ಕಾನೂನುಬಾಹಿರ ಬಂಧನ: ಪೊಲೀಸರಿಗೆ ಹೈಕೋರ್ಟ್ ತರಾಟೆ

ಬೆಂಗಳೂರು – ನಾವು ಕಾನೂನನ್ನು ಲೆಕ್ಕಿಸದೆ ಏನು ಬೇಕಾದರೂ ಮಾಡಬಹುದೆಂದು ಪೊಲೀಸರು ಭಾವಿಸುತ್ತಾರೆಯೇ? ಒಬ್ಬ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವುದು ಆಟವೇ? ಒಂದು ವೇಳೆ ಅಪರಾಧ ನಡೆದಿದ್ದರೆ, ಖಂಡಿತವಾಗಿಯೂ ಅವನನ್ನು ಕಾನೂನಿನ ಪ್ರಕಾರ ಜೈಲಿಗೆ ಕಳುಹಿಸಿ, ಎಂದು ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಪತ್ನಿಯ ದೂರಿನ ಮೇರೆಗೆ ದಾಖಲಾದ ವಂಚನೆ ಪ್ರಕರಣದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ ಮತ್ತು ಬಾಗಲೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದೆ.
ದೂರು ನೀಡಿದ ಪತಿಯನ್ನು ಇಷ್ಟೊಂದು ಗಡಿಬಿಡಿಯಲ್ಲಿ ಯಾಕೆ ಬಂಧಿಸಲಾಯಿತು?
ವಂಚನೆ ಪ್ರಕರಣದ ಬಗ್ಗೆ ದೂರು ನೀಡಿದ ಪತಿಯನ್ನು ಇಷ್ಟೊಂದು ಗಡಿಬಿಡಿಯಲ್ಲಿ ಏಕೆ ಬಂಧಿಸಲಾಯಿತು? ಪತ್ನಿ ದೂರು ದಾಖಲಿಸಿದ ತಕ್ಷಣ ಪತಿಯನ್ನು ಜೈಲಿಗೆ ಕಳುಹಿಸಬೇಕೇ? ವಂಚನೆ ಪ್ರಕರಣದಲ್ಲಿ ನೀವು ಆತನನ್ನು ಜೈಲಿಗೆ ಕಳುಹಿಸಬಹುದೇ? ಪತಿ-ಪತ್ನಿಯರ ನಡುವಿನ ಪಾಲುದಾರಿಕೆಯಲ್ಲಿ (ಪಾರ್ಟ್‌ನರ್‌ಶಿಪ್) ವಂಚನೆಯಾಗಿದೆ ಎಂಬ ಆರೋಪವಿದೆ. ಹಾಗಿದ್ದಾಗ ಕೇವಲ ಪತಿ ಮಾತ್ರ ಯಾಕೆ ಪೊಲೀಸ್ ಕಸ್ಟಡಿಯಲ್ಲಿದ್ದಾನೆ? ಎಂದು ನ್ಯಾಯಾಲಯ ಪ್ರಶ್ನಿಸಿತು.
ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ ಪೊಲೀಸ್ ಠಾಣೆಯ ಹೊಸ ಮುಖ್ಯಸ್ಥ !
ಮೂರು ತಿಂಗಳಿಗೂ ಹೆಚ್ಚು ಕಾಲ ತನಿಖಾಧಿಕಾರಿ ಯಾವುದೇ ವಿಶೇಷ ತನಿಖೆ ನಡೆಸಿರಲಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಇದರ ನಂತರ ಪೊಲೀಸ್ ಠಾಣೆಯ ಹೊಸ ಮುಖ್ಯಸ್ಥರು ಅಧಿಕಾರ ವಹಿಸಿಕೊಂಡರು ಮತ್ತು ಈ ಪ್ರಕರಣದಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದರು. ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ಈ ಅಧಿಕಾರಿ ನೋಟಿಸ್ ನೀಡಿದ್ದರು ಮತ್ತು ಆತ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ, ಪ್ರಕರಣ ದಾಖಲಾದ ನಾಲ್ಕು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತರ ಆತನನ್ನು ಜೈಲಿನಲ್ಲಿಟ್ಟರು. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕಾನೂನು ಸ್ಪಷ್ಟವಾಗಿದೆ; ಬಂಧನ ಎಂಬುದು ಕೊನೆಯ ಆಯ್ಕೆಯಾಗಿರಬೇಕು, ವಿಶೇಷವಾಗಿ ಏಳು ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯ ನಿಬಂಧನೆ ಇರುವ ಅಪರಾಧಗಳಲ್ಲಿ ಇದು ಅನ್ವಯಿಸುತ್ತದೆ.
ಏನಿದು ಪ್ರಕರಣ?
ಡಿಸೆಂಬರ್ ೧೯, ೨೦೨೫ ರಂದು ಈ ಪ್ರಕರಣ ದಾಖಲಾಗಿತ್ತು. ಪತ್ನಿಯ ನಕಲಿ ಸಹಿ ಮಾಡಿ, ಪಾಲುದಾರಿಕೆ ಪತ್ರ(ಪಾರ್ಟ್‌ನರ್‌ಶಿಪ್ ಡೀಡ್) ಸೃಷ್ಟಿಸಿ, ಆಕೆಗೆ ತಿಳಿಯದಂತೆ ಪತಿ ‘ಕರೆಂಟ್ ಅಕೌಂಟ್’ ತೆರೆದಿದ್ದಾನೆ ಎಂಬ ಆರೋಪವಿತ್ತು. ಪ್ರಕರಣ ದಾಖಲಾದ ಮೂರು ತಿಂಗಳಿಗೂ ಹೆಚ್ಚು ಕಾಲ ಯಾವುದೇ ಗಂಭೀರ ತನಿಖೆ ನಡೆದಿರಲಿಲ್ಲ ಮತ್ತು ನಂತರ ಇದ್ದಕ್ಕಿದ್ದಂತೆ ಆರೋಪಿಯನ್ನು ಬಂಧಿಸಲಾಯಿತು.
ಬಿಸೂರ (ಸಾಂಗ್ಲಿ) ಇಲ್ಲಿ ಮತಾಂಧರ ಕಿರುಕುಳದಿಂದ ಗ್ರಾಮದಿಂದ ಪಲಾಯನ ಮಾಡಲು ಸಿದ್ಧತೆಯಲ್ಲಿ 10 ಹಿಂದೂ ಕುಟುಂಬಗಳು !
ಕೊಚ್ಚಿ (ಕೇರಳಮ್) : ೬ ಬಾಂಗ್ಲಾದೇಶಿ ವಲಸಿಗರ ಬಂಧನ !
ಇಸ್ಲಾಂ ಧರ್ಮ ಸ್ವೀಕರಿಸಿದ ತಕ್ಷಣ ‘ಹಿಂದುಳಿದ ವರ್ಗದ ಮುಸ್ಲಿಂ’ ಸ್ಥಾನಮಾನ ಸಿಗುವುದಿಲ್ಲ!
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಕೊಲಕಾತಾ: ‘ಇಸ್ಕಾನ್’ ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಯನ್ನು ಕೈಬಿಟ್ಟಿದ್ದಕ್ಕೆ ವಿವಾದ!
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ