
ಪ್ಯಾರಿಸ್ (ಫ್ರಾನ್ಸ್) – ಯುರೋಪ್‌ನಲ್ಲಿ ಪ್ರಸ್ತುತ ಭೀಕರ ಉಷ್ಣತೆಯ ಅಲೆ (ಹೀಟ್‌ವೇವ್) ಬೀಸುತ್ತಿದೆ. ತಾಪಮಾನವು ೪೦° ಸೆಲ್ಸಿಯಸ್ ಗಿಂತಲೂ ಅಧಿಕವಾಗಿದೆ. ಈಗ ಫ್ರಾನ್ಸ್‌ನ ರಾಬೇರಿ ನಗರದಲ್ಲಿ ಎಸಿ(ಎರ್ ಕಂಡಿಶನ್)ಗಳನ್ನು ಖರೀದಿಸಲು ಜನ ಮುಗಿಬೀಳುತ್ತಿರುವ ವಿಡಿಯೋ ಒಂದು ಮುನ್ನೆಲೆಗೆ ಬಂದಿದೆ. ಈ ವಿಡಿಯೋದಲ್ಲಿ, ಅಂಗಡಿಯ ಬಾಗಿಲು ತೆರೆಯುತ್ತಿದ್ದಂತೆ ಹೊರಗೆ ಕಾಯುತ್ತಿದ್ದ ಜನರು ನೇರವಾಗಿ ಒಳಗೆ ಓಡುತ್ತಿರುವುದು ಕಾಣಿಸುತ್ತದೆ. ಎಸಿ ಮತ್ತು ಕೂಲರ್ ಪಡೆಯಲು ಗ್ರಾಹಕರ ನಡುವೆ ಅಕ್ಷರಶಃ ಪೈಪೋಟಿ ಆರಂಭವಾಯಿತು. ಕೆಲವೇ ಕ್ಷಣಗಳಲ್ಲಿ ಸ್ಟೋರ್ ಒಳಗಡೆ ದೊಡ್ಡ ಗೊಂದಲ ಉಂಟಾಯಿತು. ಜನರು ಒಬ್ಬರನ್ನೊಬ್ಬರು ಪಕ್ಕಕ್ಕೆ ತಳ್ಳಿ ಎಸಿ(ಎರ್ ಕಂಡಿಶನ್) ಬಾಕ್ಸ್‌ಗಳನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಈ ವಿಡಿಯೋದಿಂದ ಫ್ರಾನ್ಸ್‌ನಲ್ಲಿನ ಬಿಸಿಲಿನ ತೀವ್ರತೆ ಎಷ್ಟು ಭೀಕರವಾಗಿದೆ ಎಂಬುದನ್ನು ಅಂದಾಜು ಮಾಡಬಹುದು.
Europe is hitting a scorching 40°C+, and France’s historic resistance to air conditioning is officially melting away. 🥵
Viral videos show massive, "Black Friday" style crowds rushing stores just to grab AC units as the intense heatwave disrupts daily life.
From strict… pic.twitter.com/4Yw08LQcom
— Sanatan Prabhat (@SanatanPrabhat) June 27, 2026
ಯುರೋಪ್‌ನ ಇತರೆ ದೇಶಗಳ ಪರಿಸ್ಥಿತಿ
ಕೇವಲ ಫ್ರಾನ್ಸ್ ಮಾತ್ರವಲ್ಲದೆ, ಬ್ರಿಟನ್, ಇಟಲಿ ಮತ್ತು ಸ್ಪೇನ್‌ನಂತಹ ಯುರೋಪ್‌ನ ಇತರ ದೇಶಗಳಿಗೂ ಈ ಬಿಸಿಗಾಳಿಯ ತೀವ್ರ ಹೊಡೆತ ಬಿದ್ದಿದೆ. ಈ ದೇಶಗಳಲ್ಲಿ ಸಾಮಾನ್ಯವಾಗಿ ಇಷ್ಟು ದೀರ್ಘಾವಧಿಯ ಮತ್ತು ತೀವ್ರವಾದ ಬಿಸಿಲು ಇರುವುದಿಲ್ಲ; ಆದರೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈಗ ಯುರೋಪ್‌ನಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಾಗರಿಕರಿಗೆ ತಂಪು ನೀಡುವ ಉಪಕರಣಗಳ ಆಸರೆ ಪಡೆಯುವುದನ್ನು ಬಿಟ್ಟು ಬೇರೆ ಯಾವುದೇ ಪರ್ಯಾಯ ಆಯ್ಕೆ ಇಲ್ಲದಂತಾಗಿದೆ.
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !
ದಕ್ಷಿಣ ಆಫ್ರಿಕಾದಲ್ಲಿ ೧೭ ಸಾವಿರ ಹಿಂದೂಗಳಿಂದ ಒಂದೆಡೆ ಸೇರಿ ಹನುಮಾನ್ ಚಾಲೀಸಾ ಪಠಣ!
ಹೋರ್ಮುಜ್ ಜಲಸಂಧಿಯಲ್ಲಿ ಎರಡು ತೈಲ ಟ್ಯಾಂಕರ್ಗಳಲ್ಲಿ ಸ್ಫೋಟ : Hormuz Oil Tanker Explosion
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
ಭಾರತಕ್ಕೆ ಹಿನ್ನಡೆ? ತೀಸ್ತಾ ಯೋಜನೆ ಚೀನಾದ ಪಾಲು : Teesta Project to China