಸಾವನ್ನಪ್ಪಿದ್ದಾರೆ ಮತ್ತು ೧೫ ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಿಗ್ಗಿನ ಜಾವ ೩ ಗಂಟೆಯ ಸಮಯದಲ್ಲಿ ನಡೆದಿದೆ. ರಥಯಾತ್ರೆಯಲ್ಲಿ ರಥದ ಕಳಸ ವಿದ್ಯುತ್ ತಂತಿಗೆ ತಾಗಿದ್ದರಿಂದ ಈ ಘಟನೆ ನಡೆದಿದೆ. ಈ ಅವಘಡದಲ್ಲಿ ೭ ಜನರು ಸಾವನ್ನಪ್ಪಿದ್ದರೆ, ೪ ಜನರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು.
Tamil Nadu: 11 dead during chariot procession in Thanjavur; #PMModi announces Rs 2 lakh for kin of deceased@mkstalin #tamilnadu #rathyatra #deaths https://t.co/UwyNzGDLrF
— NewsExpress (@NEWSEXPRESS) April 27, 2022
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿಂಗ್ ಇವರು ಈ ಅವಘಡದ ಕುರಿತು ಸಂಪಾತ ಸೂಚಿಸಿದ್ದಾರೆ. ಮೃತರ ಸಂಬಂಧಿಕರಿಗೆ ೫ ಲಕ್ಷ ರೂಪಾಯಿ ಆರ್ಥಿಕ ಸಹಾಯ ಘೋಷಿಸಿದ್ದಾರೆ. ಹಾಗೂ ಪ್ರಧಾನಿ ಮೋದಿ ಇವರೂ ಕೂಡ ‘ಪ್ರಧಾನಿ ಸಹಾಯ ನಿಧಿ’ಯಿಂದ ಮೃತರ ಸಂಬಂಧಿಕರಿಗೆ ೨ ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ೫೦ ಸಾವಿರ ರೂಪಾಯಿ ಸಹಾಯ ಘೋಷಿಸಿದ್ದಾರೆ. ರಾಜ್ಯ ಸರಕಾರ ಈ ಘಟನೆಯ ವಿಚಾರಣೆ ನಡೆಸಲು ಆದೇಶ ನೀಡಿದೆ.