ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಅನುಭವಿಸಿದ ಸೋಲನ್ನು ನೆನಪಿಸಿಕೊಳ್ಳಲಿ !

ಬಲೂಚ್ ಮುಖಂಡನಿಂದ ಪಾಕಿಸ್ತಾನಕ್ಕೆ ಮೂಡಿಸಿದ ಅರಿವು !

ಬಲೂಚಿಸ್ತಾನದ ಮಾಜಿ ಮುಖ್ಯಮಂತ್ರಿ ಅಖ್ತರ್ ಮೆಂಗಲ್

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನವು 1971 ರಲ್ಲಿ ಭಾರತದಿಂದ ಎದುರಿಸಿದ ಭೀಕರ ಸೋಲನ್ನು ನೆನಪಿಸಿಕೊಳ್ಳಬೇಕು ಎಂದು ಬಲೂಚಿಸ್ತಾನದ ಮಾಜಿ ಮುಖ್ಯಮಂತ್ರಿ ಅಖ್ತರ್ ಮೆಂಗಲ್ ಅವರು ಪಾಕಿಸ್ತಾನಕ್ಕೆ ನೆನಪಿಸಿಕೊಟ್ಟಿದ್ದಾರೆ. ಬಲೂಚಿಸ್ತಾನದ ನಾಗರಿಕರನ್ನು ಪಾಕಿಸ್ತಾನವು ಬಲವಂತವಾಗಿ ಅಪಹರಿಸುತ್ತಿರುವುದು ಮತ್ತು ಅಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ಮೆಂಗಲ್ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಮೆಂಗಲ್ ಮಾತು ಮುಂದುವರಸಿ, ನಾವು ನಿಮ್ಮ (ಪಾಕಿಸ್ತಾನದ) ಬುದ್ಧಿವಂತಿಕೆಯನ್ನು 1971 ರಲ್ಲೇ ನೋಡಿದ್ದೇವೆ, ಯಾವಾಗ ನೀವು ಮಂಡಿಯೂರಿ ಢಾಕಾದಲ್ಲಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟಿದ್ದಿರೋ ಆಗಲೇ ಅದು ತಿಳಿಯಿತು. 1971 ರ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ಢಾಕಾದಲ್ಲಿ ಭಾರತದ ಎದುರು ಶರಣಾಯಿತು ಮತ್ತು ಬಾಂಗ್ಲಾದೇಶ ಒಂದು ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. 90 ಸಾವಿರ ಪಾಕಿಸ್ತಾನಿ ಸೈನಿಕರು ಢಾಕಾದಲ್ಲಿ ಎಂತಹ ಅವಮಾನಕರ ಸ್ಥಿತಿಯಲ್ಲಿ ಶರಣಾಗತರಾದರು ಎಂಬುದು ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನವು ಇದನ್ನು ತನ್ನ ಇತಿಹಾಸದ ಪುಸ್ತಕಗಳಲ್ಲಿ ಕಲಿಸಬೇಕು. ಅವರು ಮಕ್ಕಳಿಗೆ, ಢಾಕಾದಲ್ಲಿ ನಮ್ಮ ಸೈನಿಕರ ಕೇವಲ ಶಸ್ತ್ರಾಸ್ತ್ರಗಳಷ್ಟೇ ಉಳಿಯಲಿಲ್ಲ, ಬದಲಿಗೆ ಅವರ ಪ್ಯಾಂಟುಗಳೂ ಅಲ್ಲೇ ನೇತಾಡುತ್ತಿದ್ದವು, ಎಂದು ಹೇಳಬೇಕು, ಎಂದು ಹೇಳಿದರು.