ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!

ಪ್ರಭು ಶ್ರೀರಾಮನನ್ನು ‘ತಾಲಿಬಾನಿ’ ಎಂದು ಸಂಬೋಧನೆ

ಬೀದರ್ – ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಕನ್ನೇರಿ ‘ಶ್ರೀಗಳ’ ನೇತೃತ್ವದಲ್ಲಿ ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಕ್ಕಿದ್ದು, ಅದು ಜೂನ್ 28 ರಂದು ನಡೆಯಲಿದೆ. ಈ ಮಧ್ಯೆ, ಕೆಲವು ಸಮಾಜಘಾತುಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಭು ಶ್ರೀರಾಮನಿಗೆ ಅವಮಾನ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಶ್ರೀರಾಮ ಮತ್ತು ಜಗದ್ಗುರು ರೇಣುಕಾಚಾರ್ಯರ ವಿರುದ್ಧ ಪ್ರಚೋದನಕಾರಿ ವಿಷಯವನ್ನು ಹರಿಬಿಟ್ಟು, ಅವರನ್ನು ‘ತಾಲಿಬಾನಿ’ ಎಂದು ಸಂಬೋಧಿಸಲಾಗಿದೆ. ಹಿಂದುತ್ವನಿಷ್ಠ ನಾಯಕ ಕೃಷ್ಣ ಗೋಣೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಸವಕಲ್ಯಾಣ ನಗರದ ಅಕ್ಕಮಹಾದೇವಿ ಕಾಲೇಜಿನ ಆವರಣದಲ್ಲಿ ‘ಬಸವಾದಿ ಶಿವಶರಣ ಮಹಾಹಿಂದು ಸಮಾವೇಶ’ವನ್ನು ಆಯೋಜಿಸಲಾಗಿದೆ. ಈ ಸಮಾವೇಶಕ್ಕಾಗಿ ಕನ್ನೇರಿ ‘ಶ್ರೀಗಳ’ ಆಗಮನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ‘ಬಸವಪರ ಸಂಘಟನೆ ಒಕ್ಕೂಟ’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯ ಮೂಲಕ ಶ್ರೀರಾಮ ಮತ್ತು ರೇಣುಕಾಚಾರ್ಯರ ವಿರುದ್ಧ ಈ ರೀತಿಯಾಗಿ ಟೀಕೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಹಿಂದೂ ದೇವತೆಗಳ ಬಗ್ಗೆ ಯಾರೇ ಆದರೂ ಏನೇನೋ ಮಾತನಾಡುತ್ತಾರೆ; ಆದರೆ ಮುಸ್ಲಿಮರ ಧಾರ್ಮಿಕ ನಂಬಿಕೆಗಳ ವಿಷಯದಲ್ಲಿ ಯಾರೂ ತುಟಿ ಬಿಚ್ಚುವುದಿಲ್ಲ. ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿನ ಈ ಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ!