ಧನಬಾದ (ಜಾರ್ಖಂಡ) – ‘ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್’ ಸಂಸ್ಥೆಯ ಉದ್ಯೋಗಿಯಾಗಿದ್ದ ತಂದೆಯ ಹತ್ಯೆ ಮಾಡಿ, ಅವರ ಜಾಗದಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಯತ್ನಿಸಿದ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಗನು ತಂದೆಯ ಹತ್ಯೆಗಾಗಿ ಇಬ್ಬರಿಗೆ ಸುಪಾರಿ (ಹಣದ ಆಮಿಷ) ನೀಡಿದ್ದನು. ಪೊಲೀಸರು ಅವರನ್ನೂ ಸಹ ಬಂಧಿಸಿದ್ದಾರೆ.
ಧನಬಾದ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಸ್. ಮಹಮ್ಮದ ಯಾಕೂಬ ರವರು ಮಾಹಿತಿ ನೀಡಿ, ಮೃತ ತುಲೇಶ್ವರ್ ನೋನಿಯಾರವರ ಮಗ ವಿಜಯ ಚೌಹಾಣ ಸೇರಿದಂತೆ ಅಮಿತ ಸಿಂಗ ಮತ್ತು ಅಖಿಲೇಶ ಮಲ್ಲಾಹ ಎಂಬ ಇಬ್ಬರು ಬಾಡಿಗೆ ಕೊಲೆಗಡುಕರನ್ನು ಈ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ನೋನಿಯಾರವರು ಬರೋರಾದ ಕಲ್ಲಿದ್ದಲು ಗಣಿಯಲ್ಲಿ ಕಾರ್ಮಿಕರಾಗಿದ್ದರು. ಅವರ ನಿವೃತ್ತಿಗೆ ಕೇವಲ ೨ ವರ್ಷಗಳು ಉಳಿದಿದ್ದವು. ಅವರ ಮಗ ವಿಜಯ್ ಚೌಹಾಣ್‌ಗೆ ತಂದೆಯ ಮರಣದ ನಂತರ ಅನುಕಂಪದ ಆಧಾರದಲ್ಲಿ ಗಣಿಯಲ್ಲಿ ಖಾಯಂ ಕೆಲಸ ಪಡೆಯುವ ಆಸೆಯಿತ್ತು. ಇದಕ್ಕಾಗಿ ಅವನು ತಂದೆಯನ್ನು ಮುಗಿಸಲು ಸಂಚು ರೂಪಿಸಿದ್ದನು ಎಂದು ಪೋಲಿಸರು ತಿಳಿಸಿದ್ದಾರೆ. ಚೌಹಾಣನು ತಂದೆಯ ಹತ್ಯೆಗಾಗಿ ತನ್ನ ಸಹಚರರಿಗೆ ೧೦ ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದನು; ಆದರೆ ಹತ್ಯೆಗೆ ಮುನ್ನ ಯಾವುದೇ ಮುಂಗಡ ಹಣವನ್ನು ನೀಡಿರಲಿಲ್ಲ.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News