ಕೇಂದ್ರ ಸರಕಾರವನ್ನು ಟೀಕಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು – ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ (AI), ಅತ್ಯಾಧುನಿಕ ಸೆಮಿಕಂಡಕ್ಟರ್ ಮತ್ತು ಡೀಪ್-ಟೆಕ್ ದಿಕ್ಕಿನಲ್ಲಿ ವೇಗವಾಗಿ ಮುನ್ನಡೆಯುತ್ತಿದೆ. ಆದಾಗ್ಯೂ, ಭಾರತದ ಹೆಮ್ಮೆಯ ಪ್ರಮುಖ ಐಐಟಿ ಶೈಕ್ಷಣಿಕ ಸಂಸ್ಥೆಗಳನ್ನು ಪುನರ್ಜನ್ಮ, ಜ್ಯೋತಿಷ್ಯಶಾಸ್ತ್ರ ಮತ್ತು ಗೋ-ವಿಜ್ಞಾನದಂತಹ ವಿಷಯಗಳ ಕುರಿತು ಸಂಶೋಧನೆ ನಡೆಸಲು ಸರಕಾರವು ಒತ್ತಾಯಿಸುತ್ತಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಅವರು ಮಾತು ಮುಂದುವರೆಸಿ, “ಮೋದಿ ನೇತೃತ್ವದ ಕೇಂದ್ರ ಸರಕಾರವು ‘ಕೌ-ಪಥಿ’ (ಗೋ ಆಧಾರಿತ ಉತ್ಪನ್ನಗಳ ವಿಜ್ಞಾನ) ಸಂಶೋಧನೆಗಾಗಿ 98 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ದೇಶದ ಪ್ರತಿಷ್ಠಿತ ಐಐಟಿ ಸಂಸ್ಥೆಗಳಲ್ಲಿ ವಿಜ್ಞಾನದ ಹೆಸರಿನಲ್ಲಿ ಪುರಾಣಗಳನ್ನು ಕಲಿಸಲಾಗುತ್ತಿದೆ. ಇದು ಕಳವಳಕಾರಿಯಾಗಿದೆ. ನಮ್ಮ ಇತಿಹಾಸ, ಪರಂಪರೆ ಅಥವಾ ಪ್ರಾಚೀನ ಜ್ಞಾನ ಪದ್ಧತಿಗಳನ್ನು ಅಧ್ಯಯನ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ; ಆದರೆ ಇಂತಹ ಹುಸಿ ವಿಜ್ಞಾನ ಅಥವಾ ಮೂಢನಂಬಿಕೆಯನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸುತ್ತಿರುವುದು ನಿಜವಾದ ಸಮಸ್ಯೆಯಾಗಿದೆ” ಎಂದು ಹೇಳಿದರು. (ಭಾರತದ ಪ್ರಾಚೀನ ಜ್ಞಾನ ಪದ್ಧತಿಗಳನ್ನು ಯಾವುದೇ ಆಧಾರವಿಲ್ಲದೆ ಮೂಢನಂಬಿಕೆ ಎಂದು ಕರೆಯುವುದು ಮೂಢನಂಬಿಕೆಯಲ್ಲವೇ? ಈ ಜ್ಞಾನ ಪದ್ಧತಿಗಳು ಹುಸಿ ವಿಜ್ಞಾನ ಎಂದು ಹೇಳಲು ಯಾವ ವೈಜ್ಞಾನಿಕ ಆಧಾರವಿದೆ? – ಸಂಪಾದಕರು) ಪ್ರತಿಷ್ಠಿತ ಐಐಟಿಗಳೊಳಗೆ ರಹಸ್ಯವಾಗಿ ನುಸುಳುತ್ತಿರುವ ಇಂತಹ ಪ್ರವೃತ್ತಿಗಳು ದೇಶದ ವೈಜ್ಞಾನಿಕ ಪ್ರಗತಿಯನ್ನು ಕುಂಠಿತಗೊಳಿಸುವಂತಿವೆ ಎಂದು ಅವರು ಅಭಿಪ್ರಾಯಪಟ್ಟರು.
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!